ಪಾವಗಡ: ನಿಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವ ಶಾಲೆಗಳ ಗುಣಮಟ್ಟದತ್ತ ಗ್ರಾಮೀಣ ಜನರ ಗಮನ ಹೆಚ್ಚಬೇಕಿದೆ ಎಂದು ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಜಪಾನಂದಜೀ ತಿಳಿಸಿದರು.
ತಾಲ್ಲೂಕಿನ ಎಸ್.ಆರ್.ಪಾಳ್ಯ ಗ್ರಾಮದಲ್ಲಿರುವ ನಿಡಗಲ್ಲು ಗ್ರಾಮಾಂತರ ಶಾಲೆಗೆ ಕುಂಬಾರ ಅನಸೂಯ ಶಿವಕುಮಾರ್ ದಂಪತಿ ಕಟ್ಟಿಸಿಕೊಟ್ಟ ಶಾಲಾ ಕೊಠಡಿ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಲೆಗಳಲ್ಲಿ ಮೂಲಭೂತ ಸೌಲಭ್ಯ, ಗುಣಮಟ್ಟದ ಶಿಕ್ಷಣ ಸಿಗುತ್ತದೆಯೇ ಎಂಬುದನ್ನು ಹತ್ತಿರದಿಂದ ಗಮನಿಸಬೇಕಾದ ಅಗತ್ಯವಿದೆ. ಈ ಕೆಲಸವನ್ನು ಆಯಾಯ ಗ್ರಾಮದ ಯುವ ಸಮುದಾಯ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿ.ಪಂ. ಮಾಜಿ ಸದಸ್ಯ ತಿಮ್ಮಾರೆಡ್ಡಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳಿಲ್ಲದೆ ದನದ ಕೊಟ್ಟಿಗೆಗಳಾಗುತ್ತಿವೆ ಎಂದು ವಿಷಾದಿಸಿದರು.
ಖಾಸಗಿ ಆಸ್ಪತ್ರೆಗಳು ಹಣ ಪೀಕುವ ಕೇಂದ್ರಗಳಾಗುತ್ತಿದ್ದು, ಸಾಮಾನ್ಯ ಜನರ ಬದುಕು ದುರ್ಬರವಾಗುತ್ತಿದೆ. ಈ ಅನ್ಯಾಯವನ್ನು ಪ್ರಶ್ನಿಸುವ, ಪ್ರತಿಭಟಿಸುವ ಪ್ರವೃತ್ತಿಯನ್ನು ಗ್ರಾಮಗಳಲ್ಲಿನ ಯುವ ಜನರು ಬೆಳೆಸಿಕೊಳ್ಳಬೇಕು ಎಂದರು.

ಜಿ.ಪಂ. ಸದಸ್ಯೆ ನಳಿನಿ ಗೋವಿಂದಪ್ಪ, ತಾ.ಪಂ. ಸದಸ್ಯ ಗೋವಿಂದಪ್ಪ, ಶಾಲಾ ಸಮತಿ ಕಾರ್ಯದರ್ಶಿ ಡಿ.ತಿಮ್ಮರಾಯ ಇತರರು ಇದ್ದರು. ಮುಖ್ಯ ಶಿಕ್ಷಕ ನಾಗಪ್ಪ ಸ್ವಾಗತಿಸಿದರು. ಪಿ.ಎಸ್.ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.