ಕೊಡಿಗೇನಹಳ್ಳಿ: ತಾಲ್ಲೂಕಿನಲ್ಲಿ ಭಾನುವಾರ ರಾತ್ರಿ ಮಳೆ ಸುರಿದಿದೆ. ಕೊರಟಗೆರೆ ಭಾಗದಲ್ಲಿ ಮಳೆಯಾದ್ದರಿಂದ ಜಯಮಂಗಲಿ ನದಿ ಸಣ್ಣದಾಗಿ ಹರಿದಿದೆ.
ದೊಡ್ಡಮಾಲೂರು ಹಾಗೂ ಮೈದನಹಳ್ಳಿ ಕೆರೆಗಳಿಗೆ ನೀರು ಸರಾಗವಾಗಿ ಹರಿದರೆ, ಎತ್ತರದಲ್ಲಿರುವ ಕೊಡಿಗೇನಹಳ್ಳಿ ಕೆರೆ ಕಾಲುವೆಗೆ ನೀರು ಹರಿಸಲೆಂದು ಕೊಡಿಗೇನಹಳ್ಳಿ ಗ್ರಾಮದ ನ್ಯಾತಪ್ಪ, ರಾಜಗೋಪಾಲರೆಡ್ಡಿ ವೀರಾಪುರದ ಸೇತುವೆ ಬಳಿ ಜೆಸಿಬಿ ಮೂಲಕ ಕೆಲಸ ಮಾಡಿಸಿದ ನಂತರ ಕಾಲುವೆಗೆ ನೀರು ಹರಿಯಿತು.