ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸೇವೆಗಾಗಿ ಶಿಕ್ಷಕ ಸ್ಪರ್ಧೆ

Last Updated 21 ಡಿಸೆಂಬರ್ 2020, 3:52 IST
ಅಕ್ಷರ ಗಾತ್ರ

ತುರುವೇಕೆರೆ: ‘ನಮ್ಮೂರು ಮೂಲಸೌಕರ್ಯಗಳಿಲ್ಲದ ಕುಗ್ರಾಮವಾಗಿರುವುದರಿಂದ ಜನರ ಸೇವೆಗಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ’ ಎನ್ನುತ್ತಾರೆ ಸಿ.ವಿ. ಮೋಹನ್‌ಕುಮಾರ್.

ತಾಲ್ಲೂಕಿನ ತಾಳ್ಕೆರೆ ಗ್ರಾಮ ಪಂಚಾಯಿತಿ ಚೆಂಡೂರು ಕ್ಷೇತ್ರದ ಅಭ್ಯರ್ಥಿ ಮೋಹನ್‌ಬಿ.ಇಡಿ., ಎಂ.ಎ. ಪದವೀಧರರು.

ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ 13 ವರ್ಷಗಳಿಂದ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮೋಹನ್‌ ಕುಮಾರ್‌ ಕೋವಿಡ್‌ ಕಾರಣದಿಂದ ಶಾಲೆಗಳಿಗೆ ರಜೆ ಇರುವುದರಿಂದ ಮನೆಯಲ್ಲಿಯೇ ಇದ್ದಾರೆ.

‘ಗ್ರಾಮದ ಸಮಸ್ಯೆಗಳು ನಿತ್ಯ ಕಣ್ಣಿಗೆ ರಾಚತೊಡಗಿದವು. ಗ್ರಾಮಗಳಿಗೆ ಕೋಟಿಗಟ್ಟಲೇ ಅನುದಾನ ಬಂದರೂ ಗ್ರಾಮದ ಅಭಿವೃದ್ಧಿ ಸಾಧ್ಯವಾಗಿಲ್ಲ ಎನ್ನುವುದು ಪ್ರಶ್ನಾರ್ಥಕವಾಯಿತು. ಹಾಗಾಗಿ ಗ್ರಾಮ ಪಂಚಾಯಿತಿ ಸದಸ್ಯನಾಗಿ ಪಾರದರ್ಶಕ ಆಡಳಿತ ನೀಡಬೇಕೆಂಬ ಬಯಕೆಯಿಂದ ಸ್ಪರ್ಧಿಸಿದ್ದೇನೆ’ ಎನ್ನುತ್ತಾರೆ ಮೋಹನ್‌.

ಗ್ರಾಮಕ್ಕೆ ಚರಂಡಿ ಇರಲಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ಅಧಿಕಾರಿಗಳ ಗಮನ ಸೆಳೆದು ಚರಂಡಿ ಮಾಡಿಸುವಲ್ಲಿ ಯಶಸ್ವಿ
ಯಾದೆ. ಪಂಚಾಯಿತಿ ಅವ್ಯವಹಾರಗಳ ವಿರುದ್ಧ ಕಾನೂನು ಸಮರ ಸಾರಿದ್ದು, ಆ ಪ್ರಕರಣ ಇಂದಿಗೂ ನಡೆಯುತ್ತಿದೆ ಎನ್ನುತ್ತಾರೆ ಅವರು.

ಊರಿನ ಎಷ್ಟೊ ಮನೆಗಳಿಗೆ ಕೃಷಿಹೊಂಡ, ಶೌಚಾಲಯ, ದನದಕೊಟ್ಟಿಗೆ, ವಿಧವಾ ವೇತನ, ವೃದ್ಧಾಪ್ಯ ವೇತನ ಸೇರಿದಂತೆ ಹಲವು ಸರ್ಕಾರಿ ಸವಲತ್ತು ಸಿಗುವಂತೆ ಮಾಡಿದ್ದೇನೆ. ಮತ ನೀಡುವಂತೆ ಜನರಿಗೆ ಯಾವುದೇ ಆಮಿಷ ಒಡ್ಡುವುದಿಲ್ಲ. ಜನಪರ ಕಾರ್ಯ
ಮುಂದಿಟ್ಟುಕೊಂಡು ಮತ ಕೇಳುತ್ತೇನೆ ಎನ್ನುವುದು ಅವರ ನಿಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT