ಸೋಮವಾರ, ಆಗಸ್ಟ್ 15, 2022
24 °C

ರಾಜ್ಯಮಟ್ಟದ ‘ಸಮತಾ ಸೌಹಾರ್ದ ಗೀತ ಗಾಯನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಬಂಡಾಯ ಸಾಹಿತ್ಯ ಸಂಘಟನೆ ತುಮಕೂರು ಜಿಲ್ಲಾ ಘಟಕವು ರಾಜ್ಯಮಟ್ಟದ ‘ಸಮತಾ ಸೌಹಾರ್ದ ಗೀತ ಗಾಯನ’ ಎಂಬ ವೆಬಿನಾರ್ ಕಾರ್ಯಕ್ರಮವನ್ನು ಸೆ.13 ರಂದು ಸಂಜೆ 4 ಗಂಟೆಗೆ ಜೂಮ್ ಆ್ಯಪ್‌ನಲ್ಲಿ ಆಯೋಜಿಸಿದೆ.

ದೇಶದಲ್ಲಿ ಸಮತೆ ಮತ್ತು ಸೌಹಾರ್ದ ನೆಲೆಯೂರಬೇಕು ಎಂಬ ಸಂವಿಧಾನದ ಆಶಯ ಪ್ರಸಾರ ಮಾಡಬೇಕು ಎಂಬ ಉದ್ದೇಶ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳ ಗಾಯಕ-ಗಾಯಕಿಯರು ಭಾಗವಹಿಸಲಿದ್ದಾರೆ.

ಕುವೆಂಪು, ದ.ರಾ.ಬೇಂದ್ರೆ, ಸಿದ್ದಯ್ಯ ಪುರಾಣಿಕ, ಜಿ.ಎಸ್.ಶಿವರುದ್ರಪ್ಪ, ಬರಗೂರು ರಾಮಚಂದ್ರಪ್ಪ, ಕೆ.ಎಸ್.ನಿಸಾರ್‌ ಅಹಮದ್, ಚಂದ್ರಶೇಖರ ಪಾಟೀಲ, ಸಿದ್ದಲಿಂಗಯ್ಯ, ಬಿ.ಟಿ.ಲಲಿತಾ ನಾಯಕ್, ಸರಜೂ ಕಾಟ್ಕರ್, ಚೆನ್ನಣ್ಣ ವಾಲೀಕಾರ, ಕೆ.ಬಿ.ಸಿದ್ದಯ್ಯ, ಎಲ್.ಹನುಮಂತಯ್ಯ, ವೀ.ಚಿಕ್ಕವೀರಯ್ಯ, ಕೋಟಗಾನಹಳ್ಳಿ ರಾಮಯ್ಯ, ಸತೀಶ್ ಕುಲಕರ್ಣಿ, ಎಚ್.ಎಲ್.ಪುಷ್ಪ, ರಂಜಾನ್ ದರ್ಗಾ, ಬಾ.ಹ.ರಮಾಕುಮಾರಿ, ಸುಬ್ಬು ಹೊಲೆಯಾರ್, ಸುಕನ್ಯಾ ಮಾರುತಿ, ಶೈಲಾ ನಾಗರಾಜು, ಮುನಿವೆಂಕಟಪ್ಪ ಸೇರಿದಂತೆ ನಾಡಿನ ಆಯ್ದ ಕವಿಗಳ ರಚನೆಗಳನ್ನು ಅಂದಿನ ಕಾರ್ಯಕ್ರಮದಲ್ಲಿ ಹಾಡಲಾಗುತ್ತದೆ.

ಕಾರ್ಯಕ್ರಮಕ್ಕೆ ಹಿರಿಯ ರಂಗಕರ್ಮಿ ಲಕ್ಷ್ಮಣದಾಸ್ ಚಾಲನೆ ನೀಡುವರು. ದೊರೈರಾಜ್ ಮತ್ತು ಜಿ.ಸೋಮಶೇಖರ್ ಉಪಸ್ಥಿತರಿರುವರು. ಮಲ್ಲಿಕಾ ಬಸವರಾಜ್ ಕಾರ್ಯಕ್ರಮದ ನಿರ್ವಹಿಸುವರು.

ಮೀಟಿಂಗ್ ಐ.ಡಿ: 2111755492, ಪಾಸ್‌ವರ್ಡ್: ಇಂಡಿಯನ್ (indian) ಸಂಪರ್ಕ: 9448659646 ಮತ್ತು 9964852518.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.