ದೇವೇಗೌಡರು ಎಲ್ಲಿರುತ್ತಾರೊ ಆ ಸರ್ಕಾರ ಬಿದ್ದು ಹೋಗುತ್ತೆ–ಶಿವರಾಜ್ ಸಿಂಗ್ ಚೌಹಾಣ್

ಗುರುವಾರ , ಮಾರ್ಚ್ 21, 2019
25 °C

ದೇವೇಗೌಡರು ಎಲ್ಲಿರುತ್ತಾರೊ ಆ ಸರ್ಕಾರ ಬಿದ್ದು ಹೋಗುತ್ತೆ–ಶಿವರಾಜ್ ಸಿಂಗ್ ಚೌಹಾಣ್

Published:
Updated:

ತುಮಕೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಎಲ್ಲಿರುತ್ತಾರೊ, ಯಾವ ಸರ್ಕಾರದಲ್ಲಿರುತ್ತಾರೊ ಆ ಸರ್ಕಾರ ಬಿದ್ದು ಹೋಗುತ್ತದೆ ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟೀಕಿಸಿದರು.

ಬಿಜೆಪಿ ರೈತ ಮೋರ್ಚಾ ಘಟಕವು ಆಯೋಜಿಸಿದ್ದ ಮುಂದಿನ ಚುನಾವಣೆ ಪ್ರಣಾಳಿಕೆ ಕುರಿತ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ, ಪ್ರಧಾನಿಯಾದಾಗ ಅವರ ಸರ್ಕಾರಗಳು ಬಿದ್ದು ಹೋದವು.ಅವರ ಮಗ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರ ಬಿದ್ದು ಹೋಗಿತ್ತು. ಮತ್ತೆ ಈಗ ಮುಖ್ಯಮಂತ್ರಿ ಆಗಿದ್ದಾರೆ. ಇದು ಬಿದ್ದು ಹೋಗುತ್ತದೆ ಎಂದು ಹೇಳಿದರು.

* ಇದನ್ನೂ ಓದಿ: ಮಹಾ ಘಟ ಬಂಧನ್ ಅಲ್ಲ ಸ್ವಾರ್ಥ ಘಟಬಂಧನ್: ಶಿವರಾಜ್ ಸಿಂಗ್ ಚೌಹಾಣ್

ಸ್ವಚ್ಛ ಭಾರತ್, ಫಸಲ್ ಬೀಮಾ, ರೈತರ ಖಾತೆಗೆ  ವರ್ಷಕ್ಕೆ ₹6 ಸಾವಿರ ಜಮಾ, ಆಯುಷ್ಮಾನ್ ಭಾರತ್ ಮುಂತಾದ ಯೋಜನೆಗಳಿಂದ ದೇಶಕ್ಕೆ ಪ್ರಧಾನಿ ಮೋದಿ ಅವರು ನವಭಾರತ ನಿರ್ಮಾಣಕ್ಕೆ ಕಾರಣರಾಗಿದ್ದಾರೆ ಎಂದರು.

ದೇಶದ ರೈತರ ಏಳಿಗೆಗೆ ಪೂರಕವಾದ ಸಲಹೆಗಳನ್ನು ಕೊಡಬೇಕು. ಪ್ರಣಾಳಿಕೆ ರಚನೆಯಲ್ಲಿ ಸೂಕ್ತವಾದವುಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದರು.

ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಲಕ್ಷ್ಮಣ ಸವದಿ, ಉಪಾಧ್ಯಕ್ಷ ಶಿವಪ್ರಸಾದ್, ಶಾಸಕರಾದ ಜಿ.ಬಿ. ಜ್ಯೋತಿ ಗಣೇಶ್,  ಜೆ.ಸಿ. ಮಾಧುಸ್ವಾಮಿ, ಮಾಜಿ ಶಾಸಕ ಬಿ.ಸುರೇಶಗೌಡ, ಮಾಜಿ ಸಂಸದ ಜಿ.ಎಸ್. ಬಸವರಾಜ್, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಬ್ಯಾಟರಂಗೇಗೌಡ ಇದ್ದರು

ಬರಹ ಇಷ್ಟವಾಯಿತೆ?

 • 17

  Happy
 • 1

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !