ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಟೊಮೆಟೊ ಕೆ.ಜಿ ₹40ಕ್ಕೆ ಇಳಿಕೆ

Published 13 ಆಗಸ್ಟ್ 2023, 6:52 IST
Last Updated 13 ಆಗಸ್ಟ್ 2023, 6:52 IST
ಅಕ್ಷರ ಗಾತ್ರ

ತುಮಕೂರು: ಟೊಮೆಟೊ ಬೆಲೆ ಇಳಿಕೆಯಾಗಿದ್ದು, ತರಕಾರಿ ಧಾರಣೆ ಸಹ ಕಡಿಮೆಯಾಗಿದೆ. ಹಣ್ಣುಗಳ ದರವೂ ತಗ್ಗುತ್ತಿದ್ದು, ಕೆಲವು ಬೇಳೆ ದರ ಹೆಚ್ಚಳವಾಗಿದ್ದು, ಕೋಳಿ ಮತ್ತೆ ದುಬಾರಿಯಾಗಿದೆ. ಮೀನಿನ ದರ ನಿಧಾನವಾಗಿ ಕಡಿಮೆಯಾಗುತ್ತಿದೆ.

ಟೊಮೆಟೊ ಕುಸಿತ: ತೀವ್ರ ದರ ಏರಿಕೆ ಕಂಡಿದ್ದ ಟೊಮೆಟೊ ನಿಧಾನವಾಗಿ ಇಳಿಕೆಯುತ್ತಿದ್ದು, ಈ ವಾರ ಕೆ.ಜಿ ₹40–50ಕ್ಕೆ ಕುಸಿದಿದೆ. ಮಾರುಕಟ್ಟೆಗೆ ಬರುವ ಆವಕ ಹೆಚ್ಚುತ್ತಿದ್ದು, ಮುಂದಿನ ವಾರಗಳಲ್ಲಿ ಮತ್ತಷ್ಟು ಕಡಿಮೆಯಾಗಲಿದೆ. ಬೆಲೆ ಏರಿಕೆಯಾಗುತ್ತಿದ್ದಂತೆ ಸಾಕಷ್ಟು ಭಾಗದಲ್ಲಿ ರೈತರು ಟೊಮೆಟೊ ಸಸಿ ನಾಟಿ ಮಾಡಿದ್ದು, ಬೆಳೆದಿರುವ ಹಣ್ಣು ಮಾರುಕಟ್ಟೆಗೆ ಬಂದರೆ ಬೆಲೆ ಇಳಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.

ತರಕಾರಿ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗದಿದ್ದರೂ ಕೆಲವು ತರಕಾರಿಗಳ ದರ ಕಡಿಮೆಯಾಗಿದೆ. ಆದರೆ ಯಾವುದೇ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ಬೆಂಡೆಕಾಯಿ, ಬದನೆಕಾಯಿ, ಹೂಕೋಸು, ತೊಂಡೆಕಾಯಿ, ಹಾಗಲ ಕಾಯಿ, ಹಸಿರು ಮೆಣಸಿನಕಾಯಿ ಧಾರಣೆ ಇಳಿಕೆಯಾಗಿದೆ. ಸೌತೆಕಾಯಿ, ನಿಂಬೆ ಹಣ್ಣು ಮತ್ತಷ್ಟು ಕುಸಿದಿದೆ. ಈರುಳ್ಳಿ ಅಲ್ಪ ಏರಿಕೆ ಕಂಡಿದೆ.

ಕುಣಿಗಲ್‌ನಲ್ಲಿ ₹30ಕ್ಕೆ ಮಾರಾಟ: 

ಕುಣಿಗಲ್: ಪಟ್ಟಣದ ಮದ್ದೂರು ರಸ್ತೆಯಲ್ಲಿ ಶನಿವಾರ ವ್ಯಾಪಾರಿಯೊಬ್ಬರು ಟೊಮೆಟೊ ಕೆ.ಜಿ.ಗೆ ₹30ರಂತೆ ಮಾರಾಟ ಮಾಡಿದರು. ಕಡಿಮೆ ದರದಲ್ಲಿ ಸಿಗುತ್ತಿದ್ದ ಟೊಮೆಟೊ ಖರೀದಿಸಲು ಜನರು ಮುಗಿಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT