ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಾವತಿ ನಾಲೆಗೆ ಯುಜಿಡಿ ತ್ಯಾಜ್ಯ: ಪರಿಶೀಲನೆ

ಸ್ಥಳ ಪರಿಶೀಲನೆ ನಡೆಸಿದ ಲೋಕಾಯುಕ್ತ ಪೊಲೀಸರು
Published 14 ಜೂನ್ 2023, 15:15 IST
Last Updated 14 ಜೂನ್ 2023, 15:15 IST
ಅಕ್ಷರ ಗಾತ್ರ

ತಿಪಟೂರು: ನಗರದ ಯುಜಿಡಿ ಕೊಳಚೆ ನೀರು ಹೇಮಾವತಿ ನಾಲೆ, ಈಚನೂರು ಕೆರೆಗೆ ಸೇರುತ್ತಿದ್ದು, ಅದೇ ನೀರನ್ನು ತುಮಕೂರು ಜಿಲ್ಲೆಯ ಜನರು ಬಳಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಲೋಕಾಯುಕ್ತ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.

ನಗರದ ತಾಲ್ಲೂಕು ಪಂಚಾಯಿತಿಯಲ್ಲಿ ಬುಧವಾರ ಲೋಕಾಯುಕ್ತ ಕುಂದುಕೊರತೆ ಸಭೆಯಲ್ಲಿ ಈ ಬಗ್ಗೆ ಸಾರ್ವಜನಿಕರು ದೂರು ನೀಡಿದರು. ತಕ್ಷಣವೇ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ತೆರಳಿದರು.

ನಗರದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದೆ, ಸಾರ್ವಜನಿಕರು ಬಯಲು ಬಹಿರ್ದಸೆ ಮಾಡುತ್ತಿದ್ದು ನಗರಸಭೆ ಸಾರ್ವಜನಿಕ ಶೌಚಾಲಯ ತೆರೆಯುತ್ತಿಲ್ಲ. ನಗರದಲ್ಲಿನ ರಂಗಾಪುರ ರಸ್ತೆಯಲ್ಲಿ ಕೋಳಿ ಅಂಗಡಿಯ ತ್ಯಾಜ್ಯ ಸುರಿಯುತ್ತಿದ್ದು ಸಮರ್ಪಕ ನಿರ್ವಹಣೆ ಇಲ್ಲದೆ, ಮೂಗು ಮುಚ್ಚಿಕೊಂಡು ತೆರಳುವಂತಾಗಿದೆ. ಇಲ್ಲಿಗೆ ಬೀದಿ ನಾಯಿ ಬರುತ್ತಿದ್ದು, ಇಲ್ಲಿನ ಮಾಂಸದ ತ್ಯಾಜ್ಯವನ್ನು ತಿಂದು ಸ್ಥಳೀಯ 5-6 ಜನರಿಗೆ ಕಚ್ಚಿದ್ದರೂ ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ ಎಂದು ಲೋಕಾಯುಕ್ತ ಅಧಿಕಾರಿಗಳಿಗೆ ಜನರು ದೂರು ಸಲ್ಲಿಸಿದರು.

ತುಮಕೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ವಾಲಿಬಾಷಾ ನಗರಸಭೆಯ ಎಇಇ ನಾಗೇಶ್‍ ಅವರನ್ನು ತರಾಟೆಗೆ ತಗೆದುಕೊಂಡರು. ತಿಂಗಳ ಒಳಗಾಗಿ ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದರು.

ಹೊಸಹಳ್ಳಿ ನಿವಾಸಿಗಳು ತಮ್ಮ ಗ್ರಾಮದಲ್ಲಿ ಸುಸ್ಥಿಯಲ್ಲಿದ್ದ ಸರ್ಕಾರಿ ಗರಡಿ ಮನೆಯನ್ನು ದುಷ್ಕರ್ಮಿಗಳು ಒಡೆದು ಹಾಕಿದ್ದು ರಂಗಾಪುರ ಪಿಡಿಒ ಸ್ಥಳ ಪರಿಶೀಲನೆ ಮಾಡಿ ತಿಪಟೂರು ಗ್ರಾಮಾಂತರ ಠಾಣೆಗೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.

ಕೂಡಲೇ ಶಿಸ್ತು ಕ್ರಮಕ್ಕೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ವಾಲಿಬಾಷಾ ಆದೇಶಿಸುವಂತೆ ಪೊಲೀಸರಿಗೆ ಸೂಚಿಸಿದರು.

ಸಾರ್ವಜನಿಕರಿಂದ ವಿವಿಧ ಇಲಾಖೆಗಳ ಸುಮಾರು 15 ದೂರು ದಾಖಲಾಗಿದ್ದು, ಯುಜಿಡಿ ಕೊಳಚೆ ನೀರು ಹೇಮಾವತಿ ನಾಲೆಗೆ ಸೇರುತ್ತಿರುವ ವಿಷಯವಾಗಿ ತ್ವರಿತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಲೋಕಾಯುಕ್ತ ಪೊಲೀಸ್ ಡಿವೈಎಸ್‍ಪಿ ಹರೀಶ್, ಮಂಜುನಾಥ್, ಇನ್‌ಸ್ಪೆಕ್ಟರ್‌ ಸತ್ಯನಾರಾಯಣ, ಶಿವರುದ್ರಪ್ಪ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಗ್ರೇಡ್ 2 ತಹಶೀಲ್ದಾರ್ ಜಗನ್ನಾಥ್ ಇದ್ದರು.

ತಿಪಟೂರಿನ ಯುಜಿಡಿ ನೀರು ಹೇಮಾವತಿ ನಾಲೆಗೆ ಸೇರುತ್ತಿರುವುದನ್ನು ಪರಿಶೀಲಿಸಿದ ಲೋಕಾಯುಕ್ತ ಪೊಲೀಸರು
ತಿಪಟೂರಿನ ಯುಜಿಡಿ ನೀರು ಹೇಮಾವತಿ ನಾಲೆಗೆ ಸೇರುತ್ತಿರುವುದನ್ನು ಪರಿಶೀಲಿಸಿದ ಲೋಕಾಯುಕ್ತ ಪೊಲೀಸರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT