ವಿಕಸಿತ ಭಾರತದ ಕಡೆ

ಕೇಂದ್ರ ಸರ್ಕಾರದ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಎಲ್ಲಾ ವರ್ಗದ ಜನರನ್ನು ಗಮನದಲ್ಲಿ ಇಟ್ಟುಕೊಂಡು ಮಂಡಿಸಲಾಗಿದೆ. ಸೆಮಿ ಕಂಡಕ್ಟರ್ ಯೋಜನೆಗೆ ₹40 ಸಾವಿರ ಕೋಟಿ ಮೀಸಲಿಡಲಾಗಿದೆ. 18 ಔಷಧಿಗಳ ತೆರಿಗೆ ರದ್ದು ಪಡಿಸಲಾಗಿದೆ. ದುಬಾರಿ ಚಿಕಿತ್ಸಾ ವೆಚ್ಚದಿಂದ ಬಡ ಹಾಗೂ ಮಧ್ಯಮ ವರ್ಗದವರನ್ನು ಕಾಪಾಡಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದ್ದಾರೆ.

ದೇಶದ ಆರ್ಥಿಕತೆ ಉತ್ತೇಜಿಸುವ ದೃಷ್ಟಿಯಿಂದ ಕೃಷಿ, ಸಹಕಾರ, ವಾಣಿಜ್ಯ, ವ್ಯಾಪಾರ, ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಕ್ರೀಡಾ, ಪ್ರವಾಸೋದ್ಯಮ, ವಿದೇಶಾಂಗ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವ ಬಜೆಟ್ ಆಗಿದೆ. ವಿಕಸಿತ ಭಾರತದ ಕಡೆಗೆ ದಾಪುಗಾಲು ಇಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗಾಂಧಿ ಹೆಸರಲ್ಲಿ ಯೋಜನೆ

ಮಹಾತ್ಮ ಗಾಂಧೀಜಿ ಹೆಸರಿನಲ್ಲಿ ಗ್ರಾಮೀಣ ಭಾರತದ ಏಳಿಗೆಗಾಗಿ ಮಹತ್ವದ ಯೋಜನೆ ಘೋಷಿಸಲಾಗಿದೆ. ಸದಾ ನಕಾರಾತ್ಮಕ ರಾಜಕೀಯ ಮಾಡುವ ವಿರೋಧಿಗಳಿಗೆ ತಕ್ಕ ಉತ್ತರ ಕೊಡಲಾಗಿದೆ ಎಂದು ಶಾಸಕ ಬಿ.ಸುರೇಶ್ಗೌಡ ತಿಳಿಸಿದ್ದಾರೆ.

ಜನರ ಆಶೋತ್ತರ ನಿಜ ಮಾಡುವ ನಿಟ್ಟಿನಲ್ಲಿ ನಿರ್ಮಲಾ ಅವರು ಬಹುದೊಡ್ಡ ಹೆಜ್ಜೆ ಇರಿಸಿದ್ದಾರೆ. ಜಾಗತಿಕ ಆರ್ಥಿಕ, ರಾಜಕೀಯ ಅನಿಶ್ಚಿತತೆ ನಡುವೆ ರಾಷ್ಟ್ರದ ಆರ್ಥಿಕತೆಯ ಸ್ಥಿರತೆ ಕಾಪಾಡಿಕೊಳ್ಳಲಾಗಿದೆ. ತೆಂಗು ಬೆಳೆಗೆ ಉತ್ತೇಜನ ನೀಡುವ ಕುರಿತು ಘೋಷಿಸಿರುವುದು ರೈತರ ಹಿತ ಕಾಯಲಿದೆ ಎಂದಿದ್ದಾರೆ.

