ಸೋಮವಾರ, ಡಿಸೆಂಬರ್ 9, 2019
17 °C

ಪ್ರಾಕೃತಿ ಸಂಪತ್ತು ರಕ್ಷಣೆ ಅನಿವಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಸಮಾಜಕಾರ್ಯ ವಿಭಾಗದಿಂದ ಇತ್ತೀಚೆಗೆ ವಿಶ್ವ ಓಜೋನ್ ದಿನಾಚರಣೆ, ಜಲಶಕ್ತಿ ಅಭಿಯಾನ ಹಾಗೂ ಪ್ಲಾಸ್ಟಿಕ್ ಬಳಕೆಯ ನಿಷೇಧ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆವಹಿಸಿದ್ದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ಉನ್ನತ ಶಿಕ್ಷಣದ ಆಶಯ ಸಮಾಜಕ್ಕೆ ಗುಣಾತ್ಮಕ ಮತ್ತು ಪರಿಮಾಣಾತ್ಮಕ ಕೊಡುಗೆ ನೀಡುವುದಷ್ಟೇ ಅಲ್ಲದೆ ಸುಸ್ಥಿರ ಪರಿಸರ ಅಭಿವೃದ್ಧಿ ಸಾಧಿಸುವುದು ಹಾಗೂ ಯುವ ಸಮುದಾಯವನ್ನು ಪರಿಸರ ಜಾಗೃತಿಗಾಗಿ ಸಿದ್ಧಗೊಳಿಸುವುದೂ ಆಗಿದೆ ಎಂದರು.

ಮಾನವ ನಿರ್ಮಿತ ಕ್ರಿಯೆಗಳ ಮೂಲಕ ಪರಿಸರಕ್ಕೆ ವಿಪತ್ತು ಒದಗುತ್ತದೆ. ವಿದ್ಯಾರ್ಥಿಗಳು ಗಿಡಗಳನ್ನು ಬೆಳೆಸುವುದರಿಂದ ಪ್ರಕೃತಿ ಸೌಂದರ್ಯ ಹೆಚ್ಚುತ್ತದೆ. ಮಾಲಿನ್ಯ ನಿಯಂತ್ರವಾಗುತ್ತದೆ. ಜಾಗತಿಕ ತಾಪಮಾನ ಮತ್ತು ಪರಿಸರಕ್ಕೆ ಸಮಸ್ಯೆ ಎದುರಾಗಿರುವುದರಿಂದ ಪ್ರಾಕೃತಿಕ ಸಂಪತ್ತು ರಕ್ಷಿಸುವುದು ಅನಿವಾರ್ಯವಾಗಿದೆ ಎಂದರು.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಾತಾವರಣದ ವೈಪರೀತ್ಯಗಳು ಹೆಚ್ಚಾಗಿದೆ. ಭಾರತದಲ್ಲಿ ಇದರ ಪರಿಣಾಮವಿದ್ದರೂ ವೈವಿಧ್ಯ ಪ್ರಾಕೃತಿಕ ಸಂಪನ್ಮೂಲಗಳು ಇಲ್ಲಿನ ಸಾಂಸ್ಕೃತಿಕ ಪರಂಪರೆಗೆ ಒಗ್ಗಿಕೊಳ್ಳುವ ಪಾಠ ಕಲಿಸುತ್ತಿವೆ ಎಂದು ಹೇಳಿದರು.

ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೊಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಜಾನಾಯಕ್, ಮನುಷ್ಯನು ತನ್ನ ದೈನಂದಿನ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ವೇಳೆ ತಾನು ಜೀವಿಸುತ್ತಿರುವ ಪರಿಸರದ ಬಗ್ಗೆ ಕಾಳಜಿ ಕಳೆದುಕೊಳ್ಳದೆ ಪರಿಸರ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಸಂತೋಷ್ ಕುಮಾರ್, ಸುಜಾತಾ, ಭೂಷಣ್ ಕುಮಾರ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು