ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಕ್ಕೊ ಪ್ರವೀಣ

ಆಡೂ ಆಟ ಆಡು
Last Updated 23 ಅಕ್ಟೋಬರ್ 2013, 5:54 IST
ಅಕ್ಷರ ಗಾತ್ರ

ಕೊಕ್ಕೊ ಅಂಗಳದಲ್ಲಿ ಎದುರಾಳಿಗಳ ಕೈಗೆ ಸಿಗದೇ ಓಡು ವುದೇ ಒಂದು ಪಟ್ಟು. ಕೊಕ್ಕೊ ಆಟದ ಇಂತಹ ಹಲವು ಪಟ್ಟುಗಳಲ್ಲಿ ಹಿಡಿತ ಸಾಧಿಸಿದವರಲ್ಲಿ ಅಕ್ಷಯ್‌ ರಾಜ್‌ ಒಬ್ಬರು.

8ನೇ ತರಗತಿ ಓದುತ್ತಿರುವಾಗಲೇ ಕೊಕ್ಕೊ ಅಂಕಣಕ್ಕೆ ಕಾಲಿಟ್ಟ ಈತ ಎದುರಾಳಿಗಳ ತಂತ್ರಕ್ಕೆ ಸಿಗದೇ ಓಡುವುದರಲ್ಲಿ ಪ್ರವೀಣನಾದ. 2006ರಲ್ಲಿ ಹಾವೇರಿಯ ರಟ್ಟಿಹಳ್ಳಿಯಲ್ಲಿ ನಡೆದ ರಾಜ್ಯಮಟ್ಟದ ಕಿರಿಯರ ಕೊಕ್ಕೊ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಲ್ಲದೇ ತೃತೀಯ ಸ್ಥಾನ ಗಳಿಸಿ ತನ್ನ ಛಾಪು ಮೂಡಿಸಿ ಭರವಸೆಯ ಆಟಗಾರನಾಗಿ ಹೊರಹೊಮ್ಮಿದ್ದ.

ತರಬೇತುದಾರ ವೈ.ರಮೇಶ್‌ ಗರಡಿಯಲ್ಲಿ ಪಳಗಿರುವ ಇವರು, ತುಮಕೂರಿನಲ್ಲಿ 2008ರಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ‘ಉತ್ತಮ ಓಟಗಾರ’ ಪ್ರಶಸ್ತಿಯೊಂದಿಗೆ ತಂಡಕ್ಕೆ ಪ್ರಥಮ ಸ್ಥಾನವನ್ನು ತಂದುಕೊಟ್ಟರು. ರಾಷ್ಟ್ರಮಟ್ಟದ ಪಂದ್ಯಾವಳಿ ಗಳಲ್ಲೂ ಓಟದ ಚಾಕಚಕ್ಯತೆ ತೋರಿದರು.

ಎಸ್‌ಜಿಎಫ್‌ಐ (ಸ್ಕೂಲ್‌ ಗೇಮ್ಸ್‌ ಫೆಡರೇಶನ್‌ ಆಫ್‌ ಇಂಡಿಯಾ) ಬಿಜಾಪುರದಲ್ಲಿ ಆಯೋಜಿಸಿದ್ದ 53ನೇ ರಾಷ್ಟ್ರೀಯ ಕೊಕ್ಕೊ ಪಂದ್ಯಾವಳಿಯಲ್ಲಿ 10 ವರ್ಷಗಳ ನಂತರ ಕರ್ನಾಟಕಕ್ಕೆ ಚಿನ್ನದ ಪದಕ ದೊರೆಯಲು ಇವರ ಕಾಲ್ಚಳಕ ಮುಖ್ಯ ಕಾರಣ.
ತವರಿನಲ್ಲಿ 2009ರಲ್ಲಿ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜು ಪಂದ್ಯಾವಳಿಯಲ್ಲಿ ಮೊದಲ ಸ್ಥಾನ, ಮಹಾರಾಷ್ಟ್ರದ ಪುಣೆಯಲ್ಲಿ ನಡೆದ 54ನೇ ರಾಷ್ಟ್ರೀಯ ಕೊಕ್ಕೊ ಪಂದ್ಯಾವಳಿ ಉತ್ತಮ ಓಟಗಾರರ ಪ್ರಶಸ್ತಿಯೊಂದಿಗೆ ಬೆಳ್ಳಿ ಪದಕಗಳಿಸಿದರು.

ಬಾಗಲಕೋಟೆಯ ಜಮಖಂಡಿಯಲ್ಲಿ 2010ರಲ್ಲಿ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜು ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನಗಳಿಸಿ, ಸತತ ಮೂರನೇ ಬಾರಿಗೆ ಮಧ್ಯಪ್ರದೇಶದ  ಬುರ್ಹಾನ್‌ಪುರ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಕೊಕ್ಕೊ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ತಂಡದಲ್ಲಿ ಅಕ್ಷಯ್ ಸ್ಥಾನ ಪಡೆದಿದ್ದರು. ಈ ತಂಡ ರಾಷ್ಟ್ರಮಟ್ಟದಲ್ಲಿ ತೃತೀಯ ಸ್ಥಾನ ಪಡೆಯಿತು. ಈ ಸಾಧನೆಗೆ ಅಕ್ಷಯ್ ಪ್ರತಿಭೆ ತನ್ನದೇ ಅದ ಕೊಡುಗೆ ನೀಡಿತು ಎಂದು ಸಹ ಆಟಗಾರರು ನೆನಪಿಸಿಕೊಳ್ಳುತ್ತಾರೆ.

ಪ್ರಸ್ತುತ ಸಿದ್ದಗಂಗಾ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಅಂತಿಮ ಬಿಸಿಎ ವ್ಯಾಸಂಗ ಮಾಡುತ್ತಿರುವ ಅಕ್ಷಯ್‌ ರಾಜ್‌ 2011ರಲ್ಲಿ ತಮಿಳುನಾಡಿನ ಸೇಲಂನಲ್ಲಿ ನಡೆದ ಅಂತರ ವಿ.ವಿ ಕೊಕ್ಕೊ ಪಂದ್ಯಾವಳಿಯಲ್ಲಿ ತುಮಕೂರು ವಿ.ವಿ ಪ್ರತಿನಿಧಿಸಿದ್ದರು. 2012ರಲ್ಲಿ ಆಂಧ್ರ ಪ್ರದೇಶದ ನಾಗಾರ್ಜುನ ವಿ.ವಿ.ಯಲ್ಲಿ ನಡೆದ ಪಂದ್ಯಾವಳಿಯಲ್ಲಿಯೂ ಅವರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT