ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ‘ಸಾಂತ್ವನ’ ಕೇಂದ್ರ ಮುಂದುವರಿಸಲು ಆಗ್ರಹ

Last Updated 16 ಮೇ 2020, 17:23 IST
ಅಕ್ಷರ ಗಾತ್ರ

ತುಮಕೂರು: ನೊಂದ, ಅಶಕ್ತ ಮಹಿಳೆಯರಿಗೆ ಧೈರ್ಯ ತುಂಬಿ ಬದುಕಲು ಆಸರೆಯಾಗಿದ್ದ ಸಾಂತ್ವನ ಕೇಂದ್ರಗಳನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಲು ನಿರ್ಧರಿಸಿರುವುದು ವಿವೇಚನಾ ರಹಿತ ನಿರ್ಧಾರ ಎಂದು ವರದಕ್ಷಿಣೆ ವಿರೋಧಿ ವೇದಿಕೆ ಟೀಕಿಸಿದೆ.

ಎರಡು ದಶಕಗಳಿಂದ ಈ ಕೇಂದ್ರಗಳು ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಾ ಬಂದಿವೆ. ಮಹಿಳೆಯರ ಸಂಕಷ್ಟ ಗಮನಿಸಿ ಅಂದಿನ ಸಚಿವೆ ಮೋಟಮ್ಮ ರೂಪಿಸಿದ ಅನನ್ಯ ಯೋಜನೆ ಇದಾಗಿದೆ. ಈ ಕೇಂದ್ರಗಳನ್ನು ಮುಚ್ಚಿದರೆ ಹೆಣ್ಣು ಮಕ್ಕಳು ಅತಂತ್ರ ಸ್ಥಿತಿಗೆ ತಲುಪಬೇಕಾಗುತ್ತದೆ ಎಂದು ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ, ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ತಿಳಿಸಿದ್ದಾರೆ.

ಮಾನಸಿಕವಾಗಿ ನೊಂದ ಮಹಿಳೆಯರನ್ನು ಪರಿವರ್ತಿಸಿ, ಕುಟುಂಬಗಳನ್ನು ಒಗ್ಗೂಡಿಸಿಕೊಂಡು ಬರುತ್ತಿರುವ ಇಂತಹ ಕಲ್ಯಾಣ ಕೇಂದ್ರಗಳನ್ನು ಹಣಕಾಸಿನ ನೆಪ ಹೇಳಿಕೊಂಡು ಸ್ಥಗಿತಗೊಳಿಸಲು ಮುಂದಾಗುತ್ತಿರುವುದು ಸರಿಯಾದ ಕ್ರಮವಲ್ಲ. ಲಾಕ್‍ಡೌನ್‌ನಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾಕಷ್ಟು ಕುಟುಂಬಗಳು ಮಾನಸಿಕವಾಗಿ ನರಳುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸಾಂತ್ವನ ಕೇಂದ್ರಗಳಂತಹ ಸಂಸ್ಥೆಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವಾಗ ದಿಢೀರ್ ಸ್ಥಗಿತಗೊಳಿಸುವ ನಿರ್ಧಾರ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.

ಕೂಡಲೇ ರದ್ದುಪಡಿಸುವ ನಿರ್ಧಾರವನ್ನು ಕೈಬಿಟ್ಟು ಮುಂದುವರೆಯಲು ಅವಕಾಶ ಮಾಡಿಕೊಡಬೇಕು. ಈ ಮೂಲಕ ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT