ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಥ್ನಿಕ್‌ ಡೇ ರಂಗು

ನಮ್‌ ಕ್ಯಾಂಪಸ್‌
Last Updated 1 ಮೇ 2014, 6:41 IST
ಅಕ್ಷರ ಗಾತ್ರ

ಲೇ... ಲೈಟ್‌ ಮೆರೂನ್‌ ಸೀರೆ ನನ್ಗೆ ಚೆನ್ನಾಗಿ ಕಾಣ್ಸುತ್ತಾ.. ಲೋ ಮಗಾ ಪಂಚೆನೇ ಸಿಕ್ತಿಲ್ವೋ.. ಗುಬ್ಬಿಯ ಸಿಐಟಿ ಕಾಲೇಜಿನ ಎಥ್ನಿಕ್‌ ಡೇ ದಿನ ವಿದ್ಯಾರ್ಥಿಗಳಿಂದ ಕೇಳಿಬರುತ್ತಿದ್ದ ಮಾತುಗಳಿವು.

ಬಹುತೇಕ ಕಾಲೇಜುಗಳಲ್ಲಿ ಈಗ ಎಥ್ನಿಕ್‌ ಡೇ ರಂಗು. ಸಾಂಪ್ರದಾಯಿಕ ಸೀರೆ, ಲಂಗ ದವಣಿ ಹೆಣ್ಮಕ್ಕಳ ಫ್ಯಾಷನ್‌ ಲೋಕದಿಂದ ಮಾಯವಾಗುತ್ತಿರುವ ಈ ದಿನಗಳಲ್ಲಿ ಎಥ್ನಿಕ್‌ ಡೇ ಹೆಸರಿನಲ್ಲಿ ಇಂಥ ಧರಿಸುಗಳಿಗೆ ಜೀವ ಬಂದಿದೆ.

ಸೀರೆ ಹುಟ್ಟು ಬರುವ ಹುಡುಗಿಯರನ್ನು ನೀಡಲು ಚೆಂದ. ಪಂಚೆ ಧರಿಸಿ ಬರುವ ಹುಡುಗರೂ ಇಷ್ಟವಾಗುತ್ತಾರೆ. ಸಿದ್ಧಾರ್ಥ ಕಾಲೇಜಿನಲ್ಲಿ ಎಥ್ನಿಕ್‌ ಡೇ ದಿನ ಗೆಳೆಯನೊಬ್ಬ ಎತ್ತಿನ ಗಾಡಿ ಏರಿ ಬಂದಿದ್ದ. ಕುದುರೆ ಏರಿ ಬಂದವರೂ ಇದ್ದರು. ಮಡಕೆ ಬಡಿಯುವ ಸ್ಪರ್ಧೆಯ ಮೋಜಿನ ಖುಷಿಯೇ ಬೇರೆ ಎಂದವರು ಸಿಐಟಿ ಕಾಲೇಜಿನ ಯತೀಶ್‌.

ಕಾಲೇಜಿನಲ್ಲಿ ಎಥ್ನಿಕ್‌ ಡೇ ಸಂಭ್ರಮಕ್ಕೆ ಎಲ್ಲರೂ ಸಾಂಪ್ರದಾಯಿಕ ಉಡುಗೆಗಳಲ್ಲಿ ಬರ್‍ಬೇಕು ಎಂಬುದೇ ನಿಯಮ. ಹೀಗಾಗಿಯೇ ಮೊದಲ ಆಯ್ಕೆ ಸೀರೆ ಎನ್ನುತ್ತಾರೆ ಸಿಐಟಿಯು ಕಾಲೇಜಿನ ಗೀತಾಂಜಲಿ.

ಹುಡುಗರು ಪಂಚೆ ಹುಡುವ ಕಸರತ್ತು ನಡೆಸುತ್ತಾರೆ. ಕಚ್ಚೆ ಪಂಚೆ ಉಡುವುದನ್ನು ಕಲಿಯಲು ಅಪ್ಪಂದಿರು, ಸ್ನೇಹಿತರಿಗೆ ಅಂಟಿಕೊಳ್ಳುತ್ತಾರೆ. ಕೆಲವರು ಎಲ್ಲರ ಗಮನ ಸೆಳೆಯುವಂತ ಡ್ರೆಸ್‌ಗಾಗಿ ದಿನಗಟ್ಟಲೆ ಅಲೆಯುವವರು ಇದ್ದಾರೆ.

ಹುಡುಗರು ಪಂಚೆ ಬದಲಿಗೆ ಸೂಟು– ಬೂಟಿನಲ್ಲಿ ಮಿಂಚುವುದೂ ಇದೆ. ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ಈ ವ್ಯತ್ಯಾಸವನ್ನು ಗುರುತಿಸಬಹುದು ಎನ್ನುತ್ತಾರೆ ಕಾವ್ಯಾ.

ಎಥ್ನಿಕ್‌ಡೇ ಸಂಭ್ರಮಕ್ಕೆ ಸಿದ್ಧರಾಗಿ ಬಂದಿದ್ದ ಹುಡುಗ, ಹುಡುಗಿಯರಿಗೆ ಮಿಸ್ಟರ್‌ ಎಥ್ನಿಕ್‌, ಮಿಸ್‌ ಎಥ್ನಿಕ್‌ ಬಿರುದು ನೀಡಲಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT