ಬೆಂಗಳೂರು: ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್ (ಔಟಾಗದೇ 64) ಅವರು ಮಹಾರಾಷ್ಟ್ರ ವಿರುದ್ಧ ಸತತ ಎರಡನೇ ಅರ್ಧಶತಕ ದಾಖಲಿಸಿದರು. ಮೊದಲ ಇನಿಂಗ್ಸ್ನಲ್ಲಿ 13 ರನ್ಗಳ ಮುನ್ನಡೆ ಪಡೆದ ಕರ್ನಾಟಕ ತಂಡವು ಎರಡನೇ ಇನಿಂಗ್ಸ್ನಲ್ಲಿ ಮುಕೇಶ್ ಚೌಧರಿ (70ಕ್ಕೆ 3) ಅವರ ಚುರುಕಾದ ದಾಳಿಯ ಮಧ್ಯೆಯೂ ಸವಾಲಿನ ಮೊತ್ತ ಗಳಿಸುವತ್ತ ಸಾಗಿದೆ.

ಪುಣೆಯ ಎಂಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯತ್ತಿರುವ ರಣಜಿ ಟ್ರೋಫಿಯ ಬಿ ಗುಂಪಿನ ಪಂದ್ಯದಲ್ಲಿ ಅಲ್ಪ ರನ್ಗಳ ಇನಿಂಗ್ಸ್ ಮುನ್ನಡೆ ಗಳಿಸಿದ ಪ್ರವಾಸಿ ತಂಡವು ಮೂರನೇ ದಿನವಾದ ಸೋಮವಾರ 49.4 ಓವರ್ಗಳಲ್ಲಿ 5 ವಿಕೆಟ್ಗೆ 144 ರನ್ ಗಳಿಸಿದೆ. ಒಟ್ಟಾರೆಯಾಗಿ 157 ರನ್ಗಳ ಮುನ್ನಡೆ ಸಾಧಿಸಿದೆ.

ಅನೀಶ್ ಕೆ.ವಿ. (17) ಮತ್ತು ಮಯಂಕ್ ಮೊದಲ ವಿಕೆಟ್ ಜೊತೆಯಾಟದಲ್ಲಿ 50 ರನ್ ಸೇರಿಸಿ ಉತ್ತಮ ಅಡಿಪಾಯ ಹಾಕಿದರು. 15ನೇ ಓವರ್ನಲ್ಲಿ ವಿಕಿ ಓಸ್ಟ್ವಾಲ್ ಅವರ ಆಫ್ ಸ್ಪಿನ್ ದಾಳಿಗೆ ಅನೀಶ್ ಔಟಾಗುವ ಮೂಲಕ ಜೊತೆಯಾಟ ಮುರಿಯಿತು. ನಂತರದಲ್ಲಿ ಮಯಂಕ್ ಅವರನ್ನು ಸೇರಿಕೊಂಡ ಕೆ.ಎಲ್. ಶ್ರೀಜಿತ್ (29) ಎರಡನೇ ವಿಕೆಟ್ ಜೊತೆಯಾಟದಲ್ಲಿ 48 ರನ್ ಗಳಿಸಿದರು.

ಈ ಹಂತದಲ್ಲಿ ಮುಕೇಶ್ ಬಿಗು ಬೌಲಿಂಗ್ ದಾಳಿಸಿ ಸಂಘಟಿಸಿ ಮೂರು ಪ್ರಮುಖ ವಿಕೆಟ್ಗಳನ್ನು ಪಡೆದು ಸಂಭ್ರಮಿಸಿದರು. ಅದರಲ್ಲಿ ಕಳೆದ ಪಂದ್ಯದ ದ್ವಿಶತಕ ವೀರರಾದ ಕರುಣ್ ನಾಯರ್ (15) ಮತ್ತು ಸ್ಮರಣ್ ಆರ್. (4) ಅವರ ವಿಕೆಟ್ಗಳು ಸೇರಿದ್ದವು. ಅದಕ್ಕೂ ಮುನ್ನ ಶ್ರೀಜಿತ್ ಕೂಡ ಮುಕೇಶ್ ಅವರಿಗೆ ವಿಕೆಟ್ ಒಪ್ಪಿಸಿದ್ದರು. ಮೊದಲ ಇನಿಂಗ್ಸ್ನಲ್ಲಿ 10 ರನ್ ಗಳಿಸಿದ್ದ ಅವರು ಮೂರನೇ ಕ್ರಮಾಂಕದಲ್ಲಿ ಮತ್ತೆ ನಿರಾಸೆ ಮೂಡಿಸಿದರು.

ಒಂದು ಹಂತದಲ್ಲಿ 2 ವಿಕೆಟ್ಗೆ 131 ರನ್ ಗಳಿಸಿ ಸುರಕ್ಷಿತ ಸ್ಥಿತಿಯಲ್ಲಿದ್ದ ಮಯಂಕ್ ಪಡೆ ನಂತರದ 14 ರನ್ ಅಂತರದಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಮೊದಲ ಇನಿಂಗ್ಸ್ನಲ್ಲಿ 80 ರನ್ ಗಳಿಸಿದ್ದ ಮಯಂಕ್ ಎಚ್ಚರಿಕೆಯ ಆಟ ಪ್ರದರ್ಶಿಸಿ, ಕೊನೆಯ ದಿನಕ್ಕೆ ಆಟವನ್ನು ಕಾಯ್ದುಕೊಂಡಿದ್ದಾರೆ. 145 ಎಸೆತಗಳನ್ನು ಎದುರಿಸಿದ ಅವರು ಆರು ಬೌಂಡರಿಗಳನ್ನು ಬಾರಿಸಿದರು.

