ಉಡುಪಿ: ಕಾರ್ಕಳದ ಹೊರ ವಲಯದ ಬಂಗ್ಲೆಗುಡ್ಡೆಯಲ್ಲಿ ಗುರುವಾರ ರಾತ್ರಿ ನಡೆದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ದುಷ್ಕರ್ಮಿಗಳ ತಂಡವು ಇಬ್ಬರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಯುವಕನೊಬ್ಬನ ಮೇಲೆಯೂ ಹಲ್ಲೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಬಜರಂಗದಳದ ಸ್ಥಳೀಯ ಮುಖಂಡ ಮಹೇಶ್ ಶೆಣೈ, ಗಣೇಶ್ ಪೂಜಾರಿ ಹಾಗೂ ಅಪರಿಚಿತ ಮೂರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಕಾರ್ಕಳದ ಶೇಖ್ ಮೊಹಸಿನ್ ಎಂಬುವರನ್ನು ಅಡ್ಡಗಟ್ಟಿದ ತಂಡವು ತಲವಾರ್ ಹಾಗೂ ಇತರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪರಿಣಾಮ ಅವರ ತಲೆಗೆ ಪೆಟ್ಟಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದುಷ್ಕರ್ಮಿಗಳು ಬಳಸಿದ ಕಾರಿನ ಸಂಖ್ಯೆಯನ್ನು ಶೇಖ್ ಮೊಹಸಿನ್ ಪೊಲೀಸರಿಗೆ ನೀಡಿದ್ದು, ಪರಿಶೀಲನೆ ನಡೆಸಿದಾಗ ಅದು ಮಹೇಶ್ ಶೆಣೈಗೆ ಸೇರಿದ್ದು ಎಂದು ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಲ್ಮಾನ್ ಎಂಬುವರನ್ನು ಅಡ್ಡಗಟ್ಟಿದ ಇದೇ ತಂಡ ಹಲ್ಲೆ ಮಾಡಿದೆ. ಆದರೆ ಅವರು ತಪ್ಪಿಸಿಕೊಂಡ ಪರಿಣಾಮ ಹೆಚ್ಚಿನ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಎರಡು ಪ್ರಕರಣಗಳಲ್ಲಿ ಕೊಲೆ ಯತ್ನ, ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಮಹಮ್ಮದ್ ಎಂಬುವರ ಮೇಲೆ ಮಹೇಶ್ ಶೆಣೈ ತಂಡ ಹಲ್ಲೆ ಮಾಡಲು ಯತ್ನಿಸಿದೆ. ಅಪಾಯದ ಮುನ್ಸೂಚನೆ ಅರಿತ ಅವರು ವಾಹನವನ್ನು ತಿರುಗಿಸಿಕೊಂಡು ಪರಾರಿಯಾಗಿದ್ದಾರೆ. ಆರೋಪಿಗಳು ಯಾರೆಂದು ಗೊತ್ತಾಗಿದ್ದು, ಅವರ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.