ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋವಿನಕೆರೆ: ಅಪಘಾತದಲ್ಲಿ ಕಾನ್‌ಸ್ಟೆಬಲ್ ಸೇರಿ ಇಬ್ಬರು ಸಾವು

Published 30 ನವೆಂಬರ್ 2023, 11:51 IST
Last Updated 30 ನವೆಂಬರ್ 2023, 11:51 IST
ಅಕ್ಷರ ಗಾತ್ರ

ತೋವಿನಕೆರೆ (ತುಮಕೂರು): ಸಿದ್ಧರಬೆಟ್ಟದ ಅರಣ್ಯ ನರ್ಸರಿ ಹತ್ತಿರದ ರಸ್ತೆ ತಿರುವಿನಲ್ಲಿ ದ್ವಿಚಕ್ರ ವಾಹನ ಅಪಘಾತವಾಗಿ ಪೊಲೀಸ್ ಕಾನ್‌ಸ್ಟೆಬಲ್ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ.

ಸಿದ್ಧರಬೆಟ್ಟದಲ್ಲಿ ಮದುವೆಯ ಆರತಕ್ಷತೆಗೆ ಬುಧವಾರ ರಾತ್ರಿ ಬಂದಿದ್ದ ಮೂವರು, ಮದುವೆ ಮುಗಿಸಿಕೊಂಡು ಗುರುವಾರ ಹಿಂದಿರುಗುವಾಗ ರಸ್ತೆ ತಿರುವಿನಲ್ಲಿ ದ್ವಿಚಕ್ರ ವಾಹನ ಅಪಘಾತವಾಗಿದೆ.

ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಪೊಲೀಸ್ ಠಾಣೆ ಕಾನ್‌ಸ್ಟೆಬಲ್ ಮಹೇಶ್ ಹಾಗೂ ಚೆನ್ನಿಗಯ್ಯ ಮೃತಪಟ್ಟಿದ್ದಾರೆ. ಭರತ್ ಎಂಬುವರು ಗಾಯಗೊಂಡಿದ್ದು ಕೊರಟಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರು ಒಂದೇ ಬೈಕ್‌ನಲ್ಲಿ ಬರುತ್ತಿದ್ದರು. ಎಲ್ಲರೂ ಮಧುಗಿರಿ ತಾಲ್ಲೂಕಿನ ಗರಣಿ ಗ್ರಾಮದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT