ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ತಿಂಗಳಲ್ಲಿ ತುಮಕೂರಿಗೆ ನಿರಂತರ ನೀರು ಪೂರೈಕೆ : ಶಾಸಕ ಜ್ಯೋತಿ ಗಣೇಶ್

Last Updated 5 ಫೆಬ್ರುವರಿ 2020, 16:25 IST
ಅಕ್ಷರ ಗಾತ್ರ

ತುಮಕೂರು:ನಗರಕ್ಕೆ ದಿನದ 24 ಗಂಟೆಗಳೂ ಕುಡಿಯುವ ನೀರು ಪೂರೈಕೆ ಮಾಡುವಯೋಜನೆ ಕಾಮಗಾರಿ ಆರು ತಿಂಗಳಲ್ಲಿಪೂರ್ಣಗೊಳ್ಳಲಿದೆ. ನೀರು ಶುದ್ಧೀಕರಣ ಘಟಕದಿಂದ ನೇರವಾಗಿ ನೀರು ಪೂರೈಸಲಾಗುವುದು ಎಂದು ಶಾಸಕ ಬಿ.ಜಿ.ಜ್ಯೋತಿಗಣೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘₹ 196 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಈಗಾಗಲೇ 2 ವಾರ್ಡ್‍ಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೊಳಿಸಲಾಗಿದೆ. ಇದರಿಂದ ಶೇ 90ರಷ್ಟು ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ’ ಎಂದರು.

44 ಓವರ್‌ಹೆಡ್ ಟ್ಯಾಂಕ್‌ಗಳನ್ನು ತುಂಬಿಸಿ ಅಲ್ಲಿಂದ ವಾಲ್‍ಮೆನ್‍ಗಳ ಸಹಾಯವಿಲ್ಲದೆ ನೀರು ಹರಿಸಲಾಗುವುದು. ಈ ಯೋಜನೆಯಿಂದ ಮುಂದಿನ ದಿನಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಅಗತ್ಯ ಇಲ್ಲದಂತೆ ಆಗುತ್ತದೆ. ಪಾಲಿಕೆ ಎಂಜಿನಿಯರ್‌ಗಳು ಈ ಬಗ್ಗೆ ನಿಗಾವಹಿಸಬೇಕು ಎಂದರು.

ಸ್ಮಾರ್ಟ್‍ಸಿಟಿಯಿಂದ ಜೂನಿಯರ್ ಕಾಲೇಜು ಮೈದಾನದಲ್ಲಿ ಕ್ರೀಡಾ ಸಂಕೀರ್ಣ, ಅಂಗನವಾಡಿ, ಅಮಾನಿಕೆರೆಯ ಗಾಜಿನ ಮನೆ ಪಕ್ಕದಲ್ಲಿ ತುಮಕೂರು ಸಿಟಿ ಸಂತೆ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.ಗೋಷ್ಠಿಯಲ್ಲಿ ಮುಖಂಡ ವೇದಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT