ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋವಿನಕೆರೆ | ಶಾಲೆ ಎಲ್ಲೆಡೆ ಹಬ್ಬದ ವಾತಾವರಣ

Published 1 ಜೂನ್ 2024, 14:19 IST
Last Updated 1 ಜೂನ್ 2024, 14:19 IST
ಅಕ್ಷರ ಗಾತ್ರ

ತೋವಿನಕೆರೆ: ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ದಾಖಲಾತಿ ಅಂದೋಲನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಶಾಲಾ ಅವರಣದ ತುಂಬಾ ವಿಶೇಷ ಅಲಂಕಾರ, ಆಕರ್ಷಕ ಉಡುಪು ಧರಿಸಿದ ಮಕ್ಕಳ ಲವಲವಿಕೆಯ ಓಡಾಟ, ಹಬ್ಬಗಳನ್ನು ಮೀರಿಸುವಂತೆ ಶಿಕ್ಷಕ ಶಿಕ್ಷಕಿಯರು ಮತ್ತು ಶಾಲಾಭಿವೃದ್ಧಿ ಸದಸ್ಯರ ಚಟುವಟಿಕೆ ಹೊಸ ಮೆರುಗು ನೀಡಿತ್ತು.

ಬಿಇಒ ನಟರಾಜು, ಗ್ರಾಮದಲ್ಲಿ ಸರ್ಕಾರಿ ಶಾಲೆಗೆ ಸೇರಿಸುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಕರಪತ್ರ ಹಂಚಿ ಪೋಷಕರಿಗೆ ಮನವರಿಕೆ ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಮ್ಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರೇವಣ್ಣ, ಉಪಾಧ್ಯಕ್ಷೆ ಪುಷ್ಪ, ಪಿಡಿಒ ಎಚ್.ಎನ್. ಲಕ್ಷ್ಮಿ ನಾರಾಯಣ, ಸಿಆರ್‌ಪಿ ಹರ್ಷ, ಮುಖ್ಯಶಿಕ್ಷಕ ಸಿದ್ಧಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT