ಶಿರಾ: ಬೆಂಗಳೂರಿನ ಹೆಸರಘಟ್ಟದ ಕೋಳಿ ಶೆಡ್ಗಳಲ್ಲಿ ಹಕ್ಕಿ ಜ್ವರ ಹರಡಿರುವ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿ ಬಾಯ್ಲರ್- ಫಾರಂಕೋಳಿಗಳ ಮಾರಾಟ ಕುಸಿದಿದೆ. ಹಳ್ಳಿಗಳಿಗೆ ಕೋಳಿಗಳನ್ನು ವಾಹನದಲ್ಲಿ ತುಂಬಿಕೊಂಡು ಬಂದು ಕಡಿಮೆ ಬೆಲೆಗೆ ಮಾರಲಾಗುತ್ತಿದೆ.

ಕಡಿಮೆ ಬೆಲೆಗೆ ಮನೆಯ ಬಾಗಿಲಿಗೆ ಬಂದ ಕೋಳಿಗಳನ್ನು ಕೊಂಡು ತಿನ್ನದಿರುವುದು ಹೇಗೆಂದು ಹಳ್ಳಿಯ ಮಾಂಸ ಪ್ರಿಯರೆಲ್ಲಾ ಸಾಲ ಸೋಲ ಮಾಡಿ ಕೋಳಿ ಖರೀದಿಸುತ್ತಿದ್ದಾರೆ.

ತಾವೇ ಕೊಳ್ಳಲು ಹೋದಾಗ ಬಾಯ್ಲರ್ ಕೋಳಿ ಬೆಲೆ ಕೆಜಿಗೆ 70-80 ರೂಪಾಯಿ ಇರುತ್ತದೆ. ಮನೆಯ ಮುಂದಕ್ಕೆ ಬಂದು 60 ರೂಪಾಯಿಗೆ ಕೆಜಿ ಮಾರಾಟ ಮಾಡಿದರೆ ಜನ ಕೊಳ್ಳದೇ ಇರುತ್ತಾರೆಯೇ? ರಂಗನಹಳ್ಳಿಯಲ್ಲಿ ಮುಗಿಬಿದ್ದು ಕೊಂಡುಕೊಂಡರು ಎಂದು ಹನುಮೇಗೌಡ ತಿಳಿಸಿದರು.

ತಾಲ್ಲೂಕಿನ ತಾವರೇಕೆರೆ ಹೊಸೂರು ಮಾರ್ಗದಲ್ಲಿ ವಾಹನದಲ್ಲಿ ತುಂಬಿಕೊಂಡು ಬಂದು ಕಡಿಮೆ ಬೆಲೆಗೆ ಕೋಳಿ ಮಾರಾಟ ಮಾಡಿದ ಸುದ್ದಿ ಅಕ್ಕಪಕ್ಕದ ಗ್ರಾಮದವರಿಗೂ ತಿಳಿದು ಅನೇಕರು ಕೊಳ್ಳಲು ದಿನವೂ ಧಾವಿಸಿ ಕಾತರದಿಂದ ಕಾಯುತ್ತಾರೆ.

ಹಳ್ಳಿಗಳಿಗೆ ಕೋಳಿ ತುಂಬಿಕೊಂಡು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಹಳ್ಳಿಗಳ ಅಂಗಡಿಯಲ್ಲಿ ಮಾರುತ್ತಿದ್ದ ಕೋಳಿಗಳಿಗೆ ಬೇಡಿಕೆ ಕುಸಿದಿದೆ. ಆದರೆ ಬೆಲೆ ಮಾತ್ರ ಕಡಿಮೆ ಆಗಿಲ್ಲ. ಬಾಯ್ಲರ್ ಕೋಳಿ ಬೆಲೆ ಕೆಜಿಗೆ 70 ರೂಪಾಯಿ ಇದೆ.

ಹೀಗೇಕೆಂದು ಕೇಳಿದರೆ ಬೆಂಗಳೂರಿನಲ್ಲಿ ಹಕ್ಕಿಜ್ವರ ಬಂದು ಕೋಳಿಫಾರಂ ಸುಟ್ಟುಹಾಕುತ್ತಿದ್ದಾರಂತೆ; ಅಲ್ಲಿಂದ ತಂದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ನಾವು ಇಲ್ಲಿಯೇ ಲೋಕಲ್ನಲ್ಲಿ ತಂದು ಮಾರುತ್ತಿದ್ದೇವೆ. ನಮ್ಮ ಕೋಳಿಗೆ ಯಾವ ಜ್ವರವೂ ಇಲ್ಲ ಎನ್ನುತ್ತಾರೆ ಭೂತಪ್ಪನಗುಡಿ ಕೋಳಿವ್ಯಾಪಾರಿ ಭೂತಮ್ಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.