ತುಮಕೂರು: ಗೂಳೂರು- ಹೆಬ್ಬೂರು ಏತನೀರಾವರಿ ಯೋಜನೆಯಡಿ ಕರಡಿಗೆರೆಯಲ್ಲಿ ನಿರ್ಮಿಸಲಾಗಿರುವ ಪಂಪಿಂಗ್ ಸ್ಟೇಷನ್ನಿಂದ ಪ್ರತಿಸೆಕೆಂಡ್ಗೆ 51 ಕ್ಯೂಸೆಕ್ ನೀರು ಹರಿಯಲಿದೆ. ಸೋಮವಾರ ನಾಗವಲ್ಲಿ ಕೆರೆಗೆ ನೀರು ಬಂದು ತಲುಪಿದೆ.ಇಲ್ಲಿ 423 ಎಚ್ಪಿ 4 ಮೋಟರ್ಗಳನ್ನು ಅಳವಡಿಸಲಾಗಿದ್ದು, ಪ್ರತಿ ಮೋಟಾರ್ ಪ್ರತಿ ಸೆಕೆಂಡ್ಗೆ 13 ಕ್ಯೂಸೆಕ್ ನೀರು ಎತ್ತಲಿದೆ.

1500 ಕೆ.ವಿ. ವಿದ್ಯುತ್ ಅಗತ್ಯವಿದ್ದು, ಪ್ರತ್ಯೇಕವಾಗಿ 1600 ಕೆ.ವಿ. ಟ್ರಾನ್ಸ್ಫಾರ್ಮರ್ ಅಳವಡಿಸಲಾಗಿದೆ. ಪಂಪಿಂಗ್ ಸ್ಟೇಷನ್ ಸಮೀಪ ನಿರಂತರವಾಗಿ 5 ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿಂದ ನೀರನ್ನು ಹೊನ್ನುಡಿಕೆ ಹ್ಯಾಂಡ್ಪೋಸ್ಟ್ ಸಮೀಪ ನಿರ್ಮಿಸಲಾಗಿರುವ ನೀರು ಸಂಗ್ರಹ ಕಾರ್ಯಾಗಾರಕ್ಕೆ ಪಂಪ್ ಮಾಡಲಾಗುತ್ತದೆ. ಸುಮಾರು 9.4 ಕಿ.ಮೀ. ದೂರಕ್ಕೆ ನೀರನ್ನು ಪಂಪ್ ಮಾಡಬೇಕಾಗಿದ್ದು, ಅಲ್ಲಿಂದ ಮುಂದೆ ನಾಗವಲ್ಲಿ ಕೆರೆಗೆ 5.4 ಕಿ.ಮೀ. ದೂರ ಗುರುತ್ವಾಕರ್ಷಣ ಶಕ್ತಿಯಿಂದಲೇ ಹರಿಯಲಿದೆ.

ರೂವಾರಿಗಳಿವರು: ಇಡೀ ಯೋಜನೆ ನಿಗದಿತ ಅವಧಿಗಿಂತ ಮೊದಲು ಮುಗಿಯುವಲ್ಲಿ ಅಧಿಕಾರಿಗಳ ಶ್ರಮವೂ ಎದ್ದು ಕಾಣುತ್ತದೆ. ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಮಲ್ಲಪ್ಪ, ಎಇಇ ಪುಟ್ಟಸ್ವಾಮಿ, ಕೃಷ್ಣಪ್ರಸಾದ್ ಶ್ರಮಸಹ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.