ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕನಾಯಕನಹಳ್ಳಿ | ಹಿರಿಯ ನಾಗರಿಕರಿಗೆ ಕ್ರೀಡಾಕೂಟ

Published 14 ಆಗಸ್ಟ್ 2023, 4:02 IST
Last Updated 14 ಆಗಸ್ಟ್ 2023, 4:02 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: 76ನೇ ವರ್ಷದ ಸ್ವಾತಂತ್ರ್ಯೋತ್ಸವ ಅಂಗವಾಗಿ ಪಟ್ಟಣದ ರೋಟರಿ, ಇನ್ನರ್‌ವ್ಹೀಲ್‌ ಕ್ಲಬ್‌ನಿಂದ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಭಾನುವಾರ 60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು.

50 ಮೀಟರ್ ನಡಿಗೆ, ನಾಣ್ಯ ಚಿಮ್ಮುವುದು, ನೋಟುಗಳ ಕಟ್ಟಿನ ಮೌಲ್ಯ ಅಂದಾಜು ಮಾಡುವುದು, ಪುರುಷರಿಗೆ ಗುಂಡು ಎಸೆತ, ಮಹಿಳೆಯರಿಗೆ ಬಕೆಟ್‍ಗೆ ರಿಂಗ್ ಹಾಕುವುದು ಹಾಗೂ ಮಡಿಕೆ ಒಡೆಯುವ ಸ್ಪರ್ಧೆ ನಡೆಸಲಾಯಿತು.

ಹಿರಿಯ ವಕೀಲ ದಿ. ಸೀತಾರಾಮಯ್ಯ ಜ್ಞಾಪಕಾರ್ಥ ಹಿರಿಯ ಆದರ್ಶ ದಂಪತಿ ಸ್ಪರ್ಧೆ ನಡೆದು ವಿಜೇತರಿಗೆ ಪ್ರಶಸ್ತಿ ನೀಡಲಾಯಿತು.

ರೋಟರಿಕ್ಲಬ್ ಹಾಗೂ ಪೊಲೀಸ್‌ ಠಾಣೆ ಸಹಯೋಗದಲ್ಲಿ ನಿಧಾನಗತಿ ಸೈಕಲ್ ಮತ್ತು ಮೋಟಾರ್ ಬೈಕ್ ಸ್ಪರ್ಧೆಯನ್ನು ಸಾರ್ವಜನಿಕರಿಗಾಗಿ ನಡೆಸಲಾಯಿತು.

ರೋಟರಿ ಕ್ಲಬ್‌ ಅಧ್ಯಕ್ಷ ಎಂ.ದೇವರಾಜ್, ಕಾರ್ಯದರ್ಶಿ ಸಿ.ಡಿ.ಸುರೇಶ್, ಇನ್ನರ್‌ವ್ಹೀಲ್‌ ಕ್ಲಬ್‌ ಅಧ್ಯಕ್ಷೆ ಭವಾನಿ ಜಯರಾಂ, ಹಿರಿಯ ಸಾಹಿತಿ ಡಾ.ಎಂ.ವಿ. ನಾಗರಾಜರಾವ್, ಇಸ್ರೊ ಅಧಿಕಾರಿ ಸಿ.ಎಸ್. ಮಧುಸೂಧನ್ ವಿಜೇತರಿಗೆ ಬಹುಮಾನ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT