ತುಮಕೂರು: ‘ತುಮಕೂರು ದಸರಾ’ ಪ್ರಚಾರಕ್ಕೆ ಶಾಲಾ ಮಕ್ಕಳನ್ನು ಬಳಸಿಕೊಳ್ಳಲು ಜಿಲ್ಲಾ ಆಡಳಿತ ಮುಂದಾಗಿದ್ದು, ಪ್ರತಿ ಮನೆಗೆ ಮಕ್ಕಳನ್ನು ಕಳುಹಿಸಿ ಹಬ್ಬಕ್ಕೆ ಆಹ್ವಾನಿಸಲು ಸಜ್ಜಾಗಿದೆ.

‘ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳಿಗೆ ಮಾಹಿತಿ ನೀಡಲಾಗಿದೆ. ಜಿಲ್ಲೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಶಾಲಾ ಮಕ್ಕಳಿದ್ದಾರೆ. ಅವರನ್ನು ಪ್ರತಿ ಮನೆಗೆ ಕಳುಹಿಸುತ್ತೇವೆ. ಅವರೇ ಜನರನ್ನು ಹಬ್ಬಕ್ಕೆ ಆಹ್ವಾನಿಸುತ್ತಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಹೇಳಿದರು.

ನಗರದಲ್ಲಿ ಸೋಮವಾರ ದಸರಾ ಲಾಂಛನ, ಧ್ವಜ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಶಿಸ್ತು ಬದ್ಧವಾಗಿ ಊರಿನ ಹಬ್ಬ ಆಚರಿಸಲು 23 ವಿವಿಧ ಸಮಿತಿ ರಚಿಸಲಾಗಿದೆ. ಯಾವುದೇ ರೀತಿಯ ಒಡಕು ಶಬ್ದ ಬರದಂತೆ ಎಲ್ಲರು ಒಂದಾಗಿ ಭಾಗವಹಿಸಬೇಕು. ಶಾಶ್ವತ ಲಾಂಛನ ಇರಬೇಕು ಎಂಬ ಉದ್ದೇಶದಿಂದ ಹಿಂದಿನ ಬಾರಿ ಬಳಸಿದ್ದ ಲಾಂಛನವನ್ನೇ ಮುಂದುವರಿಸಲಾಗಿದೆ ಎಂದರು.

ಯಾವುದೇ ಪಕ್ಷ, ಜಾತಿ, ಧರ್ಮ ಇಲ್ಲದೆ ಹಬ್ಬ ಆಚರಿಸಲಾಗುತ್ತದೆ. ನಮ್ಮ ಪಕ್ಷ ಶಾಶ್ವತವಾಗಿ ವಿಧಾನಸೌಧದಲ್ಲಿ ಕುಳಿತು ಕೊಳ್ಳುವುದಿಲ್ಲ, ಬದಲಾವಣೆ ಸಹಜ. ಮುಂದಿನ ದಿನಗಳಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ದಸರಾ ಮುಂದುವರಿಸಿಕೊಂಡು ಹೋಗಬೇಕು ಎಂದು ಮನವಿ ಮಾಡಿದರು.

ಈ ಬಾರಿಯ ದಸರಾ ಆಚರಣೆಯಲ್ಲಿ ಫಲಪುಷ್ಪ ಪ್ರದರ್ಶನ ಗಮನ ಸೆಳೆಯಲಿದೆ. ತಿಪಟೂರಿನ ಅರಳಗುಪ್ಪೆ ದೇವಸ್ಥಾನವನ್ನು ಹೂವಿನಲ್ಲಿ ಅಲಂಕರಿಸಲಾಗುತ್ತದೆ. ಇದರ ಜತೆಗೆ 25ರಿಂದ 30 ಬಗೆಯ ಕಲಾ ಕೃತಿ ರಚಿಸಲಾಗುತ್ತದೆ ಎಂದು ವಿವರಿಸಿದರು.