ಇದಕ್ಕೂ ಮುನ್ನ ಮಹಾರಾಷ್ಟ್ರ ತಂಡವು 6 ವಿಕೆಟ್ಗೆ 200 ರನ್ಗಳೊಂದಿಗೆ ದಿನದಾಟವನ್ನು ಆರಂಭಿಸಿತು. ಜಲಜ್ ಸಕ್ಸೆನಾ (72, 147ಎ) ಹಾಗೂ ಓಸ್ಟ್ವಾಲ್ (20, 92ಎ) ಅವರು ತಂಡದ ಮೊತ್ತವನ್ನು 256 ರನ್ವರೆಗೆ ಹಿಗ್ಗಿಸಿದರು. ಈ ಜೋಡಿಯು ಸುಮಾರು 30 ಓವರ್ಗಳನ್ನು ಆಡಿ 73 ರನ್ ಸೇರಿಸಿತು. ನಂತರದಲ್ಲಿ ಅವರಿಬ್ಬರ ವಿಕೆಟ್ ಪಡೆಯುವ ಮೂಲಕ ವಿದ್ವತ್ ಕಾವೇರಪ್ಪ ಅವರು ಕರ್ನಾಟಕದ ಪಾಳಯದಲ್ಲಿ ಸಂಭ್ರಮ ಮೂಡಿಸಿದರು.

282 ರನ್ಗೆ ಎಂಟು ವಿಕೆಟ್ ಕಳೆದುಕೊಂಡ ಆತಿಥೇಯ ತಂಡಕ್ಕೆ ಇನಿಂಗ್ಸ್ ಮುನ್ನಡೆ ಗಳಿಸಲು 31 ರನ್ ಅಗತ್ಯವಿತ್ತು. ಈ ಹಂತದಲ್ಲಿ ರಾಮಕೃಷ್ಣ ಘೋಷ್ (36;46ಎ) ಅವರು ಹೋರಾಟ ತೋರಿದರು. ಅವರಿಗೆ ಸಾಥ್ ನೀಡುವ ಪ್ರಯತ್ನದಲ್ಲಿದ್ದ ಆರ್. ಎನ್. ಗುರ್ಬಾನಿ (1;16ಎ) ಅವರನ್ನು ಮೊಹ್ಸಿನ್ ಖಾನ್ ಸ್ಪಿನ್ ಬಲೆಗೆ ಕೆಡವಿದರು. ಕೊನೆಯಲ್ಲಿ ಘೋಷ್ ಅವರನ್ನು ರನೌಟ್ ಮಾಡುವ ಮೂಲಕ ಕರ್ನಾಟಕದ ಆಟಗಾರರು ಮಹತ್ವದ ಮುನ್ನಡೆ ಗಳಿಸಿದರು. ಆತಿಥೇಯ ತಂಡವು 99.2 ಓವರ್ಗಳಲ್ಲಿ 300 ರನ್ಗಳಿಗೆ ಆಲೌಟ್ ಆಯಿತು. ಕರ್ನಾಟಕ ತಂಡವು ಮೊದಲ ಇನಿಂಗ್ಸ್ನಲ್ಲಿ 313 ರನ್ ಗಳಿಸಿತ್ತು.

ಸಂಕ್ಷಿಪ್ತ ಸ್ಕೋರ್:

ಮೊದಲ ಇನಿಂಗ್ಸ್: ಕರ್ನಾಟಕ: 111 ಓವರ್ಗಳಲ್ಲಿ 313. ಮಹಾರಾಷ್ಟ್ರ: 99.2 ಓವರ್ಗಳಲ್ಲಿ 300 (ಭಾನುವಾರ 6 ವಿಕೆಟ್ಗೆ 200) (ಜಲಜ್ ಸಕ್ಸೆನಾ 72, ರಾಮಕೃಷ್ಣ ಘೋಷ್ 36; ವಿದ್ವತ್ ಕಾವೇರಪ್ಪ 74ಕ್ಕೆ 2, ಶ್ರೇಯಸ್ ಗೋಪಾಲ್ 70ಕ್ಕೆ 4, ಮೊಹ್ಸಿನ್ ಖಾನ್ 64ಕ್ಕೆ 3). ಎರಡನೇ ಇನಿಂಗ್ಸ್: ಕರ್ನಾಟಕ: 49.4 ಓವರ್ಗಳಲ್ಲಿ 5 ವಿಕೆಟ್ಗೆ 144 (ಮಯಂಕ್ ಅಗರವಾಲ್ ಔಟಾಗದೇ 64, ಕೆ.ಎಲ್.ಶ್ರೀಜಿತ್ 29; ಮುಕೇಶ್ ಚೌಧರಿ 70ಕ್ಕೆ 3)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.