ಭಾನುವಾರ, 21 ಸೆಪ್ಟೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
14/09/2025 - 20/09/2025
ವಾರ ಭವಿಷ್ಯ | ಸೆ.21 ರಿಂದ 27ರವರೆಗೆ: ಈ ರಾಶಿಯವರಿಗೆ ವಾಹನ ಖರೀದಿಸುವ ಯೋಗವಿದೆ
Published 20 ಸೆಪ್ಟೆಂಬರ್ 2025, 23:30 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ನಿಮ್ಮಲ್ಲಿ ಮುನ್ನುಗ್ಗುವ ಶಕ್ತಿ ಮತ್ತು ಉತ್ಸಾಹವಿರುತ್ತದೆ. ಆದಾಯವು ಸ್ವಲ್ಪ ಕಡಿಮೆ ಇರುತ್ತದೆ. ನಿಮ್ಮ ಮತ್ತು ಹಿರಿಯರ ಜತೆಗಿನ ಸಂಬಂಧ ಉತ್ತಮವಾಗಿರುತ್ತದೆ. ಕೃಷಿಭೂಮಿಯನ್ನು ಕೊಳ್ಳಲು ಬಹಳ ಉತ್ಸಾಹ ತೋರುವಿರಿ. ಸರ್ಕಾರಿ ಸಂಬಂಧಿತ ವ್ಯವಹಾರಗಳಲ್ಲಿ ನಿರೀಕ್ಷಿತ ಪ್ರಗತಿ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಸಂಗಾತಿಯು ನಿಮಗೆ ಸಹಕಾರ ನೀಡಿದರೂ, ಅವರಿಗೆ ನಿಮ್ಮ ಮೇಲೆ ಕೋಪ ಇರುತ್ತದೆ. ಸಂಗಾತಿಯ ಕಡೆಯವರ ಸಂಬಂಧಗಳು ಈಗ ಸುಧಾರಿಸುತ್ತದೆ. 
ವೃಷಭ
ತಾಳ್ಮೆ ಮತ್ತು ಸಮಾಧಾನ ಚಿತ್ತದಿಂದ ವ್ಯವಹರಿಸುವುದು ಬಹಳ ಒಳ್ಳೆಯದು. ಈಗ ಆದಾಯವು ಉತ್ತಮವಾಗಿರುತ್ತದೆ. ಭಾಷಣಕಾರರಿಗೆ ಉತ್ತಮ ವೇದಿಕೆಗಳು ದೊರೆತು ಆದಾಯ ಹೆಚ್ಚುತ್ತದೆ. ಮೂಳೆ ವೈದ್ಯರಿಗೆ ಬೇಡಿಕೆ ಹೆಚ್ಚುತ್ತದೆ. ಅನಗತ್ಯ ಖರ್ಚುಗಳು ಬರಬಹುದು. ಆಹಾರದ ವ್ಯತ್ಯಾಸದಿಂದ ಸ್ವಲ್ಪ ಅಜೀರ್ಣವಾಗಬಹುದು. ಹಿರಿಯರಿಂದ ಆರ್ಥಿಕ ಸಹಾಯ ಸಿಗಬಹುದು. ಪ್ರೀತಿ, ಪ್ರೇಮ ಸಫಲವಾಗುತ್ತವೆ. ಅಧ್ಯಾಪಕರಿಗೆ ಸ್ವಲ್ಪ ಏಳಿಗೆ ಇರುತ್ತದೆ.
ಮಿಥುನ
ಮನಸ್ಸಿನಲ್ಲಿ ಸ್ಥಿರತೆ ಇರುತ್ತದೆ. ಆದಾಯವು ನಿರೀಕ್ಷೆಯ ಹಂತವನ್ನು ತಲುಪುತ್ತದೆ. ವಾಹನ ಖರೀದಿ ಯೋಗವಿದೆ. ಸ್ವಯಂ ಉದ್ಯೋಗವನ್ನು ಆರಂಭಿಸಬೇಕೆಂದುಕೊಂಡವರು ಮುಂದುವರಿಯಬಹುದು. ಗುಡಿ ಕೈಗಾರಿಕೆ ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ. ಬಹಳ ಹಿಂದೆ ಕೊಟ್ಟಿದ್ದ ಸಾಲ ಹಂತ ಹಂತವಾಗಿ ವಾಪಸ್ಸು ಬರುವ ಸಾಧ್ಯತೆಗಳಿವೆ. ಸರ್ಕಾರಿ ಕಚೇರಿಯ ಕೆಲಸಗಳು ಫಲಪ್ರದವಾಗುತ್ತವೆ. ವೃತ್ತಿಯಲ್ಲಿ ಸ್ವಲ್ಪ ಏಳಿಗೆಯನ್ನು ಕಾಣಬಹುದು.
ಕರ್ಕಾಟಕ
ದೂರ ಪ್ರಯಾಣದಿಂದ ಆಗಬೇಕಿದ್ದ ಕೆಲಸಗಳು ಈಗ ಸುಗಮವಾಗಿ ಆಗುತ್ತವೆ. ಆದಾಯವು ಸಾಮಾನ್ಯ ಸ್ಥಿತಿಯಲ್ಲಿ ಇರುತ್ತದೆ. ನಿಮ್ಮ ವ್ಯವಹಾರಗಳ ಬಗ್ಗೆ ಸರಿಯಾಗಿ ಮೇಲ್ವಿಚಾರಣೆ ಮಾಡುವುದು ಬಹಳ ಮುಖ್ಯ. ಹಿರಿಯರೊಂದಿಗಿನ ವಾದ-ವಿವಾದಗಳು ನಿಮಗೆ ಹಿನ್ನಡೆಯುಂಟುಮಾಡಬಹುದು. ಆಸ್ತಿ ಮಾಡುವ ಯೋಗವಿದೆ. ನಿಮ್ಮ ಹುಡುಗಾಟದ ನಡವಳಿಕೆ ನಿಮ್ಮನ್ನು ಅಪಹಾಸ್ಯಕ್ಕೆ ಗುರಿ ಮಾಡಬಹುದು. ಮಹಿಳೆಯರಿಗೆ ಧಾರ್ಮಿಕ ಕೆಲಸಗಳಲ್ಲಿ ಅತೀವ ಆಸಕ್ತಿ ಮೂಡುತ್ತದೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹೆಚ್ಚಿನ ಪರಿಶ್ರಮ ಪಡಬೇಕು. 
ಸಿಂಹ
ಮಕ್ಕಳ ವಿದ್ಯಾಭ್ಯಾಸದ ಪ್ರಗತಿ ಉತ್ತಮವಾಗಿರುತ್ತದೆ. ಆದಾಯವು ನಿರೀಕ್ಷಿತ ಹಂತದಲ್ಲಿರುತ್ತದೆ. ಬಂಧುಗಳ ಸಹಕಾರ ಸಿಗುವುದಿಲ್ಲ. ಅರ್ಥಪೂರ್ಣ ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿ ವಿಚಾರ ವಿನಿಮಯ ಮಾಡುವಿರಿ. ಭೂಮಿಯ ವ್ಯವಹಾರ ಮಾಡುವವರಿಗೆ ಆದಾಯವಿರುತ್ತದೆ. ಪ್ರಮುಖ ಯೋಜನೆಗಳನ್ನು ಆರಂಭ ಮಾಡುವ ಮುನ್ನ ಪರಿಣಿತ ವ್ಯಕ್ತಿಗಳೊಡನೆ ಸೂಕ್ತ ಸಮಾಲೋಚಿಸುವುದು ಅತ್ಯವಶ್ಯಕ. ಗಂಟಲು ಮೂಗಿಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
ಕನ್ಯಾ
ನಿಮ್ಮಲ್ಲಿ ಅಹಂ ತುಂಬಿರುತ್ತದೆ. ಆದಾಯವು ಕಡಿಮೆ ಇರುತ್ತದೆ. ಭೂಮಿಯ ಅಭಿವೃದ್ಧಿ ಕೆಲಸಗಳನ್ನು ಮಾಡುವವರಿಗೆ ಸಾಕಷ್ಟು ಮುನ್ನಡೆ ಇರುತ್ತದೆ. ಸಾರ್ವಜನಿಕ ಕೆಲಸಗಳನ್ನು ಮಾಡುವಾಗ ಅಪವಾದ ಬರುವ ಸಾಧ್ಯತೆಗಳಿವೆ. ನಿಮ್ಮ ಆದಾಯದಷ್ಟೇ ಖರ್ಚು ಇರುವುದರಿಂದ ಹಣದ ನಿರ್ವಹಣೆಯನ್ನು ಸರಿಯಾಗಿ ಮಾಡಿರಿ. ಈಗಿರುವ ಪಾಲುದಾರಿಕೆಯ ವ್ಯವಹಾರಗಳನ್ನು ಅತಿಯಾಗಿ ಪರೀಕ್ಷಿಸಲು ಹೋಗದಿರುವುದು ಒಳ್ಳೆಯದು. ಕುಟುಂಬದಲ್ಲಿ ಮತ್ತು ವ್ಯವಹಾರದಲ್ಲಿ ಸರಿಯಾದ ಸಮತೋಲನವನ್ನು ಕಾಯ್ದುಕೊಳ್ಳುವುದು ಉತ್ತಮ. ಆಹಾರ ವ್ಯತ್ಯಾಸದಿಂದ ಆರೋಗ್ಯ ತಪ್ಪಬಹುದು.