ಕಲಾ ಮತ್ತು ಜ್ಞಾನ ವೈಭವ ಪ್ರದರ್ಶನವೂ ಇರಲಿದೆ. ಎಚ್ಎಎಲ್, ಇಸ್ರೋ, ವನ್ಯಜೀವಿ ಛಾಯಾಗ್ರಹಣ, ಪಾರಂಪರಿಕ ಕೃಷಿ ಸಾಧನೆ ನವರಾತ್ರಿ ಗೊಂಬೆಗಳ ಪ್ರದರ್ಶನ ಏರ್ಪಡಿಸಲಾಗಿದೆ. ಅಂಬಾರಿ ಮೆರವಣಿಗೆಯಲ್ಲಿ ನಗರದ ಸುತ್ತಮುತ್ತಲಿನ ಗ್ರಾಮಗಳ ಗ್ರಾಮ ದೇವತೆಗಳ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಶಾಸಕರಾದ ಕೆ.ಷಡಕ್ಷರಿ, ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಇತರರು ಹಾಜರಿದ್ದರು.

ಪರಮೇಶ್ವರ ಸಿ.ಎಂ ಆಗಲಿ

ಸಚಿವ ಪರಮೇಶ್ವರ ಮುಖ್ಯಮಂತ್ರಿ ಆಗಬೇಕು ಎಂಬ ಕನಸು ಇಟ್ಟುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮೈಸೂರಿನ ಚಾಮುಂಡಿಗೆ ಪುಷ್ಪಾರ್ಚನೆ ನೆರವೇರಿಸುವ ಭಾಗ್ಯ ಸಿಗಲಿ ಎಂದು ಶಾಸಕ ಬಿ.ಸುರೇಶ್ಗೌಡ ಆಶಿಸಿದರು. ಸಿದ್ದರಾಮಯ್ಯ ಬೇರೆ ಪಕ್ಷದಿಂದ ಬಂದು ಎರಡು ಬಾರಿ ಮುಖ್ಯಮಂತ್ರಿಯಾದರು. ಮಲ್ಲಿಕಾರ್ಜುನ ಖರ್ಗೆ 40 ವರ್ಷದಿಂದ ಪಕ್ಷದಲ್ಲಿ ಇದ್ದರೂ ಮುಖ್ಯಮಂತ್ರಿ ಆಗಲಿಲ್ಲ ಎಂದರು. ಶಾಸಕ ಎಚ್.ಡಿ.ರಂಗನಾಥ್ ‘ಸುರೇಶ್ಗೌಡ ಅವರಿಗೆ ಕಾಂಗ್ರೆಸ್ ಮೇಲೆ ಒಲವು ಜಾಸ್ತಿ. ಇವತ್ತು ನಾಳೆ ಕಾಂಗ್ರೆಸ್ಗೆ ಬರುವ ಸೂಚನೆ ಕೊಡುತ್ತಿದ್ದಾರೆ. ಅದಕ್ಕೆ ಪರಮೇಶ್ವರ ಅವರು ಅವಕಾಶ ಕೊಟ್ಟರೆ ಬರುತ್ತಾರೆ ಎಂದುಕೊಳ್ಳುತ್ತೇನೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

‘ಹೆಲಿ ಟೂರಿಸಂ’ ನೋಂದಣಿ ಶುರು

ಹೆಲಿಕಾಪ್ಟರ್ನಲ್ಲಿ ಕುಳಿತು ನಗರ ಸುತ್ತಲು ಅವಕಾಶ ನೀಡಿದ್ದು ಈಗಾಗಲೇ ನೋಂದಣಿ ಪ್ರಾರಂಭವಾಗಿದೆ. ಒಬ್ಬರಿಗೆ ₹3900 ಶುಲ್ಕ ನಿಗದಿ ಪಡಿಸಲಾಗಿದೆ. ದಸರಾ ಕ್ರೀಡಾಕೂಟ ವಿಶೇಷವಾಗಿರಲಿದೆ. ಟೆನ್ನಿಸ್ ಶೂಟಿಂಗ್ ಕಬಡ್ಡಿ ವಾಲಿಬಾಲ್ ಕುಸ್ತಿ ಜಿಮ್ನಾಸ್ಟಿಕ್ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ನಟ ರವಿಚಂದ್ರನ್ ನಟಿ ರಮ್ಯಾ ಗಾಯಕರಾದ ಅನನ್ಯಾ ಭಟ್ ಅರ್ಜುನ್ ಜನ್ಯಾ ಇತರರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.