ಶನಿವಾರ, ಡಿಸೆಂಬರ್ 14, 2019
21 °C

ಸಿದ್ಧಗಂಗಾ ಮಠಕ್ಕೆ ನೊಬೆಲ್ –ತಜ್ಞರ ಜೊತೆ ಸಮಾಲೋಚನೆ: ಎಂ.ಬಿ.ಪಾಟೀಲ

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

ತುಮಕೂರು: ‘ಶಿವಕುಮಾರ ಸ್ವಾಮೀಜಿ ಅವರಿಗೆ ಇಂದಲ್ಲಾ ನಾಳೆ ಮರಣೋತ್ತರವಾಗಿ ಭಾರತರತ್ನ ನೀಡಬಹುದು’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಸಿದ್ಧಗಂಗಾಮಠದಲ್ಲಿ ನಡೆಯುತ್ತಿರುವ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇದನ್ನೂ ಓದಿಕೇಂದ್ರದಲ್ಲಿ ನಮಗೆ ಅಧಿಕಾರ ಸಿಕ್ಕರೆ ಸ್ವಾಮೀಜಿಗೆ ‘ಭಾರತರತ್ನ

‘ಮರಣೋತ್ತರವಾಗಿ ನೊಬೆಲ್ ನೀಡಲು ಸಾಧ್ಯವಿಲ್ಲ. ಆದ್ದರಿಂದ ಸಿದ್ದಗಂಗಾ ಮಠದ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆ ಗುರುತಿಸಿ ನೊಬೆಲ್ ನೀಡಬಹುದು. ಈ ಸಂಬಂಧ ಅನುಸರಿಸಬಹುದಾದ ಪ್ರಕ್ರಿಯೆ‌ಗಳ ಕುರಿತು ತಜ್ಞರ ಜೊತೆ ಸಮಾಲೋಚಿಸುತ್ತಿದ್ದೇನೆ. ಇದಕ್ಕೆ ಮುಖ್ಯಮಂತ್ರಿ ಸಹಕಾರ ನೀಡಬೇಕು’ ಎಂದು ಅವರು ಕೋರಿದರು.

ಇದನ್ನೂ ಓದಿಗಮನ ಸೆಳೆಯುತ್ತಿರುವ ಪುಷ್ಪಾಲಂಕೃತ ಗದ್ದುಗೆ

‘ಶರಣರ ತತ್ವ ಮತ್ತು ಆದರ್ಶಗಳನ್ನು ಎತ್ತಿ ಹಿಡಿದವರು ಶಿವಕುಮಾರ ಸ್ವಾಮೀಜಿ. ಪೂಜ್ಯರನ್ನು ಭೇಟಿ ಮಾಡಲು ಬಂದಾಗ ನನಗೆ ಹಿತವಚನ. ಯಾರೇ ಬಂದರು ಅವರಿಗೆ ಪ್ರಸಾದ ಸ್ವೀಕರಿಸಿ ಹೋಗಿ ಎನ್ನುತ್ತಿದ್ದರು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ವಾಮೀಜಿಯನ್ನು ಸ್ಮರಿಸಿದರು.

ಇದನ್ನೂ ಓದಿ‘ನನಗೂ ಸಿದ್ದರಾಮಯ್ಯಗೂ ಪುಸ್ತಕ ಕೊಟ್ಟು ಓದಿಸಿದ್ದರು ಸ್ವಾಮೀಜಿ’

‘ಸಿದ್ಧಲಿಂಗ ಸ್ವಾಮೀಜಿ ಅವರಿಗೂ ನಾವೆಲ್ಲ ಶಿವಕುಮಾರ ಸ್ವಾಮೀಜಿ ಅವರಿಗೆ ಕೊಟ್ಟಷ್ಟೇ ಸಹಕಾರವನ್ನು ನೀಡಬೇಕು’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು