ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ–ವಿಜ್ಞಾನಿ ಸಂವಾದ

ವಿದ್ಯಾರ್ಥಿ–ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮ
Published 7 ಡಿಸೆಂಬರ್ 2023, 2:59 IST
Last Updated 7 ಡಿಸೆಂಬರ್ 2023, 2:59 IST
ಅಕ್ಷರ ಗಾತ್ರ

ಹೆಬ್ಬೂರು: ವಿಜ್ಞಾನದ ಆಳ ಮತ್ತು ಹರವುಗಳ ಬಗ್ಗೆ ವಿಶಾಲವಾಗಿ ಯೋಚಿಸಬೇಕು ಎಂದು ಇಸ್ರೋ ವಿಜ್ಞಾನಿ ಸಿ.ಎಸ್‌.ಮಧುಸೂಧನ್‌ ಹೇಳಿದರು.

ಸಮೀಪದ ನಾಗವಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ವಿದ್ಯಾರ್ಥಿ–ವಿಜ್ಞಾನಿ’ ಸಂವಾದ ಮತ್ತು ವಿದ್ಯಾರ್ಥಿಗಳು ತಯಾರಿಸಿದ ವಿಕ್ರಮ್‌ ಲ್ಯಾಂಡರ್‌ ಮಾದರಿಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸೂರ್ಯನ ಪ್ರಖರತೆ, ಅಗತ್ಯತೆ, ಅಂತರ ಈ ವಿಷಯಗಳ ಬಗ್ಗೆ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು. ಇದುವರೆಗೂ ಉಡಾವಣೆ ಮಾಡಿರುವ ಉಪಗ್ರಹಗಳ ಕುರಿತು ಮಾಹಿತಿ ಹಂಚಿಕೊಂಡರು. ಸಂವಹನಕ್ಕಾಗಿ ಉಪಗ್ರಹಗಳ ಪ್ರಾಮುಖ್ಯತೆ, ಹವಾಮಾನ ವರದಿ ಬಗ್ಗೆ ವಿವರಿಸಿದರು. ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಆಯ್ಕೆ, ತಮ್ಮ ಜೀವನದ ಜತೆಗೆ ಸಮಾಜದ ಒಳಿತಿಗೆ ಮಾಡಬೇಕಾಗಿರುವ ಪರಿಶ್ರಮದ ಮಾರ್ಗದರ್ಶನ ನೀಡಿದರು.

ಕಾಲೇಜು ಪ್ರಾಂಶುಪಾಲ ಈ.ರಾಜಪ್ಪ, ‘ಈ ಸಂವಾದ ವಿದ್ಯಾರ್ಥಿಗಳು ವೈಜ್ಞಾನಿಕ ರೀತಿಯಲ್ಲಿ ಆಲೋಚಿಸುವಂತೆ ಮಾಡಿದೆ. ಮುಂದಿನ ಭವಿಷ್ಯದ ಆಯ್ಕೆಗೆ ನೆರವಾಗಲಿದೆ’ ಎಂದು ಹೇಳಿದರು.

ಡಯಟ್‍ ಉಪನ್ಯಾಸಕ ವೇದಮೂರ್ತಿ, ನಾಗವಲ್ಲಿ ಕಾಲೇಜು ಉಪಪ್ರಾಂಶುಪಾಲ ಜೆ.ಶ್ರೀನಿವಾಸ್‌, ಉಪನ್ಯಾಸಕರಾದ ಸಿ.ಮಂಜುನಾಥ್‌, ಎಂ.ಸುರೇಶ, ಶಿಕ್ಷಕ ಡಿ.ಕೆ.ರಾಮಕೃಷ್ಣ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT