ಮಂಗಳವಾರ, ಅಕ್ಟೋಬರ್ 27, 2020
28 °C

ಎಡೆಯೂರು: ಭಕ್ತರ ಸಂಖ್ಯೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ಲಾಕ್‌ಡೌನ್ ನಿಯಮ ಸಡಲಿಕೆಯಿಂದಾಗಿ ತಾಲ್ಲೂಕಿನ ಯಡೆಯೂರು ಸಿದ್ದಲಿಂಗೇಶ್ವರ ಕ್ಷೇತ್ರಕ್ಕೆ ಭೇಟಿ ನೀಡುವ  ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ದೇವಾಲಯದ ಆದಾಯ ಸಂಗ್ರಹಣೆಯಲ್ಲೂ ಏರಿಕೆಯಾಗಿದೆ.

ಲಾಕ್‌ಡೌನ್‌ನಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಅನೇಕ ದಿನ ಭಕ್ತರಿಲ್ಲದೆ ಅರ್ಚಕರು ಮಾತ್ರ ಪೂಜೆ ನೆರೆವೇರಿಸಿದ್ದರು. ‌

ಮೊದಲ ಹಂತದ ಲಾಕ್‌ಡೌನ್‌ ಸಡಿಲಿಕೆಯಾದಾಗ ಕೊರೊನಾ ಭಯದಿಂದ ನಿತ್ಯ 500ರಿಂದ 1,000 ಜನರು ಮಾತ್ರ ಭೇಟಿ ನೀಡುತ್ತಿದ್ದರು.

ಆಗಸ್ಟ್‌ನಲ್ಲಿ ಲಾಕ್‌ಡೌನ್‌ ನಿಯಮಗಳಲ್ಲಿ ಮತ್ತಷ್ಟು ಸಡಿಲಿಕೆಯಾಗಿತ್ತು. ಕೋವಿಡ್‌ ಮುಂಜಾಗೃತ ಕ್ರಮಗಳನ್ನು ಅನುಸರಿಸಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಹಾಗಾಗಿ ಭಕ್ತರ ಸಂಖ್ಯೆ 5 ಸಾವಿರದಿಂದ 6 ಸಾವಿರಕ್ಕೇರಿತು ಎಂದು ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ತಿಳಿಸಿದ್ದಾರೆ.

ಮಂಗಳವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಕಳೆದ 47 ದಿನಗಳಲ್ಲಿ ₹ 19.83 ಲಕ್ಷ ಸಂಗ್ರಹವಾಗಿದೆ. ಅಕ್ಟೋಬರ್ 2ರಂದು 10 ಸಾವಿರ, 4ರಂದು 6 ಸಾವಿರ ಭಕ್ತರು ಭೇಟಿ ನೀಡಿ ದರ್ಶನ ಪಡೆದಿದ್ದಾರೆ.

ಎಣಿಕೆಯಲ್ಲಿ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ, ವ್ಯವಸ್ಥಾಪಕ ಮಂಜುನಾಥ್, ಎಸ್‌ಬಿಐ ವ್ಯವಸ್ಥಾಪಕಿ ರೇವತಿ, ಎಂಜನಿಯರ್ ರೇಣುಕಾ ಪ್ರಸಾದ್, ಲೆಕ್ಕಿಗರಾದ ತಿಮ್ಮದಾಸಯ್ಯ, ಶರಣ್, ನಾಗರಾಜು, ಚಂದ್ರಯ್ಯ ಇದ್ದರು.

ಅಕ್ಟೋಬರ್ 2ರಂದು 10 ಸಾವಿರ, 4ರಂದು ಭಾನುವಾರ 6ಸಾವಿರ ಭಕ್ತರು ಭೇಟಿ ನೀಡಿ ದರ್ಶನ ಪಡೆದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.