ಕೊರಟಗೆರೆ: ‘ಪ್ರಪಂಚದ ಇತಿಹಾಸದಲ್ಲಿ ಅನೇಕ ಧರ್ಮಗಳು ಹುಟ್ಟಿಕೊಂಡಿವೆ. ಆದರೆ ಹಿಂದೂಧರ್ಮ ಯಾವಾಗ ಹುಟ್ಟಿತು ಎಂಬುದೇ ಪ್ರಶ್ನೆ. ಹಿಂದೂ ಧರ್ಮ ಯಾವಾಗ ಹುಟ್ಟಿತು, ಯಾರು ಹುಟ್ಟು ಹಾಕಿದರು ಎನ್ನುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ’ ಎಂದು ಗೃಹಸಚಿವ ಡಾ.ಜಿ. ಜಿ.ಪರಮೇಶ್ವರ ಹೇಳಿದರು.
ಪಟ್ಟಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮತನಾಡಿದ ಅವರು, ‘ನಮ್ಮ ದೇಶದಲ್ಲಿ ಬೌದ್ಧ ಮತ್ತು ಜೈನ ಧರ್ಮ ಹುಟ್ಟಿರುವ ಇತಿಹಾಸವಿದೆ. ವಿದೇಶದಿಂದ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ನಮ್ಮ ದೇಶಕ್ಕೆ ಬಂದಿವೆ. ಪ್ರಪಂಚದ ಎಲ್ಲ ಧರ್ಮಗಳ ಸಾರಾಂಶ ಒಂದೇ ಮನುಕುಲಕ್ಕೆ ಒಳ್ಳೆದಾಗಲಿ ಎನ್ನುವುದಷ್ಟೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.