ಹುಳಿಯಾರು: ಕಸ ವಿಲೇವಾರಿಗಿಲ್ಲ ಶಾಶ್ವತ ಸ್ಥಳ: ಮುಗಿಯದ ಗೊಂದಲ
ಆರ್.ಸಿ.ಮಹೇಶ್
Published : 22 ಸೆಪ್ಟೆಂಬರ್ 2025, 6:58 IST
Last Updated : 22 ಸೆಪ್ಟೆಂಬರ್ 2025, 6:58 IST
ಫಾಲೋ ಮಾಡಿ
Comments
ವಾರದ ಹಿಂದೆ ಕಸ ವಿಲೇವಾರಿ ಬಿಕ್ಕಟ್ಟು ಸೃಷ್ಟಿಯಾಗಿ ಬಸ್ ನಿಲ್ದಾಣದಲ್ಲಿ ಕಂಡು ಬಂದಿದ್ದ ಕಸದ ರಾಶಿ
ಹುಳಿಯಾರು ಪಟ್ಟಣದ ಕಸವನ್ನು ಕುದುರೆ ಕಣಿವೆ ಅರಣ್ಯ ಪ್ರದೇಶದಲ್ಲಿ ಸುರಿದಿರುವುದು
ಮಂಜುನಾಥ್
ರತ್ನಮ್ಮ
ಪರಮೇಶ್
ಮಹೇಂದ್ರ
ಪ್ರದೀಪ್
ಹೊನ್ನಪ್ಪ
ಮಹ್ಮದ್ ಹುಸೇನ್
ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಗ್ಗಂಟಾಗಿದ್ದು ತೊರೆಸೂರಗೊಂಡನಹಳ್ಳಿ ಬಳಿ ಸರ್ಕಾರಿ ಜಮೀನಿದ್ದು ಪರಿಶೀಲಿಸಲಾಗಿದೆ. ಶೀಘ್ರ ಸರ್ಕಾರದ ಗಮನಕ್ಕೆ ತಂದು ಘಟಕ ನಿರ್ಮಿಸಲಾಗುವುದು.
ಮಂಜುನಾಥ್ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ
ಪಟ್ಟಣದಲ್ಲಿ ಕಸ ವಿಲೇವಾರಿ ಸಮಸ್ಯೆ ಆಗಿದ್ದು ಪರಿಹಾರ ನೀಡುವ ನಿಟ್ಟಿನಲ್ಲಿ ಚಿಂತಿಸಲಾಗುತ್ತಿದೆ. ಹಲವು ಬಾರಿ ಘಟಕ ನಿರ್ಮಾಣಕ್ಕೆ ಹಿನ್ನಡೆಯಾಗಿದೆ. ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು.
ರತ್ನಮ್ಮ ರೇವಣ್ಣ ಪಟ್ಟಣ ಪಂಚಾಯಿತಿ ಅಧ್ಯಕ್ಷೆ
ತ್ಯಾಜ್ಯ ವಿಲೇವಾರಿ ಘಟಕ ಗುರುತಿಸದಿರುವುದು ಪ್ರಮುಖ ಸಮಸ್ಯೆಯಾಗಿದೆ. ಸರ್ಕಾರ ಮತ್ತು ಸ್ಥಳೀಯ ಆಡಳಿತದ ನಡುವೆ ಜಾಗದ ಹಕ್ಕುಗಳ ಕುರಿತು ಗೊಂದಲವಿದೆ. ಕೂಡಲೇ ಜಾಗ ಗುರ್ತಿಸಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಬೇಕು.
ಪರಮೇಶ್ ಹುಳಿಯಾರು.
ಪಟ್ಟಣದ ಕಸವನ್ನು ಅರಣ್ಯ ಪ್ರದೇಶದಲ್ಲಿ ಸುರಿಯುವುದು ಅಪರಾಧ. ಪ್ರಾಣಿ-ಪಕ್ಷಿಗಳು ಕಸವನ್ನು ತಿಂದು ಸಾಯುತ್ತವೆ. ಜತೆಗೆ ಅರಣ್ಯದಲ್ಲಿ ಪ್ಲಾಸ್ಟಿಕ್ ಹಾಕುವುದು ಎಷ್ಟು ಸರಿ. ಹೊನ್ನಪ್ಪ ಕೆಂಕೆರೆ ಇತ್ತೀಚೆಗೆ ಪಟ್ಟಣದಲ್ಲಿ ಕಸದ ಸಮಸ್ಯೆ ಎದುರಾಗಿದೆ. ಸ್ಥಳೀಯ ಆಡಳಿತ ಈ ಬಗ್ಗೆ ತುರ್ತು ಕ್ರಮ ಜರುಗಿಸಬೇಕು.
ಎಂ.ಮಹೇಂದ್ರ ಹುಳಿಯಾರು
ತಿಂಗಳಿಗೊಮ್ಮೆ ಇಡೀ ಪಟ್ಟಣವೇ ಗಬ್ಬೆದ್ದು ನಾರುತ್ತಿದ್ದು ಗ್ರಾಹಕರೂ ಅಂಗಡಿಗಳಿಗೆ ಬರಲು ಬೇಸರಿಸುತ್ತಿದ್ದು ಇದರಿಂದ ವ್ಯವಹಾರಕ್ಕೂ ಹಿನ್ನಡೆಯಾಗುತ್ತಿದೆ.
ಪ್ರದೀಪ್ ಹುಳಿಯಾರು.
ವಿಭಾಗಾಧಿಕಾರಿ ತಾತ್ಕಾಲಿಕವಾಗಿ ಚಿಕ್ಕನಾಯಕನಹಳ್ಳಿ ತ್ಯಾಜ್ಯ ಘಟಕದಲ್ಲಿ ಕಸ ಸುರಿಯಲು ಆದೇಶ ನೀಡಿದ್ದಾರೆ. ಪುರಸಭೆ ಸಭೆಯಲ್ಲಿ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ. 25 ಕಿ.ಮೀ ಕಸ ಸಾಗಣೆ ಮಾಡಲು ಹೆಚ್ಚು ಖರ್ಚಾಗುತ್ತದೆ.
ಮಹ್ಮದ್ ಹುಸೇನ್ ಗುಂಡ ಚಿ.ನಾ.ಹಳ್ಳಿ ಪುರಸಭೆ ನಾಮನಿರ್ದೇಶಿತ ಸದಸ್ಯ