ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರುವೇಕೆರೆ | ಟೋಕನ್ ಪಡೆಯಲು ಮುಗಿಬಿದ್ದ ರೈತರು

ಕಸಬಾದ ಕೊಬ್ಬರಿ ಖರೀದಿ ಕೇಂದ್ರಕ್ಕೆ ಶಾಸಕ ಭೇಟಿ
Published 5 ಮಾರ್ಚ್ 2024, 14:26 IST
Last Updated 5 ಮಾರ್ಚ್ 2024, 14:26 IST
ಅಕ್ಷರ ಗಾತ್ರ

ತುರುವೇಕೆರೆ: ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಕಸಬಾದ ಕೊಬ್ಬರಿ ಖರೀದಿ ನೋಂದಣಿ ಕೇಂದ್ರಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಮಂಗಳವಾರ ಭೇಟಿ ನೀಡಿ, ರೈತರ ಸಮಸ್ಯೆ ಆಲಿಸಿದರು.

ತಾಲ್ಲೂಕಿನ ದಂಡಿನಶಿವರ, ಮಾಯಸಂದ್ರ ಮತ್ತು ದಬ್ಬೇಘಟ್ಟ ನೋಂದಣಿ ಕೇಂದ್ರಗಳಿಗಿಂತ ಕಸಬಾ ನೋಂದಣಿ ಕೇಂದ್ರದಲ್ಲಿ ಮಂಗಳವಾರವೂ ಹೆಚ್ಚಿನ ಸಂಖ್ಯೆಯ ರೈತರು ಬಂದ ಕಾರಣ ಜನಸಂದಣಿ, ಗೊಂದಲು ಉಂಟಾಗಿತ್ತು. ರೈತರನ್ನು ಸರತಿ ಸಾಲಿನಲ್ಲಿ ನಿಲ್ಲಿಸಲು ಪೊಲೀಸರು ಸಾಹಸಪಟ್ಟರು.

‘ರಾತ್ರಿಯೆಲ್ಲ ಸೊಳ್ಳೆ ಕಾಟ, ಕುಡಿಯಲು ನೀರಿಲ್ಲ, ಕಸಬಾ ಹೋಬಳಿಯಲ್ಲಿ ಹೆಚ್ಚಿನ ಸಂಖ್ಯೆಯ ರೈತರಿದ್ದಾರೆ. ಈಗಿರುವ ಕೌಂಟರ್‌ ಸಾಲದು ಹೆಚ್ಚುವರಿ ಬೇಕು. ಬೆಳಗಾದರೆ ಬಿಸಿಲಿನಿಂದ ನಿಲ್ಲಲು ಸಾದ್ಯವಾಗುತ್ತಿಲ್ಲ. ದೂರದ ಗ್ರಾಮಗಳಿಂದ ಬಂದಿರುವವರಿಗೆ ಶೌಚಾಲಯ ವ್ಯವಸ್ಥೆ ಮಾಡಬೇಕು’ ಎಂದು ರೈತರು ಶಾಸಕರಲ್ಲಿ ಅಳಲು ತೋಡಿಕೊಂಡರು.

ಕಸಬಾದಲ್ಲಿ ಹೆಚ್ಚುವರಿಯಾಗಿ ಮೂರು ಕೌಂಟರ್ ತೆರೆಯಬೇಕು. ಅಗತ್ಯವಾದರೆ ಉಳಿದ ಹೋಬಳಿಗಳಲ್ಲೂ ಹೆಚ್ಚುವರಿ ಕೌಂಟರ್ ತೆರೆಯುವಂತೆ ಕೇಳಿಕೊಂಡರು.

ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಅವರಿಗೆ ಕರೆ ಮಾಡಿದ ಶಾಸಕರು ನೋಂದಣಿಗೆ ಬರುವ ರೈತರಿಗೆ ಕುಡಿಯುವ ನೀರು ಮತ್ತು ಶಾಮಿಯಾನದ ಸೌಕರ್ಯ ಕಲ್ಪಿಸುವಂತೆ ಸೂಚಿಸಿದರು.

ತಾಲ್ಲೂಕಿನ ಆರು ಕೇಂದ್ರಗಳಲ್ಲೂ ರೈತರ ಸಂಖ್ಯೆ ದ್ವಿಗುಣವಾಗುತ್ತಿರುವುದರಿಂದ ರೈತರು ನೋಂದಣಿ ಅವಕಾಶ ಸಿಗುವುದಿಲ್ಲ ಎಂದು ಟೋಕನ್ ನೀಡುವಂತೆ ನಫೆಡ್ ಅಧಿಕಾರಿಗಳನ್ನು ಒತ್ತಾಯ ಮಾಡುತ್ತಿರುವ ಕಾರಣ ಟೋಕನ್ ನೀಡಲಾಗುತ್ತಿದೆ. ದಿನಕ್ಕೆ 150 ಟೋಕನ್ ಮಾತ್ರ ನೀಡಲಾಗುತ್ತಿದೆ. ಮಂಗಳವಾರ ಟೋಕನ್ ಪಡೆದವರು ಬುಧವಾರ ನೋಂದಣಿ ಮಾಡಿಸಲು ಬರಬಹುದೆಂದು ರೈತರೊಬ್ಬರು ತಿಳಿಸಿದರು.

ತಾಲ್ಲೂಕಿನ ಆರು ನಾಫೆಡ್ ಕೇಂದ್ರಗಳಲ್ಲಿ ರೈತರಿಗೆ ಕುಡಿಯುವ ನೀರು, ಶಾಮಿಯಾನದ ಸೌಕರ್ಯ ಒದಗಿಸಲಾಗಿದೆ. ಪಟ್ಟಣದ ಎಪಿಎಂಸಿ ಆವರಣದಲ್ಲಿನ ಕಸಬಾದ ಎರಡು ಕೇಂದ್ರಗಳ ಜೊತೆಗೆ ಮತ್ತೊಂದು ಕೌಂಟರ್ ಅನ್ನು ಬುಧವಾರ ತೆರೆಯಲಾಗುವುದು. ಮಾರ್ಚ್‌ 4ರಂದು ಎಲ್ಲ ಕೇಂದ್ರಗಳಿಂದ 688 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಎಪಿಎಂಸಿ ಕಾರ್ಯದರ್ಶಿ ವೆಂಕಟೇಶ್ ಮಾಹಿತಿ ನೀಡಿದರು.

ತರುವೇಕೆರೆ ಎಪಿಎಂಸಿ ಆವರಣದಲ್ಲಿರುವ ಕಸಬಾದ ಕೊಬ್ಬರಿ ಖರೀದಿ ಕೇಂದ್ರದ ನೋಟ
ತರುವೇಕೆರೆ ಎಪಿಎಂಸಿ ಆವರಣದಲ್ಲಿರುವ ಕಸಬಾದ ಕೊಬ್ಬರಿ ಖರೀದಿ ಕೇಂದ್ರದ ನೋಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT