ತುಮಕೂರು: ನಗರದ ಎಸ್.ಎಸ್.ಪುರಂ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಎಂ.ಸಿ.ಕಾಲೊನಿಯಲ್ಲಿ ಒಳಚರಂಡಿಯ (ಯುಜಿಡಿ) ಚೇಂಬರ್‌ಗಳನ್ನು ಅಳವಡಿಸಲಾಗಿದೆ. ಕಾಮಗಾರಿ ಪೂರ್ಣಗೊಂಡು ಹದಿನೈದು ದಿನಗಳು ಕಳೆದಿಲ್ಲ. ಮತ್ತೆ ಇಲ್ಲಿಯೇ ರಸ್ತೆ ಕಾಮಗಾರಿ ಕೈಗೊಂಡ ಪರಿಣಾಮ ಚೇಂಬರ್‌ಗಳ ಮೇಲೆ ರೋಡ್ ರೋಲರ್ ಹರಿದು ಹೊಸದಾಗಿ ಅಳವಡಿಸಿದ್ದ ಯುಜಿಡಿ ಚೇಂಬರ್‌ಗಳ ಮೇಲ್ಭಾಗ ಪುಡಿಪುಡಿ ಆಗಿದೆ ಎಂದು ಮಾಜಿ ಶಾಸಕ ಡಾ.ರಫೀಕ್ ಅಹಮ್ಮದ್ ದೂರಿದ್ದಾರೆ.

ಕಾಮಗಾರಿ ಪೂರ್ಣಗೊಂಡ ಮೇಲೆ ಅದರ ಕ್ಯೂರಿಂಗ್ ಆಗುವ ಮುನ್ನವೇ ಮತ್ತೊಂದು ಕಾಮಗಾರಿ ಮಾಡಲು ಅವಕಾಶ ನೀಡಿದ್ದರಿಂದ ಚೇಂಬರ್‌ಗಳ ಮೇಲ್ಭಾಗ ಹಾಳಾಗಿದೆ ಎಂದಿದ್ದಾರೆ.

ನಗರದಲ್ಲಿ ಪದೇ ಪದೇ ಇಂತಹ ಅಸಮರ್ಪಕ ಮತ್ತು ಅವೈಜ್ಞಾನಿಕ ಕಾಮಗಾರಿಗಳು ನಡೆಯುತ್ತಿವೆ. ಜನರು ಪಾವತಿಸುವ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ. ಜನಪ್ರತಿನಿಧಿಗಳು, ಅಧಿಕಾರಿಗಳ ನಡುವೆ ಯಾವುದೇ ಮುಂದಾಲೋಚನೆ, ಸಮನ್ವಯ ಇಲ್ಲ. ಇದರಿಂದ ತುಮಕೂರು ನಗರದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.