ಹುಳಿಯಾರು: ಸಮೀಪದ ಯರೇಕಟ್ಟೆ ಗ್ರಾಮದ ಕೆರೆಗೆ ಬಿದ್ದು ತಂದೆ, ಮಗಳು ಸೇರಿ ಮೂವರು ಮಂಗಳವಾರ ಸಂಜೆ ಸಾವನ್ನಪ್ಪಿದ್ದಾರೆ.

ಯರೇಕಟ್ಟೆ ಗ್ರಾಮದ ವೆಂಕಟೇಶ್ (47), ಮಗಳು ಶ್ರಾವ್ಯ(12) ಹಾಗೂ ವೆಂಕಟೇಶ್ ಅಣ್ಣನ ಮಗನ ಮಗಳು ಪುಣ್ಯ(11) ಮೃತಪಟ್ಟವರು.

ಮಂಗಳವಾರ ಸಂಜೆ 6 ಗಂಟೆಗೆ ಗ್ರಾಮದ ಬಳಿಯ ಕೆರೆ ಕಡೆ ಬಹಿರ್ದೆಸೆಗೆ ಶ್ರಾವ್ಯ, ಪುಣ್ಯ ಸೇರಿದಂತೆ ಮೂವರು ಹೋಗಿದ್ದಾರೆ. ಕೆರೆಯಲ್ಲಿ ನೀರು ಮುಟ್ಟಲು ಹೋಗಿ ಶ್ರಾವ್ಯ ಹಾಗೂ ಪುಣ್ಯ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಮತ್ತೊಬ್ಬಳು ಬುದ್ಧಿಮಾಂದ್ಯಳಾಗಿದ್ದು ಮನೆಗೆ ಬಂದು ಕೆರೆಗೆ ಬಿದ್ದಿರುವ ವಿಷಯ ತಿಳಿಸಿದ್ದಾರೆ. ಕೂಡಲೇ ವೆಂಕಟೇಶ್ ಹಾಗೂ ಮಂಜುನಾಥ್ ರಕ್ಷಣೆಗೆ ತೆರಳಿದ್ದಾರೆ. ಈ ವೇಳೆ ವೆಂಕಟೇಶ್ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ವೆಂಕಟೇಶ್ ಹಾಗೂ ಶ್ರಾವ್ಯ ಮೃತಪಟ್ಟಿದ್ದರೆ, ಪುಣ್ಯ ಹುಳಿಯಾರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.