ಗುರುವಾರ , ಸೆಪ್ಟೆಂಬರ್ 19, 2019
26 °C

ರಾಯರ ಆರಾಧನೆ; ರಾಘವೇಂದ್ರಸ್ವಾಮಿ ಮಠಗಳಲ್ಲಿ ಭಕ್ತರ ದಂಡು

Published:
Updated:
Prajavani

ತುಮಕೂರು: ರಾಘವೇಂದ್ರಸ್ವಾಮಿಗಳ 348ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ನಗರದ ವಿವಿಧ ಬಡಾವಣೆಯಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾನುವಾರ ನಡೆಯಿತು.

ಮಹೋತ್ಸವದ ಕೊನೆಯ ದಿನವಾಗಿದ್ದರಿಂದ ಪೂರ್ವಾರಾಧನೆ, ಮಧ್ಯಾರಾಧನೆ ದಿನ ರಾಯರ ದರ್ಶನ ಪಡೆಯದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಠಗಳಿಗೆ ತೆರಳಿ ದರ್ಶನ ಪಡೆದರು.

ಚಿಕ್ಕಪೇಟೆ ಬಡಾವಣೆಯ ದೊಡ್ಡ ರಾಯರಮಠ, ಚಿಕ್ಕ ರಾಯರಮಠ, ಶೆಟ್ಟಿಹಳ್ಳಿಯ ರಾಘವೇಂದ್ರಸ್ವಾಮಿಮಠ, ಹನುಮಂತಪುರದ ರಾಘವೇಂದ್ರ ಸ್ವಾಮಿಮಠ, ಕ್ಯಾತ್ಸಂದ್ರದ ರಾಯರಮಠದಲ್ಲಿ ಭಕ್ತರು ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದರು. 

ಮಧ್ಯಾಹ್ನ ನಡೆದ ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಭಕ್ತರಿಗೆ ತೀರ್ಥ, ಪ್ರಸಾದ ವ್ಯವಸ್ಥೆಯನ್ನು ಮಠದ ಸೇವಾ ಸಮಿತಿಗಳು ಮಾಡಿದ್ದವು.

Post Comments (+)