ತುಮಕೂರು: ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುವ ಸ್ಥಳಗಳಲ್ಲಿ ನಾಮಫಲಕಗಳನ್ನು ಶೀಘ್ರ ಮತ್ತು ಕಡ್ಡಾಯ ಅಳವಡಿಸಲು ಗುತ್ತಿಗೆದಾರರಿಗೆ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಸೂಚಿಸಿದ್ದಾರೆ.

ತುಮಕೂರು ಸ್ಮಾರ್ಟ್ ಸಿಟಿಯಿಂದ ಹಕೊಂಡಿರುವ ವಿವಿಧ ಕಾಮಗಾರಿಗಳು ಹಾಗೂ ವಿವಿಧ ಇಲಾಖೆಗಳಿಂದ ಬೇರೆ ಬೇರೆ ಕಾಮಗಾರಿಗಳನ್ನು ಏಕಕಾಲದಲ್ಲಿ ನಿರ್ವಹಿಸುತ್ತಿರುವುದರಿಂದ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿವೆ. ಬೇರೆ ಇಲಾಖೆಯ ಕಾಮಗಾರಿ ಆಗಿದ್ದರೂ ಸ್ಮಾರ್ಟ್ ಸಿಟಿ ಕಾಮಗಾರಿಗಳೆಂದು ಬಿಂಬಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿಯ ಹಲವು ಕಾಮಗಾರಿಗಳ ಸ್ಥಳದಲ್ಲಿ ನಿರ್ವಹಿಸುತ್ತಿರುವ ಗುತ್ತಿಗೆದಾರರ ವಿವರ, ಯೋಜನೆಯಲ್ಲಿ ಏನೇನು ಬರಲಿದೆ, ಯಾವ ಪ್ರದೇಶದಲ್ಲಿ ಯಾವ ಕೆಲಸ ಕಾರ್ಯಗತವಾಗಲಿದೆ, ಯೋಜನೆಯ ಮೊತ್ತ, ಪ್ರಸ್ತುತ ಸ್ಥಿತಿಗತಿ, ಕಾಮಗಾರಿಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿದೆ ಇರಬೇಕೆಂದು ಅವರು ತಿಳಿಸಿದ್ದಾರೆ.

ಸ್ಮಾರ್ಟ್ ರೋಡ್ ಅಭಿವೃದ್ಧಿ ಮತ್ತು ರೋಡ್ ಶೋಲ್ಡರ್ ಅಭಿವೃದ್ಧಿ ಕಾಮಗಾರಿಗಳ 500 ಮೀಟರ್ಗಿಂತಲೂ ಕಡಿಮೆ ಉದ್ದದ ರಸ್ತೆಗಳಲ್ಲಿ ಒಂದು ನಾಮಫಲಕ ಮತ್ತು ಉದ್ದದ ರಸ್ತೆಗಳಲ್ಲಿ ಪ್ರತಿ 500 ಮೀಟರ್ಗೆ ಒಂದು ನಾಮಫಲಕ ಕಡ್ಡಾಯವಾಗಿ ಅಳವಡಿಸಬೇಕು. ಸ್ಮಾರ್ಟ್ ಸಿಟಿ ಕಾಮಗಾರಿಗಳು ಶೀಘ್ರವಾಗಿ ಪೂರ್ಣಗೊಳ್ಳಲು ಮತ್ತು ಉತ್ತಮ ಗುಣಮಟ್ಟದಲ್ಲಿ ಅನುಷ್ಠಾನಗೊಳ್ಳಲು ಸಾರ್ವಜನಿಕರು ಸಹಕರಿಸಬೇಕು ಎಂದು ಆಯುಕ್ತರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.