ತುಮಕೂರು: ಲೋಕಸಭಾ ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ, ಕಾನೂನು ಸುವ್ಯವಸ್ಥೆ ಹಾಳು ಮಾಡುವಂತಹ ಹಿನ್ನೆಲೆಯುಳ್ಳ ಇಬ್ಬರನ್ನು ಗಡಿಪಾರು ಮಾಡಲಾಗಿದೆ.
ಮಧುಗಿರಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಎಸ್.ಎಂ.ನವೀನ್‌ಕುಮಾರ್ (35), ಕುಣಿಗಲ್ ತಾಲ್ಲೂಕಿನ ಹೊಸೂರಿನ ಗಿರೀಶ್ ಗಡಿಪಾರಾದವರು.
ಮದ್ಯ ವಶ: ಪಾವಗಡ ತಾಲ್ಲೂಕಿನ ದೊಮ್ಮತಮರಿ ಗ್ರಾಮದ ಬಳಿ ಶನಿವಾರ ಅಕ್ರಮವಾಗಿ ಸಾಗಿಸುತ್ತಿದ್ದ ₹2 ಲಕ್ಷ ಮೌಲ್ಯದ 400 ಲೀಟರ್ ಸೇಂದಿಯನ್ನು ವಶಕ್ಕೆ ಪಡೆಯಲಾಗಿದೆ. ಬೊಲೆರೊ ವಾಹನದಲ್ಲಿ 4 ಡ್ರಮ್‌ಗಳಲ್ಲಿ ಸೇಂದಿ ಸಾಗಿಸುತ್ತಿದ್ದರು. ಆರೋಪಿ ರಾಮಾಂಜಿನೇಯಲು ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಜಂಕ್ಷನ್ ಬಳಿ ಡಿ.ರಂಗನಾಥ ಎಂಬುವರಿಂದ ಅಕ್ರಮವಾಗಿ ಸಾಗಿಸುತ್ತಿದ್ದ ₹18 ಸಾವಿರ ಮೌಲ್ಯದ ಮದ್ಯದ ಟೆಟ್ರಾ ಪ್ಯಾಕೆಟ್ ಅನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.