ತುಲಾ
ನಿಮ್ಮ ಹಿಂಬಾಲಕರು ನಿಮಗೆ ಶತ್ರುಗಳಾಗಬಹುದು. ನಿಮ್ಮ ಒರಟು ಮಾತಿನಿಂದ ಕೆಲವು ಸಂಬಂಧಗಳು ಕಳೆದುಹೋಗಬಹುದು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಸ್ವಲ್ಪ ನಿರುತ್ಸಾಹ ಮೂಡಬಹುದು. ಬೆನ್ನು ನೋವು ಅಥವಾ ಮೂಳೆ ನೋವು ಕಾಣಿಸಬಹುದು. ಹಿರಿಯರ ಮಾತಿಗೆ ಮನ್ನಣೆ ನೀಡುವುದರಿಂದ ಬರಲಿರುವ ಅವಘಡ ತಪ್ಪುತ್ತದೆ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಮುನ್ನಡೆ ಇರುತ್ತದೆ. ನಿಮ್ಮ ವ್ಯವಹಾರ ವಿಸ್ತರಣೆಯ ನಿಮಿತ್ತ ತಿರುಗಾಟವಾಗಬಹುದು.
ವೃಶ್ಚಿಕ
ನಿಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣಬಹುದು. ಉದ್ಯೋಗಾಂಕ್ಷಿಗಳಿಗೆ ಹೊಸ ಉದ್ಯೋಗಕ್ಕಾಗಿ ದೂರದೂರಿಗೆ ಹೋಗಬೇಕಾದ ಸಂದರ್ಭವಿದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಒಡಹುಟ್ಟಿದವರಿಂದ ನಿಮಗೆ ಸಾಕಷ್ಟು ಸಹಾಯ ಸಿಗುತ್ತದೆ. ಸಂಸಾರದಲ್ಲಿ ಕಾವೇರಿದ ವಾತಾವರಣ ಮೂಡುತ್ತದೆ. ಕಬ್ಬಿಣದ ಉಪ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ವಿದೇಶದಲ್ಲಿರುವವರಿಗೆ ಆಸ್ತಿಯನ್ನು ಕೊಳ್ಳುವ ಯೋಗವಿದೆ. ವೃತ್ತಿಯಲ್ಲಿ ಅಭಿವೃದ್ಧಿ ಇರುತ್ತದೆ.
ಧನು
ನಿರೀಕ್ಷಿತ ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣುವಿರಿ. ವಿದೇಶದಲ್ಲಿ ಓದು ಮುಗಿಸಿ ಉದ್ಯೋಗ ಹುಡುಕುತ್ತಿರುವವರಿಗೆ ಶುಭ ಸಮಾಚಾರವಿರುತ್ತದೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಸ್ತ್ರೀಯರಿಗೆ ಸಂತೋಷವಿರುತ್ತದೆ. ನಿಮ್ಮ ಸಂಗಾತಿಯ ಆದಾಯದಲ್ಲಿ ಸ್ವಲ್ಪ ಏರಿಕೆಯನ್ನು ಕಾಣಬಹುದು. ಬಂಧುಗಳೊಡನೆ ಸಂತೋಷ ಕೂಟಗಳಲ್ಲಿ ಭಾಗವಹಿಸುವ ಯೋಗವಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಸಾಮಾನ್ಯ ಫಲಿತಾಂಶವಿರುತ್ತದೆ. ವ್ಯವಹಾರಗಳಲ್ಲಿ ನಿಮ್ಮ ಪಾಲು ನಿಮಗೆ ದೊರಕುತ್ತದೆ.
ಮಕರ
ಆರ್ಥಿಕ ಪರಿಸ್ಥಿತಿಯಲ್ಲಿ ಸ್ವಲ್ಪ ಪ್ರಗತಿಯನ್ನು ಕಾಣಬಹುದು. ನಿಮ್ಮ ಶತ್ರುಗಳು ಯಾರೆಂದು ಗೊತ್ತಾಗಿ ಅವರ ಮೇಲೆ ಕ್ರಮ ಕೈಗೊಳ್ಳುವ ಅವಕಾಶ ಒದಗಿಬರುತ್ತದೆ. ನಿಮ್ಮ ವ್ಯವಹಾರಗಳು ವಿಸ್ತರಣೆಯಾಗುವ ಲಕ್ಷಣಗಳಿವೆ. ವಿದೇಶಿ ಭಾಷಾ ಕಲಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರಗತಿ ಇರುತ್ತದೆ. ಭೂಮಿಯ ವ್ಯವಹಾರ ಮಾಡುವ ಮಧ್ಯವರ್ತಿಗಳ ಆದಾಯ ಹೆಚ್ಚುತ್ತದೆ. ಶ್ರದ್ಧೆಯಿಂದ ಕೆಲಸ ಮಾಡಿ ಮೇಲಾಧಿಕಾರಿಗಳಿಂದ ಮೆಚ್ಚುಗೆ ಗಳಿಸುವಿರಿ. 
ಕುಂಭ
ಹಿಂದೆ ನೀವು ನಿಮ್ಮ ವ್ಯವಹಾರದಲ್ಲಿ ಕೈಗೊಂಡ ನಿರ್ಣಯಗಳು ಈಗ ಉತ್ತಮ ಫಲವನ್ನು ಕೊಡುತ್ತವೆ. ಆರ್ಥಿಕ ಸ್ಥಿತಿಯು ಸಮತೋಲನದಲ್ಲಿರುತ್ತದೆ. ಹೊಸ ವಾಹನವನ್ನು ಕೊಳ್ಳುವ ಯೋಗವಿದೆ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಆದಾಯದಲ್ಲಿ ಸ್ವಲ್ಪ ಹೆಚ್ಚಳವಿರುತ್ತದೆ. ಕೃಷಿ ಸಂಬಂಧಿತ ಯಂತ್ರೋಪಕರಣಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚುತ್ತದೆ. ರಾಜಕೀಯ ರಂಗದಲ್ಲಿ ಇರುವವರಿಗೆ ಪ್ರಾಮುಖ್ಯ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು ಇರುತ್ತದೆ.
ಮೀನ
ಖಾದ್ಯ ತೈಲಗಳನ್ನು ಮಾರಾಟ ಮಾಡುವವರ ವ್ಯಾಪಾರ ಹೆಚ್ಚಾಗಿ ಲಾಭ ಕೂಡ ಹೆಚ್ಚಾಗುತ್ತದೆ. ಆರ್ಥಿಕ ಸ್ಥಿತಿಯು ಹೇಳಿಕೊಳ್ಳುವಂತೆ ಇರುವುದಿಲ್ಲ. ಸ್ವಂತ ಆರೋಗ್ಯದಲ್ಲಿ ವ್ಯತ್ಯಯವನ್ನು ಕಾಣಬಹುದು. ದ್ರವ ರೂಪದ ವಸ್ತುಗಳನ್ನು ಮಾರಾಟ ಮಾಡುವವರ ವ್ಯವಹಾರ ವೃದ್ಧಿಸುತ್ತದೆ. ಹೈನುಗಾರಿಕೆಯನ್ನು ಮಾಡುತ್ತಿರುವವರಲ್ಲಿ ಸಾಕಷ್ಟು ಏಳಿಗೆಯನ್ನು ಕಾಣಬಹುದು. ಕೈತೋಟಗಳನ್ನು ಅಭಿವೃದ್ಧಿಪಡಿಸುವವರಿಗೆ ಬೇಡಿಕೆ ಬರುತ್ತದೆ.
ADVERTISEMENT
ADVERTISEMENT