ತುಮಕೂರು: ಸೇಬು ಹಣ್ಣು ಪೂರೈಸುವುದಾಗಿ ನಂಬಿಸಿ ಪಾವಗಡ ಪಟ್ಟಣದ ನಾಗೇಶ್ ಎಂಬುವರಿಗೆ ₹4.35 ಲಕ್ಷ ವಂಚಿಸಲಾಗಿದೆ.

ನಾಗೇಶ್ ಸೇಬು ಹಣ್ಣು ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಫೇಸ್ಬುಕ್ನಲ್ಲಿ ‘ಸಾಯಿ ಆ್ಯಪಲ್ ಟ್ರೇಡರ್ಸ್’ ಪೇಜ್ನೋಡಿ ಹಣ್ಣು ಬೇಕಾಗಿದೆ ಎಂದು ಮೆಸೇಜ್ ಮಾಡಿದ್ದಾರೆ. ಫೇಸ್ಬುಕ್ ಪೇಜ್ನಲ್ಲಿ ದೊರೆತ ಮೊಬೈಲ್ ಸಂಖ್ಯೆ ಸಂಪರ್ಕಿಸಿ ಸೇಬು ಹಣ್ಣು ಖರೀದಿ ಬಗ್ಗೆ ಮಾತನಾಡಿದ್ದಾರೆ. ಆರೋಪಿಗಳು ಹಣ್ಣಿನ ವಿಡಿಯೊ ಕಳುಹಿಸಿದ್ದಾರೆ. ಇದನ್ನು ನಂಬಿದ ನಾಗೇಶ್ ಯುಪಿಐ ಐಡಿಗೆ ₹20 ಸಾವಿರ ಮುಂಗಡ ಹಣ ಹಾಕಿದ್ದಾರೆ.

ಲಾರಿಗೆ ಸೇಬು ಹಣ್ಣು ತುಂಬುತ್ತಿರುವ ವಿಡಿಯೊ ಕಳುಹಿಸಿ ಟ್ರಾನ್ಸ್ಫೋರ್ಟ್ ಚಾರ್ಜ್ ಎಂದು ₹40 ಸಾವಿರ ವರ್ಗಾಯಿಸಿಕೊಂಡಿದ್ದಾರೆ. ಸೊಲ್ಹಾಪುರದಲ್ಲಿ ಲಾರಿ ಕೆಟ್ಟು ನಿಂತಿದ್ದು, ರಿಪೇರಿಗೆ ಹಣ ಕಳುಹಿಸುವಂತೆ ₹6.49 ಲಕ್ಷದ ಬಿಲ್ ಹಾಕಿದ್ದಾರೆ. ನಾಗೇಶ್ ಸೆ. 10ರಿಂದ 16ರ ವರೆಗೆ ಹಂತ ಹಂತವಾಗಿ ಒಟ್ಟು ₹4.35 ಲಕ್ಷ ವರ್ಗಾವಣೆ ಮಾಡಿದ್ದಾರೆ. ಆರೋಪಿಗಳು ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಅನುಮಾನಗೊಂಡು ತಡವಾಗಿ ದೂರು ನೀಡಿದ್ದು, ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.