ತೆಂಗಿನ ಜಾಗ ಆಕ್ರಮಿಸುತ್ತಿರುವ ಅಡಿಕೆ
ಸತತ ಬರ ನೀರಿನ ಕೊರತೆಯಿಂದ ತೆಂಗಿನ ಮರಗಳು ಒಣಗುತ್ತಿದ್ದು ರೋಗ ಬಾಧೆಯಿಂದ ಇಳುವರಿ ಕುಸಿತವಾಗಿದೆ. ಎಳನೀರಿಗೆ ಹೆಚ್ಚಿದ ಬೇಡಿಕೆಯಿಂದಾಗಿ ಬೆಳೆಗಾರರು ಅತ್ತ ಮುಖ ಮಾಡಿದ್ದಾರೆ. ತೆಂಗು ಪ್ರದೇಶ ವಿಸ್ತರಣೆ ಆಗದಿರುವುದು ತೆಂಗಿನ ಜಾಗದಲ್ಲಿ ಅಡಿಕೆ ಬೆಳೆ ಕಾಲಿಟ್ಟಿರುವುದು ಕೊಬ್ಬರಿ ಉತ್ಪಾದನೆ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ತೆಂಗು ಬೆಳೆಗಾರರು.