ಅಭಿವೃದ್ಧಿಗೆ ಪೂರಕ

ಕೇಂದ್ರದ ಬಜೆಟ್ನಲ್ಲಿ ದೇಶದ ಪ್ರತಿ ಜಿಲ್ಲೆಗೆ ಬಾಲಕಿಯರ ವಿದ್ಯಾರ್ಥಿ ನಿಲಯ ಘೋಷಿಸಲಾಗಿದೆ. ಹೈದರಾಬಾದ್- ಬೆಂಗಳೂರು, ಚೆನ್ನೈ- ಬೆಂಗಳೂರು ರೈಲ್ವೆ ಕಾರಿಡಾರ್, ಜಲ ಮಾರ್ಗ ಯೋಜನೆಗಳ ಅನುದಾನ ರಾಜ್ಯಕ್ಕೆ ಸಿಗಲಿದೆ. ಈಗಾಗಲೇ ಪ್ರಗತಿಯಲ್ಲಿರುವ ಯೋಜನೆಗೆ ಮುಂದುವರಿದ ಅನುದಾನ ಬರುತ್ತದೆ. ಒಟ್ಟಾರೆಯಾಗಿ ಇದೊಂದು ಅಭಿವೃದ್ಧಿಗೆ ಪೂರಕವಾದ ಬಜೆಟ್ ಎಂದು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ವಿಶ್ಲೇಷಿಸಿದ್ದಾರೆ.

ಅಂಕಿ–ಅಂಶ ಮಾಯಾಜಾಲ

ಕೇಂದ್ರದ ಬಜೆಟ್ ಅಂಕಿ–ಅಂಶಗಳ ಮಾಯಾಜಾಲವಾಗಿದೆ. ಸರ್ಕಾರ ₹5 ಲಕ್ಷ ಕೋಟಿ ಕೊಟ್ಟಿದ್ದೇವೆ ಎನ್ನುತ್ತಿದೆ. ಆದರೆ ಕಳೆದ ವರ್ಷದ ಹಣದಲ್ಲಿ ಶೇ 30 ರಷ್ಟು ಹಣ ಬಳಕೆಯೇ ಆಗಿಲ್ಲ! ಹಣ ಕೊಡುವುದು ದೊಡ್ಡದಲ್ಲ, ಅದು ಅರ್ಹರ ಕೈ ಸೇರುವುದು ಮುಖ್ಯ. ಅಡುಗೆ ಅನಿಲ ಮತ್ತು ಎಣ್ಣೆಯ ಬೆಲೆ ಹೆಚ್ಚಿಸಿ ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಇದು ಸಬಲೀಕರಣವೋ ಅಥವಾ ಶೋಷಣೆಯೋ? ಎಂದು ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಎಂ.ವಿ.ಕಲ್ಯಾಣಿ ಪ್ರಶ್ನಿಸಿದ್ದಾರೆ.

ಕೌಶಲಾಭಿವೃದ್ಧಿಗೆ ಆದ್ಯತೆ

ಮೂಲಸೌಕರ್ಯ, ಶಿಕ್ಷಣ, ತಂತ್ರಜ್ಞಾನ ಮತ್ತು ಕೌಶಲಾಭಿವೃದ್ಧಿಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ ಎಂದು ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎನ್.ಬಿ.ಪ್ರದೀಪ್ಕುಮಾರ್ ಹೇಳಿದ್ದಾರೆ.

ರಸ್ತೆ, ರೈಲು, ನಗರ ಸಂಪರ್ಕ ಮತ್ತು ಡಿಜಿಟಲ್ ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗಿದೆ. ಇದು ಉದ್ಯೋಗ ಸೃಷ್ಟಿ, ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡಲಿದೆ. ರಕ್ಷಣಾ ಕ್ಷೇತ್ರಕ್ಕೆ ನೀಡಿರುವ ಬಲವರ್ಧನೆ ರಾಷ್ಟ್ರ ಭದ್ರತೆಯ ಮೇಲಿನ ಸರ್ಕಾರದ ಬದ್ಧತೆ ತೋರಿಸುತ್ತದೆ. ಕೃಷಿ, ಗ್ರಾಮೀಣ ಅಭಿವೃದ್ಧಿ ಮತ್ತು ಆರೋಗ್ಯ ಕ್ಷೇತ್ರಗಳ ಮೇಲಿನ ಗಮನ ಹರಿಸಿರುವುದು ಸಮತೋಲನಯುತ ಸಮಾಜ ನಿರ್ಮಾಣಕ್ಕೆ ನೆರವಾಗಲಿದೆ ಎಂದಿದ್ದಾರೆ.

ದೃಷ್ಟಿಕೋನ ಇಲ್ಲ

ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಭಾರಿ ನಿರಾಸೆ ಮೂಡಿಸಿದೆ. ರಾಜ್ಯದ ಜನರು ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಘೋಷಿಸಲಾಗುತ್ತದೆ. ಬೆಂಗಳೂರಿನ ಮೂಲ ಸೌಕರ್ಯಕ್ಕೆ ವಿಶೇಷ ಯೋಜನೆ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು. ಇದು ಯಾವುದೂ ಈಡೇರಿಲ್ಲ. ತೆರಿಗೆ ಪಾವತಿದಾರರಿಗೂ ಆಯವ್ಯಯದಿಂದ ನಿರಾಸೆ ಎದುರಾಗಿದೆ.

ನಟರಾಜ್, ಕಾಂಗ್ರೆಸ್ ಮುಖಂಡ

ದೂರದೃಷ್ಟಿಯ ಬಜೆಟ್

ಕೇಂದ್ರದ ಬಜೆಟ್ ದೇಶದ ಅಭಿವೃದ್ಧಿ ಹಾಗೂ ಭವಿಷ್ಯ ಆಧಾರಿತ ದೂರದೃಷ್ಟಿ ಹೊಂದಿದೆ. ಉತ್ಪಾದನಾ ವಲಯದಲ್ಲಿ ಹೆಚ್ಚಳ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪ್ರೋತ್ಸಾಹ, ಇಂಧನ ಉಳಿತಾಯ, ಪರಿಸರ ಸ್ನೇಹಿ ವಾಹನಗಳಿಗೆ ಉತ್ತೇಜನ ಸೇರಿದಂತೆ ಮಹಿಳೆಯರು ಯುವಕರನ್ನು ಒಳಗೊಂಡ ಬಜೆಟ್ ಆಗಿದೆ. ತೆಂಗು, ಗೋಡಂಬಿ ಬೆಳೆಗಳಿಗೆ ಉತ್ತೇಜನ ನೀಡಲಾಗಿದೆ.

ಆರ್.ಕೆ.ಶ್ರೀನಿವಾಸ, ವಿ.ವಿ ಮಾಜಿ ಸಿಂಡಿಕೇಟ್ ಸದಸ್ಯ

ಕಾರ್ಪೊರೇಟ್ ಪರ

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅತ್ಯಂತ ಕಡಿಮೆ ಅನುದಾನ ನೀಡಲಾಗಿದೆ. ಕಾರ್ಪೊರೇಟ್ ಮತ್ತು ಶ್ರೀಮಂತ ಬಂಡವಾಳದಾರರ ಹಿತ ಕಾಯುವ ಬಜೆಟ್ ಆಗಿದೆ. ದುಡಿಯುವ ವರ್ಗಕ್ಕೆ ಆಯವ್ಯಯ ಏನು
ಕೊಟ್ಟಿದೆ? ಸ್ಕೀಮ್ ನೌಕರರಿಗೆ ಕೇಂದ್ರ ಸರ್ಕಾರ ನಿರಾಸೆ ಮೂಡಿಸಿದೆ. ವೇತನ
ಹೆಚ್ಚಳ ಸೇರಿದಂತೆ ಯಾವುದೇ ಭರವಸೆ ನೀಡಿಲ್ಲ.

ಮಂಜುಳಾ ಗೋನವಾರ, ಎಐಯುಟಿಯುಸಿ ರಾಜ್ಯ ಸಮಿತಿ ಸದಸ್ಯೆ

ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ

ಕೇಂದ್ರದ ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ಸಿಕ್ಕಿದೆ. ಖಾಸಗಿ ಸಂಸ್ಥೆ ಸಹಯೋಗದಲ್ಲಿ ಮೆಡಿಕಲ್ ಹಬ್ಗಳ ನಿರ್ಮಾಣ, 3 ಆಯುರ್ವೇದ ವಿಶ್ವವಿದ್ಯಾಲಯ ಘೋಷಿಸಲಾಗಿದೆ. ಕ್ಯಾನ್ಸರ್ ಔಷಧಗಳ ಮೇಲಿನ ಸುಂಕ ವಿನಾಯಿತಿ ಸೇರಿ ಮೊದಲಾದವು ದೇಶದ ಆರೋಗ್ಯ–ವೈದ್ಯಕೀಯ ಕ್ಷೇತ್ರದ ಮತ್ತಷ್ಟು ಬಲವರ್ಧನೆಗೆ ಉತ್ತೇಜನಕಾರಿಯಾಗಿವೆ.

ಡಾ.ಎಸ್.ಸಚ್ಚಿದಾನಂದ್, ಕಾರ್ಯಕಾರಿ ನಿರ್ದೇಶಕರು, ಸಿದ್ಧಗಂಗಾ ವೈದ್ಯಕೀಯ ಸಂಸ್ಥೆ

ದೃಷ್ಟಿಕೋನ ಇಲ್ಲದ ಬಜೆಟ್

ದೃಷ್ಟಿಕೋನವಿಲ್ಲದ, ಕ್ರಿಯಾಶೀಲವಲ್ಲದ ಬಜೆಟ್. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಭಾರಿ ನಿರಾಸೆ ಮೂಡಿಸಿದೆ. ರಾಜ್ಯದ ಜನರು ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಘೋಷಿಸಲಾಗುತ್ತದೆ. ಬೆಂಗಳೂರಿನ ಮೂಲ ಸೌಕರ್ಯಕ್ಕೆ ವಿಶೇಷ ಯೋಜನೆ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು. ಇದು ಯಾವುದೂ ಈಡೇರಿಲ್ಲ. ತೆರಿಗೆ ಪಾವತಿದಾರರಿಗೂ ಆಯವ್ಯಯದಿಂದ ನಿರಾಸೆ ಎದುರಾಗಿದೆ.

ನಟರಾಜ್, ಕಾಂಗ್ರೆಸ್ ಮುಖಂಡ

ದೂರದೃಷ್ಟಿಯ ಬಜೆಟ್

ಕೇಂದ್ರದ ಬಜೆಟ್ ದೇಶದ ಅಭಿವೃದ್ಧಿ ಹಾಗೂ ಭವಿಷ್ಯ ಆಧಾರಿತ ದೂರದೃಷ್ಟಿ ಹೊಂದಿದೆ. ಉತ್ಪಾದನಾ ವಲಯದಲ್ಲಿ ಹೆಚ್ಚಳ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪ್ರೋತ್ಸಾಹ, ಇಂಧನ ಉಳಿತಾಯ, ಪರಿಸರ ಸ್ನೇಹಿ ವಾಹನಗಳಿಗೆ ಉತ್ತೇಜನ ಸೇರಿದಂತೆ ಮಹಿಳೆಯರು ಯುವಕರನ್ನು ಒಳಗೊಂಡ ಬಜೆಟ್ ಆಗಿದೆ. ತೆಂಗು, ಗೋಡಂಬಿ ಬೆಳೆಗಳಿಗೆ ಉತ್ತೇಜನ ನೀಡಲಾಗಿದೆ. ನೀರಾವರಿಗೆ ಹೆಚ್ಚಿನ ಒತ್ತು ಕೊಡಲಾಗಿದೆ.

ಆರ್.ಕೆ.ಶ್ರೀನಿವಾಸ, ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ

ಕಾರ್ಪೊರೇಟ್ ಪರ ಬಜೆಟ್

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅತ್ಯಂತ ಕಡಿಮೆ ಅನುದಾನ ನೀಡಲಾಗಿದೆ. ಕಾರ್ಪೊರೇಟ್ ಮತ್ತು ಶ್ರೀಮಂತ ಬಂಡವಾಳದಾರರ ಹಿತ ಕಾಯುವ ಬಜೆಟ್ ಆಗಿದೆ. ದುಡಿಯುವ ವರ್ಗಕ್ಕೆ ಆಯವ್ಯಯ ಏನು ಕೊಟ್ಟಿದೆ? ಸ್ಕೀಮ್ ನೌಕರರಿಗೆ ಕೇಂದ್ರ ಸರ್ಕಾರ ನಿರಾಸೆ ಮೂಡಿಸಿದೆ. ವೇತನ ಹೆಚ್ಚಳ ಸೇರಿದಂತೆ ಯಾವುದೇ ಭರವಸೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.