ತಿಪಟೂರು: ಪ್ರಸ್ತುತ ರಾಜಕಾರಣದಲ್ಲಿ ಒಂದು ಪ್ರಬಲ ವರ್ಗದ ಸ್ವಾರ್ಥಕ್ಕಾಗಿ ಇತರ ಜನಾಂಗದ ಸ್ವಾಭಿಮಾನಕ್ಕೆ ಕುಂದುಂಟಾಗುತ್ತಿದೆ ಎಂದು ಫ.ಗು. ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್ ಸಂಸ್ಥಾಪಕ ಡಾ.ಬಿ.ಎಂ.ಪಾಟೀಲ ಅಭಿಪ್ರಾಯ ಪಟ್ಟರು.

ನಗರದ ವೀರಶೈವ ಗುರುಕುಲಾ ನಂದಾಶ್ರಮದಲ್ಲಿ ತಮ್ಮಡಿಹಳ್ಳಿ ಮಾಲಿಂಗಮ್ಮ ಮತ್ತು ಶಿವಪ್ಪಶಾಸ್ತ್ರಿ ಸ್ಮರಣಾರ್ಥ ಗುರುವಾರ ಸಂಜೆ ನಡೆದ ವಚನ ಸಾಹಿತ್ಯಕ್ಕೆ ಫ.ಗು.ಹಳಕಟ್ಟಿ ಕೊಡುಗೆ ಕುರಿತ ದತ್ತಿ ಮಾಲಿಕೆಯಲ್ಲಿ ಉಪನ್ಯಾಸ ನೀಡಿದರು. ಬಸವಣ್ಣ ಅವರ ತತ್ವಾದರ್ಶಗಳನ್ನು ರಾಜಕಾರಣಿ ಗಳು ಅಳವಡಿಸಿಕೊಂಡರೆ ಗಾಂಧಿ ಕಂಡ ಗ್ರಾಮ ಸ್ವರಾಜ್ಯದ ಕನಸು ನನಸಾಗು ತ್ತದೆ ಎಂದರು.

ಮೂಢನಂಬಿಕೆ ಹೋಗಲಾಡಿಸಿ ಮೌಲ್ಯಾಧಾರಿತ ಸಮಾಜ ನಿರ್ಮಿಸಲು ವಚನ ಸಾಹಿತ್ಯ ಸಾರ್ವಕಾಲಿಕ ಮದ್ದಾಗಿದೆ. ಆಕ್ಸ್ಫರ್ಡ್ ವಿವಿಯ ವಿಶ್ವದ ದಾರ್ಶನಿಕರ ಪಟ್ಟಿಯಲ್ಲಿ ಬಸವಣ್ಣ ಹೆಸರು ಅಗ್ರಸ್ಥಾನದಲ್ಲಿದೆ. ವಚನಗಳು ಜಗತ್ತಿನ ಶ್ರೇಷ್ಠ ಸಾಹಿತ್ಯ ಎಂದು ಪ್ರತಿಪಾದಿಸಿದರು.

ತಹಶೀಲ್ದಾರ್ ಎ.ಬಿ. ವಿಜಯ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ದರು. ಜಿ.ಪಂ. ಸದಸ್ಯ ತ್ರಿಯಂಬಕ, ತಾ.ಪಂ. ಮಾಜಿ ಅಧ್ಯಕ್ಷೆ ವಸಂತ ಗಂಗಾಧರ್, ನಿವೃತ್ತ ಉಪನ್ಯಾಸಕ ಬಸವಮೂರ್ತಿ ಮಾತನಾಡಿದರು. ಇಮ್ಮಡಿ ಕರಿಬಸವ ದೇಶೀಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ರಘು ಸ್ವಾಗತಿಸಿದರು. ಹರಿಪ್ರಸಾದ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.