ಕುಣಿಗಲ್: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೃಷ್ಣಕುಮಾರ್ ಸೋಲಿಗೆ ನಾನೇ ಕಾರಣ ಎಂದು ಬಿಜೆಪಿ ಮುಖಂಡ, ಶಾಸಕ ಆರ್.ಅಶೋಕ್ ತಿಳಿಸಿದರು.

ತಾಲ್ಲೂಕಿನ ಗವಿಮಠದಲ್ಲಿ ಭಾನುವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕೃಷ್ಣಕುಮಾರ್, ‘ನನ್ನ ಸೋಲಿಗೆ ಅಶೋಕ್ ಕಾರಣ’ ಎಂದು ಹೇಳಿದ್ದಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿ, ‘ನನ್ನಿಂದ ತಪ್ಪಾಗಿದೆ’ ಎಂದರು.

ಕೃಷ್ಣಕುಮಾರ್ ತೀವ್ರ ಪೈಪೋಟಿ ನೀಡುತ್ತಾರೆ ಎಂಬುದು ಗೊತ್ತಾಗಿದ್ದರೆ ನಾನು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿ ಗೆಲುವಿಗೆ ಸಹಕಾರಿಯಾಗುತ್ತಿದೆ ಎಂದ ಅಶೋಕ್, ಈಗ ನನ್ನ ಶಿಷ್ಯನನ್ನು ಗೆಲ್ಲಿಸಿ. ನಿಮ್ಮನ್ನು ಶಾಸಕರನ್ನಾಗಿ ನಾವು ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.

ಚಿತ್ರ ನಟಿ ರಕ್ಷಿತಾ ಮಾತನಾಡಿ ಯುಪಿಎ ಸರ್ಕಾರದಲ್ಲಿ ಮಹಿಳೆಯರಿಗೆ ಮೀಸಲಾತಿ, ರಕ್ಷಣೆ ದೊರೆಯಲಿಲ್ಲ ಎಂದರು.
ಅಭ್ಯರ್ಥಿ ಮುನಿರಾಜು ಮಾತನಾಡಿ ಬಿಜೆಪಿಗೆ ಕಾಂಗ್ರೆಸ್ ಪ್ರಬಲ ಪ್ರತಿಸ್ಪರ್ಧಿ. ಸಚಿವ, ಸಂಸದರ ದರ್ಪಕ್ಕೆ ಇತಿಶ್ರೀ ಹಾಕುವ ವಿಷಯದೊಂದಿಗೆ ಮತ ಕೇಳುತ್ತಿದ್ದೇನೆ ಎಂದರು.

ಮಾಜಿ ಸಚಿವ ರಾಮಚಂದ್ರೇಗೌಡ, ಮುಖಂಡರಾದ ಡಿ.ಕೃಷ್ಣ ಕುಮಾರ್, ಚಿಕ್ಕರಾಮಣ್ಣ, ನಾರಾಯಣ ಗೌಡ, ಕೃಷ್ಣರೆಡ್ಡಿ, ಇಸ್ಮಾಯಿಲ್, ಕೆ.ಎಂ.ತಿಮ್ಮಪ್ಪ, ಅರುಣ್ಕುಮಾರ್, ಶಶಿಕಲಾ, ಪದ್ಮಾ, ರಂಗಸ್ವಾಮಿ, ಎಸ್ಟಿಡಿ ಶ್ರೀನಿವಾಸ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.