ಪಾವಗಡ: ಉತ್ತಮ ಸಮಾಜ ನಿರ್ಮಿಸಲು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಅಗತ್ಯ ಎಂದು ನಿಡಗಲ್ಲು ವಾಲ್ಮೀಕಿ ಆಶ್ರಮದ ಸಂಜಯಕುಮಾರ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ವೈಎನ್ ಹೊಸಕೋಟೆ ಹೋಬಳಿ ಪೋತಗಾನಹಳ್ಳಿಯಲ್ಲಿ ಗುರುವಾರ ಮಹರ್ಷಿ ವಾಲ್ಮೀಕಿ ವಿಗ್ರಹ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಧುನಿಕತೆ ಪರಿಣಾಮವಾಗಿ ಸಮಾಜ, ಸಮುದಾಯಗಳು ಬದಲಾಗುತ್ತಿವೆ. ಮೌಲ್ಯಗಳು ಕುಸಿಯುತ್ತಿದ್ದು, ಆತಂಕದ ವಾತಾವರಣ ಕಂಡುಬರುತ್ತಿದೆ. ನೆಮ್ಮದಿಯ ಬದುಕಿಗೆ ಮೌಲ್ಯಯುತ ಶಿಕ್ಷಣದ ಅಗತ್ಯವಿದೆ ಎಂದರು.

ವಾಲ್ಮೀಕಿ ಸಮುದಾಯದಲ್ಲಿ ಅರಿವಿನ ಕೊರತೆ ಬಹಳಷ್ಟಿದೆ. ಸಮುದಾಯದ ಪ್ರಗತಿಗೆ ಬೇಡಕರಣ್ಣಪ್ಪ, ಏಕಲವ್ಯ, ಶಬರಿ, ಗುಹರ ಹಾದಿಯನ್ನು ತಿಳಿಯಬೇಕಿದೆ. ಚಿತ್ರದುರ್ಗ, ರಾಯಚೂರು, ಸುರಪುರ, ಕುಂದುರ್ಪಿ, ನಿಡಗಲ್ಲು, ರತ್ನಗಿರಿ, ಯಲ್ಲಪ್ಪನಾಯಕನ ಹೊಸಕೋಟೆ ಸೇರಿದಂತೆ ಎಪ್ಪತೇಳು ಪಾಳೆಗಾರರು ಆಳ್ವಿಕೆ ನಡೆಸಿ ಕೆರೆಕುಂಟೆಗಳನ್ನು ಕಟ್ಟಿಸಿ ಜನ ಪ್ರಗತಿ ಕಾರ್ಯಗಳನ್ನು ಮಾಡಿರುವ ಇತಿಹಾಸ ತಿಳಿಯಬೇಕಿದೆ. ಪ್ರತಿ ಗ್ರಾಮದಲ್ಲಿ ವಾಲ್ಮೀಕಿ ವಿಗ್ರಹಗಳ ಪ್ರತಿಷ್ಠಾಪನೆ ಜೊತೆಗೆ ಅವರ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.

ಗ್ರಾಮಪಂಚಾಯಿತಿ ಅಧ್ಯಕ್ಷೆ ಮಂಜುಳ ಮಂಜುನಾಥ್ ಮಾತನಾಡಿದರು.

ಗ್ರಾಮದ ಮಹಿಳೆಯರು ಪಾತಪ್ಪನ ದೇಗುಲದಿಂದ ಪುತ್ಥಳಿವರೆಗೆ ಕಳಶಗಳೊಂದಿಗೆ ಮೆರವಣಿಗೆ ನಡೆಸಿದರು.

ಯಲ್ಲಪ್ಪನಾಯಕನ ಹೊಸಕೋಟೆಯ ರಾಜವಂಶಸ್ಥ ರಾಜ ರವಿಶಂಕರರಾಜು, ಲೋಕೇಶ್ ಪಾಳೇಗಾರ್, ಸಬ್ಇನ್ಸ್ಪೆಕ್ಟರ್ ಮಾಳಪ್ಪನಾಯ್ಕೋಡ್, ಮುಖಂಡ ಹೊಸದುರ್ಗದ ದಿವಾಕರಪ್ಪ, ಮಧುಸೂದನ್, ಸತ್ಯನಾರಾಯಣಪ್ಪ, ನರಸಿಂಹಪ್ಪ, ಭೀಮನಕುಂಟೆ ಶ್ರೀನಿವಾಸ, ಹೊಸಕೋಟೆ ಚಿಕ್ಕೋಬಯ್ಯ, ಗ್ರಾಮ ಪಂಚಾಯಿತಿ ಸದಸ್ಯೆ ಪುಷ್ಪಾವತಿ ಶಿವಣ್ಣ, ಪಾತಣ್ಣ, ಹನುಮಂತರಾಯಪ್ಪ, ಸಣ್ಣಅಕ್ಕಮ್ಮ, ಅಕ್ಕಮ್ಮ, ನಿವೃತ್ತ ಶಿಕ್ಷಕ ಪಾತಣ್ಣ, ಹೊಸದುರ್ಗ ಮಾರಣ್ಣ, ವಾಲ್ಮೀಕಿ ಸಂಘದ ಎ.ಪಾತಣ್ಣ, ಜಯರಾಮ, ಅಕ್ಕಲಪ್ಪ, ಚಿತ್ತಪ್ಪ, ನಾಗರಾಜಪ್ಪ, ಶಿವಲಿಂಗ, ರಾಮಾಂಜಿ, ನರಸಿಂಹ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.