ವಸತಿ ಸಮುಚ್ಚಯದ ಬಳಿ ಕೊಳವೆ ಬಾವಿ ಕೊರೆಸಲಾಗಿದೆ. ಅದರಿಂದಲೇ ನೀರು ಸರಬರಾಜು ಮಾಡಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ. ಬೇಸಿಗೆ ಸಮಯದಲ್ಲಿ ಕೊಳವೆ ಬಾವಿ ನೀರು ಕಡಿಮೆಯಾಗಿ ತುಂಬಾ ಸಮಸ್ಯೆಯಾಗುತ್ತದೆ. ನೀರಿಗಾಗಿ ದಿಬ್ಬೂರಿಗೆ ಹೋಗಬೇಕಾದ ಪರಿಸ್ಥಿತಿ ಇದೆ.
ಚಂದ್ರು, ಸ್ಥಳೀಯರು
ಮನೆ ನಿರ್ಮಾಣ ಕಾಮಗಾರಿ ಕಳಪೆಯಾಗಿದೆ. ಎಲ್ಲ ಕಡೆ ಗೋಡೆಗಳು ಬಿರುಕು ಬಿಟ್ಟಿವೆ. ನಿರಂತರವಾಗಿ ನೀರು ಸೋರಿಕೆಯಾಗುತ್ತಿದೆ. ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಪ್ರಾರಂಭದಲ್ಲಿ ಯಾವುದೇ ಸೌಲಭ್ಯ ಕಲ್ಪಿಸಿರಲಿಲ್ಲ. ಪೌರ ಕಾರ್ಮಿಕರೇ ತಮ್ಮ ಹಣದಲ್ಲಿ ಎಲ್ಲವನ್ನು ಸರಿಮಾಡಿಕೊಂಡಿದ್ದಾರೆ.
ಮಂಜುಳಾ, ಸ್ಥಳೀಯರು
ನಗರದಿಂದ ಮನೆಗೆ ಬರಲು ಬಸ್‌ಗಳ ಸೌಲಭ್ಯ ಇಲ್ಲ. ಆಟೊಗಳನ್ನೇ ನೆಚ್ಚಿಕೊಳ್ಳಬೇಕು. ದುಬಾರಿ ಹಣ ನೀಡಬೇಕು. ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆ. ಮಕ್ಕಳು ಶಾಲೆ– ಕಾಲೇಜುಗಳಿಗೆ ಹೋಗಲು ಪರದಾಡುವಂತಹ ಪರಿಸ್ಥಿತಿ ಇದೆ. ಮನೆ ಹಂಚಿಕೆ ಮಾಡಿದ ನಂತರ ಅಧಿಕಾರಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ.
ಲತಾ, ಸ್ಥಳೀಯರು
ವಸತಿ ಸಮುಚ್ಚಯ ಊರಿಂದ ಹೊರಗಿದೆ. ಕಳ್ಳತನ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಮನೆ ಬಳಿ ಯಾವುದೇ ವಸ್ತುಗಳನ್ನು ಇಡುವಂತಿಲ್ಲ. ಎಲ್ಲವೂ ನಾಪತ್ತೆಯಾಗುತ್ತಿವೆ. ರಕ್ಷಣೆಗೆ ಸಿಬ್ಬಂದಿ ನಿಯೋಜಿಸಬೇಕು. ಪೊಲೀಸ್ ಗಸ್ತು ಹೆಚ್ಚಿಸಬೇಕು. ಜನ ಸಮುದಾಯಕ್ಕೆ ರಕ್ಷಣೆ ಕಲ್ಪಿಸಬೇಕು.