ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತಿ ಶಂಕಾಸ್ಪದ ಸಾವು

Last Updated 10 ಫೆಬ್ರುವರಿ 2021, 2:39 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ತುಮಕೂರು: ಪ್ರಿಯತಮನನ್ನು ಭೇಟಿಮಾಡಿ ಬಂದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಕ್ಯಾತ್ಸಂದ್ರದಲ್ಲಿ ನಡೆದಿದೆ.

ಅಸ್ವಸ್ಥಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫರೋನಾ (19) ಮಂಗಳವಾರ ಸಾವನ್ನಪ್ಪಿದ್ದಾರೆ.

ಫರೋನಾ ಹಾಗೂ ನಯೀಮ್ ಪರಸ್ಪರ ಪ್ರೀತಿಸುತ್ತಿದ್ದು, ಫೆ. 5ರಂದು ಇಬ್ಬರು ಭೇಟಿಯಾಗಿದ್ದರು. ನಂತರ ಮನೆಗೆ ಬಂದ ಫರೋನಾ ಕೊಠಡಿ ಬಾಗಿಲು ಹಾಕಿಕೊಂಡಿದ್ದರು. ಸಂಜೆ ಮನೆಯವರು ಬಾಗಿಲು ತಟ್ಟಿದಾಗ ತೆಗೆದಿಲ್ಲ. ತಕ್ಷಣ ಬಾಗಿಲು ಮುರಿದು ಒಳಗೆ ಹೋಗಿ ನೋಡಿದ್ದು, ಅಸ್ವಸ್ಥಗೊಂಡು ಬಾಯಲ್ಲಿ ನೊರೆ ಬಂದಿರುವುದು ಕಂಡುಬಂದಿದೆ. ನಂತರ ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತಿತ್ತು. ಕಳೆದ ಐದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

‘ಪ್ರೀತಿಸುತ್ತಿದ್ದ ನಯೀಮ್ ಅವರೇ ವಿಷ ಕುಡಿಸಿದ್ದಾರೆ. ಅಥವಾ ವಿಷದ ವಸ್ತು ತಿನ್ನಿಸಿದ್ದಾರೆ’ ಎಂದು ಮೃತ ಯುವತಿಯ ಪೋಷಕರು ದೂರು ನೀಡಿದ್ದಾರೆ. ಆರೋಪಿ ನಯೀಮ್ ಅವರನ್ನು ಕ್ಯಾತ್ಸಂದ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT