ತಿಪಟೂರು | ರಸ್ತೆ ಪಕ್ಕದಲ್ಲೇ ವಾರದ ಸಂತೆ: ವ್ಯಾಪಾರಿಗಳು, ಗ್ರಾಹಕರಿಗೆ ತೊಂದರೆ
ಸೂಕ್ತ ಸ್ಥಳ, ಮೂಲಸೌಕರ್ಯ ಕೊರತೆ
ಪ್ರಶಾಂತ್ ಕೆ.ಆರ್.
Published : 10 ಆಗಸ್ಟ್ 2025, 2:54 IST
Last Updated : 10 ಆಗಸ್ಟ್ 2025, 2:54 IST
ಫಾಲೋ ಮಾಡಿ
Comments
ಬಿದರೆಗುಡಿಯಲ್ಲಿ ರಸ್ತೆ ಪಕ್ಕದಲ್ಲೇ ಸಂತೆ
ವ್ಯಾಪಾರ ನಡೆಯುವ ಸ್ಥಳವು ರಸ್ತೆ ಪಕ್ಕದಲ್ಲಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಬಿದರೆಗುಡಿಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಸ್ವತ್ತು ಇದ್ದು, ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯಿತಿ ಸ್ಥಳ ಗುರುತಿಸಿ ಕೊಟ್ಟರೆ ಸ್ಥಳೀಯ ಸರ್ಕಾರದಿಂದ ಸೂಕ್ತ ವ್ಯವಸ್ಥೆ ಮಾಡಲಾಗುವುದು.
–ಜ್ಯೋತಿ ಮಹೇಶ್, ಮತ್ತಿಹಳ್ಳಿ ಗ್ರಾ.ಪಂ ಅಧ್ಯಕ್ಷ
ಗ್ರಾಮೀಣ ಭಾಗದ ರೈತರು ಬೆಳೆದ ಹಣ್ಣು, ತರಕಾರಿಗಳನ್ನು ಅವರೇ ತಂದು ಮಾರಾಟ ಮಾಡುವುದರಿಂದ ತಾಜಾವಾಗಿರುತ್ತದೆ. ಆದರೆ ಸಂತೆ ನಡೆಯುವ ಸ್ಥಳದಲ್ಲಿ ರಸ್ತೆ ಕಿರಿದಾಗಿದ್ದು, ಸಂಚಾರ ದಟ್ಟಣೆ ಇರುತ್ತದೆ. ಸಂತೆಗೆ ಪರ್ಯಾಯ ಜಾಗ ಕಲ್ಪಿಸುವುದು ಉತ್ತಮ.
–ಹರೀಶ್, ಗ್ರಾಹಕ
ಹೊನ್ನವಳ್ಳಿ, ಹುಳಿಯಾರು, ಚಿತ್ರದುರ್ಗ, ಬಳ್ಳಾರಿ ಕಡೆಗೆ ಸಾಗುವ ಸಾವಿರಾರು ವಾಹನಗಳು ಸಾಗುವ ಹೆದ್ದಾರಿ ಪಕ್ಕದಲ್ಲಿ ಸಂತೆ ನಡೆಯುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಪಕ್ಕದಲ್ಲಿಯೇ ಗ್ರಾಮ ಪಂಚಾಯಿತಿ ಮತ್ತು ಎಪಿಎಂಸಿ ಅನುದಾನಿತ ಮಾರುಕಟ್ಟೆ ಪ್ರಾಂಗಣ ಇದ್ದು, ಸಂತೆ ಸ್ಥಳ ಸ್ಥಳಾಂತರಕ್ಕೆ ಗಮನಹರಿಸಬೇಕು.