ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಮಚಾರ ನೋಡಲು ಮುಗಿಬಿದ್ದ ಸ್ಥಳೀಯರು

ಹೂವಿನ ತೋಟದಲ್ಲಿ ಘಟನೆ
Last Updated 14 ಜನವರಿ 2021, 1:35 IST
ಅಕ್ಷರ ಗಾತ್ರ

ದೇವನಹಳ‍್ಳಿ: ಹೂವಿನ ತೋಟದಲ್ಲಿ ಕಂಡು ಬಂದ ವಾಮಚಾರವನ್ನು ನೋಡಲು ನಂದಿ ಬೆಟ್ಟದ ರಸ್ತೆ ಕಾರಹಳ್ಳಿ ಗ್ರಾಮದ ಬಳಿ ಬುಧವಾರ ಜನ ಮುಗಿಬಿದ್ದರು.

ಮೂರು ನಾಟಿ ಕೋಳಿ ತಲೆ, ಬಣ್ಣಗಳ ದಾರದಿಂದ ಸುತ್ತಿದ ನಾಲ್ಕು ಸಣ್ಣ ಮಣ್ಣಿನ ಕುಡಿಕೆ, ಕೊಯ್ದು ಹಾಕಿರುವ ನಿಂಬೆ ಹಣ್ಣಿನ ಹೋಳು, ಕೋಳಿ ರಕ್ತ, ಅರಿಶಿಣ ಮತ್ತು ಕುಂಕುಮದಿಂದ ಕಲಸಿದ ಅನ್ನ ಹಲವು ಬಣ್ಣದ ತುಂಡು ಬಟ್ಟೆಗಳನ್ನು ಬಳಸಿ ವಾಮಚಾರ ಮಾಡಲಾಗಿದೆ ಎಂದು ಜನ ತಿಳಿಸಿದರು.

ಗ್ರಾಮ ಪಂಚಾಯಿತಿ ಚುನಾವಣೆ ಯಲ್ಲಿ ಕಾರಹಳ್ಳಿ ಗ್ರಾಮದಿಂದ ಮೀಸಲಿಟ್ಟದ ಐದು ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಗೊಂಡಿದ್ದಾರೆ. ಕಳೆದ 15 ವರ್ಷಗಳಿಂದ ಆಯ್ಕೆಯಾಗುತ್ತಿದ್ದ ಜೆಡಿಎಸ್ ಬೆಂಬಲಿಗರಿಗೆ ಅಘಾತವಾಗಿದೆ. ಈ ನಡುವೆ ಈ ವಾಮಚಾರವನ್ನು ರಾಜಕೀಯ ವಿಷಯಕ್ಕೆ ತಳುಕಿ ಹಾಕಿ ನೋಡಲಾಗುತ್ತಿದೆ.

ವಾಮಚಾರ ನಡೆದ ತೋಟದ ಮಾಲಿಕ ಶಶಿಕುಮಾರ್ ಮಾತನಾಡಿ, ‘ಪಂಚಾಯಿತಿಗೆ ಈ ಹಿಂದೆ ಎರಡು ಬಾರಿ ಸ್ವರ್ಧಿಸಿ ಸೋತಿದ್ದೆ ಮೂರನೇ ಬಾರಿಗೆ ನನ್ನ ಪತ್ನಿ ಸರಳರನ್ನು ಕಣಕ್ಕಿಳಿಸಿ ಗೆಲುವು ಪಡೆದಿದ್ದೇವೆ, ನನಗೆ ರಾಜಕೀಯದಲ್ಲಿ ಯಾರು ಶತ್ರುಗಳಿಲ್ಲ ಜೆಡಿಎಸ್ ಮತ್ತು ಕಾಂಗ್ರೆಸ್ ಎಂಬುದು ಚುನಾವಣೆ ಸಂದರ್ಭದಲ್ಲಿ ಮಾತ್ರ, ಇಡಿ ಗ್ರಾಮದ ಜನರು ಅಣ್ಣ ತಮ್ಮರಂತೆ ಇದ್ದೇವೆ’ ಎಂದು ಹೇಳಿದರು.

‘ಕುಂಬಳಕಾಯಿ ಮನೆ ಬಾಗಿಲ ಬಳಿ ಇಟ್ಟು, ಅಕ್ಕಿಕಾಳು ಚೆಲ್ಲಿಹೋಗುವುದು, ನಿಂಬೆ ಹಣ್ಣು, ದಾರ ಸುತ್ತಿದ ಮಡಿಕೆ ಇವೆಲ್ಲ ಸಹಜವಾಗಿ ಕಂಡಿದ್ದೇವೆ ನನ್ನ ಭಾವ ಚಿತ್ರ ಇಟ್ಟು ಅದರ ಹಿಂಭಾಗದಲ್ಲಿ ನಿನಗೆ ಮರಣ ಶಾಸನ ಎಂದು ಬರೆದು ಇಟ್ಟು ವಾಮಚಾರ ಮಾಡಿದ್ದಾರೆ. ಇದು ನನಗೆ ಸ್ವಲ್ಪ ಭಯಕ್ಕೆ ಕಾರಣವಾಗಿದೆ’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯ ಜಯರಾಮ್ ಮಾತನಾಡಿ, ಕೀಡಿಗೇಡಿ ಗಳು ಬೆದರಿಸುವ ಮತ್ತು ಅತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡಿದ್ದಾರೆ, ಸಾಮಾನ್ಯವಾಗಿ ಭಾವಚಿತ್ರಗಳು ಫೋಟೋ ಸ್ಟುಡಿಯೋಗಳಲ್ಲಿ ಸಿಗುತ್ತದೆ, ಪೊಲೀಸರು ತನಿಖೆ ನಡೆಸಿದರೆ ಸತ್ಯಾಂಶ ಹೊರಬರಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT