ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕನಾಯಕನಹಳ್ಳಿ: ಗುಂಡು ಹಾರಿಸಿದವನಿಗೆ ಹತ್ತು ವರ್ಷ ಕಠಿಣ ಶಿಕ್ಷೆ

Published 1 ಮೇ 2024, 12:31 IST
Last Updated 1 ಮೇ 2024, 12:31 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಕೊಡಲಾಗರ ಗ್ರಾಮದ ನಿವಾಸಿ ಆದಿತ್ಯ 2015ರಲ್ಲಿ ನೆರೆಮನೆಯ ನಿವಾಸಿ ಚಿದಾನಂದಮೂರ್ತಿ ಅವರ ಮೇಲೆ ಗುಂಡು ಹಾರಿಸಿದ್ದ ಪ್ರಕರಣದ ಸಂಬಂಧಿಸಿದಂತೆ ಅಪರಾಧಿ ಆದಿತ್ಯನಿಗೆ ಹತ್ತು ವರ್ಷ ಕಠಿಣ ಸಜೆ ಮತ್ತು ₹10ಸಾವಿರ ದಂಡ ವಿಧಿಸಿ ತಿಪಟೂರಿನ 5ನೇ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಮಂಗಳವಾರ ಆದೇಶ ಹೊರಡಿಸಿದೆ.

ಕೊಡಲಾಗರ ಗ್ರಾಮದ ನಿವಾಸಿ ಚಿದಾನಂದಮೂರ್ತಿ-ಸ್ಮಿತಾ ದಂಪತಿಯ ನೆರೆಮನೆಯಲ್ಲೇ ವಾಸಿಸುತ್ತಿದ್ದ ಆದಿತ್ಯ ಏಕಾಏಕಿ ಮನೆಗೆ ನುಗ್ಗಿ ಚಿದಾನಂದಮೂರ್ತಿಗೆ ಬಂದೂಕಿನಿಂದ ಗುಂಡು ಹಾರಿಸಿದ್ದ, ಚಿದಾನಂದಮೂರ್ತಿ ಭುಜಕ್ಕೆ ತೀವ್ರಸ್ವರೂಪದ ಗಾಯವಾಗಿತ್ತು. ಜಗಳ ಬಿಡಿಸಲು ಬಂದಿದ್ದ ಮಂಜುನಾಥ, ಮನು, ಮಧುಸೂದನ ಮತ್ತು ಕೃಷ್ಣಮೂರ್ತಿ ಅವರಿಗೂ ಗುಂಡು ತಾಗಿತ್ತು.

ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದ ಪೊಲೀಸ್ ನಿರೀಕ್ಷಕ ವಿಜಯಕುಮಾರ್ ಜಿ.ಆರ್‌ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT