ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗು, ಸಾವಯವ ಉತ್ಪನ್ನ ಮಾರಾಟ

Last Updated 17 ಫೆಬ್ರುವರಿ 2011, 9:20 IST
ಅಕ್ಷರ ಗಾತ್ರ

ತಿಪಟೂರು: ಸಾವಯವ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿ ವತಿಯಿಂದ ಸೂಕ್ತ ಸ್ಥಳದಲ್ಲಿ ಪ್ರತ್ಯೇಕ ಮಳಿಗೆ ಕಲ್ಪಿಸಲು ಪ್ರಯತ್ನಿಸುವುದಾಗಿ ಎಪಿಎಂಸಿ ಕಾರ್ಯದರ್ಶಿ ಎಸ್.ಬಿ. ನ್ಯಾಮಗೌಡ ತಿಳಿಸಿದರು.

ತಾಲ್ಲೂಕಿನ ಮಾರಗೊಂಡನಹಳ್ಳಿಯಲ್ಲಿ ಜಿಲ್ಲಾ ಸಾವಯವ ಕೃಷಿ ಪರಿವಾರಗಳ ಒಕ್ಕೂಟದ ಅಧ್ಯಕ್ಷ ಬಿ. ಸದಾಶಿವಯ್ಯ ಅವರ ತೋಟದಲ್ಲಿ ಪರಿವಾರದ ಸದಸ್ಯರಿಗೆ ಮಂಗಳವಾರ ಆಯೋಜಿಸಿದ್ದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಕೊಬ್ಬರಿ ವ್ಯಾಪಾರಕ್ಕಷ್ಟೇ ಸೀಮಿತವಾಗಿರುವ ತಿಪಟೂರು ಎಪಿಎಂಸಿಯಲ್ಲಿ ತೆಂಗಿನ ಕಾಯಿ ಮಾರಾಟವನ್ನೂ ಶೀಘ್ರದಲ್ಲಿ ಆರಂಭಿಸಲಾಗುವುದು. ಎಪಿಎಂಸಿಯಲ್ಲಿ ವ್ಯಾಪಕ ಸುಧಾರಣಾ ಕ್ರಮ ಕೆ ಗೊಳ್ಳಲಾಗಿದೆ. ರೆ ತರು ಇದನ್ನು ಅರ್ಥ ಮಾಡಿಕೊಂಡು ವಂಚನೆಯಿಂದ ದೂರವಿರಬೇಕು. ದೋಷಪೂರಿತ ವ್ಯವಸ್ಥೆ ಬಗ್ಗೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಜಿಲ್ಲಾ ಸಾವಯವ ಕೃಷಿ ಒಕ್ಕೂಟದ ಸಂಚಾಲಕ ಎಸ್. ಮೃತ್ಯುಂಜಯ “ಸಾವಯವ ಕೃಷಿಯಲ್ಲಿ ದೇಶಿ ಬೀಜ ಮತ್ತು ದೇಶಿ ಗೋವಿನ ಮಹತ್ವ ಕುರಿತು ಮಾತನಾಡಿ, ಮನುಷ್ಯರನ್ನು ಈಗ ಕಾಡುತ್ತಿರುವ ಶೇ. 80ರಷ್ಟು ರೋಗಗಳು ರಾಸಾಯನಿಕ ಗೊಬ್ಬರ, ರೋಗ ಮತ್ತು ಕೀಟನಾಶಕಗಳ ದುಷ್ಟರಿಣಾಮದಿಂದ ಬಂದಿವೆ. ಭೂಮಿ, ನೀರು, ಗಾಳಿ ವಿಷಯುಕ್ತವಾಗುತ್ತಿವೆ. ಇದರಿಂದ ಮುಕ್ತಿ ಹೊಂದಲು ಮತ್ತು ಸ್ವಸ್ಥ ಕೃಷಿ ಮಾಡಲು ಸಾವಯವ ಪದ್ಧತಿ ಅನುಸರಿಸಬೇಕು ಎಂದರು.

ನಾಟಿ ತಳಿ ಬೀಜ ಮತ್ತು ಜಾನುವಾರಗಳು ಪಾರಂಪರಿಕವಾಗಿ ರೈತನ  ಕೈಹಿಡಿಯುತ್ತಾ ಬಂದಿದ್ದವು. ಹಣ ಗಳಿಕೆಯ ಉದ್ದೇಶದಿಂದ ಅವನ್ನು ಕೆ ಬಿಟ್ಟ ರೈತರು ಈಗ ಪರಿತಪಿಸುತ್ತಿದ್ದಾರೆ. ತೊಂದರೆಯಿಂದ ಮೇಲೆದ್ದು ಬರಲು ಮತ್ತೆ ರೈತರು ದೇಶಿ ತಳಿಗಳಿಗೆ ಮರಳಬೇಕಿದೆ ಎಂದರು.

ಜಿಲ್ಲಾ ಸಾವಯವ ಕೃಷಿ ಪರಿವಾರಗಳ ಒಕ್ಕೂಟದ ಅಧ್ಯಕ್ಷ ಬಿ. ಸದಾಶಿವಯ್ಯ ಮಾತನಾಡಿ, ಅತ್ಯಮೂಲ್ಯ ನೀರನ್ನು ಕೃಷಿಯಲ್ಲಿ ಮಿತವಾಗಿ ಬಳಸಬೇಕು. ಹಸಿರು ಮುಚ್ಚಿಗೆ ಮಾಡುವುದರಿಂದ ತೋಟಗಳು ಕಡಿಮೆ ನೀರು ಕೇಳುತ್ತವೆ. ಸಾವಯವ ಪದ್ಧತಿಯನ್ನೂ ಪಾಲಿಸಿದಂತಾಗುತ್ತದೆ. ತಾವು ಸಾವಯವ ಕೃಷಿಗೆ ಕೈಹಾಕುವ ಮೊದಲು ಎದುರಾಗಿದ್ದ ತೊಡಕು, ತೊಂದರೆ ಈಗ ನಿವಾರಣೆಯಾಗಿವೆ ಎಂದರು.

ಸಿರಿಸಮೃದ್ಧಿ ಸಾವಯವ ಕೃಷಿ ಪರಿವಾರದ ಅಧ್ಯಕ್ಷ  ಪ್ರೊ.ಎನ್. ನಂಜುಂಡಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ತಿರಸ್ಕಾರಕ್ಕೆ ಒಳಗಾಗಿರುವ ಆರಕ, ಸಾವೆ, ನವಣೆ, ಕೊರ್ಲು, ಸಜ್ಜೆ ಮತ್ತಿತರರ ದಾನ್ಯಗಳು ಪೋಷಕಾಂಶಗಳ ಆಗರವಾಗಿದ್ದು, ರೈತರು ಅವನ್ನು ಮರಳಿ ಬೆಳೆಯಲು ಮನಸ್ಸು ಮಾಡಬೇಕು ಎಂದರು.  ಎಂ.ಸಿ. ಈಶ್ವರಪ್ಪ ಸ್ವಾಗತಿಸಿದರು. ಎಚ್.ಎಂ. ಚಂದ್ರಶೇಖರ್ ವಂದಿಸಿದರು. ಸುಧಾಕರ್ ನಿರೂಪಿಸಿದರು.

ಅರ್ಜಿ ಆಹ್ವಾನ:
  ಜಿಲ್ಲೆಯಲ್ಲಿರುವ 19 ಮೊರಾರ್ಜಿ ಮತ್ತು 8 ಕಿತ್ತೂರು ರಾಣಿ ಚೆನ್ನಮ ವಸತಿ ಶಾಲೆಗಳ ಸೇರ್ಪಡೆ ಸಂಬಂಧ ಪ್ರವೇಶ ಪರೀಕ್ಷೆ ಬರೆಯಲು 5ನೇ ತರಗತಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯ ವಿವಿಧೆಡೆ ಇರುವ ಈ ವಸತಿ ಶಾಲೆಗಳಲ್ಲಿ ಉಚಿತ ವಸತಿ, ಊಟ, ಪಠ್ಯ ಪುಸ್ತಕ ಇನ್ನಿತರ ಸೌಲಭ್ಯ ಇರುತ್ತವೆ. ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಪ್ರಸ್ತುತ 5ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆಯಬಹುದು. ಫೆ. 26ರವರೆಗೆ ಅರ್ಜಿ ವಿತರಿಸಲಾಗುವುದು. ಪ್ರವೇಶ ಪರೀಕ್ಷೆ ಅರ್ಜಿ ನಮೂನೆಗಳನ್ನು ತಾಲ್ಲೂಕು ಪಂಚಾಯಿತಿ ಹಿಂದುಳಿದ ವರ್ಗದ ವಿಸ್ತರಣಾಧಿಕಾರಿ, ಬಿಳಿಗೆರೆ ಮೊರಾರ್ಜಿ ವಸತಿ ಶಾಲೆ ಅಥವಾ ಸಮಾಜ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಉಚಿತವಾಗಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಫೆ. 26ರೊಳಗೆ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗೆ ಸಲ್ಲಿಸಬೇಕು. ತಾಲ್ಲೂಕಿನ ವಿದ್ಯಾರ್ಥಿಗಳಿಗೆ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮಾ. 27ರಂದು ಪ್ರವೇಶ ಪರೀಕ್ಷೆ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT