ಸೋಮವಾರ, ಸೆಪ್ಟೆಂಬರ್ 20, 2021
21 °C

ಚಿಕ್ಕನಾಯಕನಹಳ್ಳಿ: ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕನಾಯಕನಹಳ್ಳಿ: (ತುಮಕೂರು ಜಿಲ್ಲೆ): ತಾಲ್ಲೂಕಿನ ಗೋಡೇಕೆರೆ ಮಠದ ಸ್ಥಿರ ಪಟ್ಟಾಧ್ಯಕ್ಷ ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ (65) ಭಾನುವಾರ ಬೆಳಗ್ಗೆ ತೀವ್ರ ಹೃದಯಾಘಾತದಿಂದ ಮಠದಲ್ಲಿಯೇ ಮೃತಪಟ್ಟರು.

ಗೋಡೆಕೆರೆಯಲ್ಲಿ ಸಿದ್ದರಾಮೇಶ್ವರರ ತೋರುಗದ್ದುಗೆ‌ (ತಪೋನುಷ್ಠಾನ ಮಾಡಿದ ಸ್ಥಳ) ಇದ್ದು ಈ ಗದ್ದುಗೆಯೇ ಮಠವಾಗಿ ಪ್ರವರ್ಧಮಾನಕ್ಕೆ ಬಂದಿತ್ತು. ತೋರು ಗದ್ದುಗೆಯ ಕಾರಣದಿಂದ ಜಿಲ್ಲೆಯ ಪ್ರಮುಖ ಮಠವಾಗಿಯೂ ಇದು ಗುರುತಿಸಿಕೊಂಡಿತ್ತು.

ತಿಪಟೂರು ತಾಲ್ಲೂಕಿನ ಕೆ ಬಿ ಕ್ರಾಸ್ ಶಾಖಾ ಮಠದಲ್ಲಿ ರಂಭಾಪುರಿ ವಿದ್ಯಾಸಂಸ್ಥೆಯನ್ನು ಸ್ವಾಮೀಜಿ ಮುನ್ನಡೆಸುತ್ತಿದ್ದರು.

ಸ್ವಾಮೀಜಿ ಅವರು 1965 ರಲ್ಲಿ‌ ಮಠದ ಅಧ್ಯಕ್ಷತೆ ವಹಿಸಿಕೊಂಡರು. ನಾಳೆ ಕ್ರಿಯಾ ಸಮಾಧಿ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.