ಬ್ರಹ್ಮಾವರ: ‘ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಹೆಚ್ಚು ಲಾಭ ಗಳಿಸಬಹುದು. ಕೃಷಿ ಇಲ್ಲದೆ ಬದುಕು ಅಸಾಧ್ಯವಾಗಿದ್ದು, ಎಲ್ಲರಿಗೂ ಕೃಷಿ ಶಿಕ್ಷಣ ದೊರೆಯುವ ಅಗತ್ಯತೆ ಇದೆ’ ಎಂದು ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಬಿ. ಹೇಮ್ಲಾ ನಾಯ್ಕ ಹೇಳಿದರು.

ಇಲ್ಲಿನ ಡಿಪ್ಲೊಮಾ ಕೃಷಿ ಮಹಾವಿದ್ಯಾಲಯದ ವತಿಯಿಂದ ಕರ್ಜೆ ಗ್ರಾಮದಲ್ಲಿ ಹಮ್ಮಿಕೊಂಡ ಕೃಷಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಲ್. ಹೇಮಂತ ಕುಮಾರ್ ಹಾಲು ಬೆಂಡೆ ಬೀಜ ವಿತರಿಸಿ, ರೈತರು ತೋಟಗಾರಿಕೆ ಬೆಳೆಗಳಲ್ಲಿ ಬಹು ಮಹಡಿ ಪದ್ಧತಿ ಬೇಸಾಯ ಅನುಸರಿಸುವಂತೆ ಸಲಹೆ ನೀಡಿದರು.

ಗುಚ್ಛ ಗ್ರಾಮದ ಮುಖಂಡರಾದ ಶಂಕರ ಪೂಜಾರಿ, ರತ್ನಾಕರ ಶೆಟ್ಟಿ, ಪ್ರಭಾಕರ ಪೂಜಾರಿ, ಸುಗುಣ ನಾಯ್ಕ ಅವರನ್ನು ಸಹ ಸಂಶೋಧನಾ ನಿರ್ದೇಶಕ ರೇವಣ್ಣ ರೇವಣ್ಣವರ ಪುರಸ್ಕರಿಸಿದರು. ಕರ್ಜೆ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಹರೀಶ ಶೆಟ್ಟಿ ಕೃಷಿ ಡಿಪ್ಲೊಮಾ ವಿದ್ಯಾರ್ಥಿಗಳ ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸಿದರು. ಕೃಷಿ ವಿಜ್ಞಾನಿಗಳಾದ ನವೀನ್ ಎನ್.ಇ, ಚೈತನ್ಯ ಎಚ್.ಎಸ್, ಪ್ರವೀಣ್ ಪಿ.ಎಂ. ತಾಂತ್ರಿಕ ಮಾಹಿತಿ ನೀಡಿದರು.

ಕರ್ಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಪ್ಪಾಳ ಇನಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯೆ ಗೀತಾ ಕಾಡ್ಯ, ಅನಿತಾ ರತ್ನಾಕರ ಶೆಟ್ಟಿ, ಪ್ರಭಾಕರ ಪೂಜಾರಿ, ಗೀತಾ ಪೂಜಾರಿ, ಭುವನೇಶ ನಾಯ್ಕ, ಕಡಂಬಾಡಿ ಕುರ್ಪಾಡಿ ಶಾಲಾ ಮುಖ್ಯಶಿಕ್ಷಕ ವಾದಿರಾಜ, ಮಲ್ಲಿಕಾ, ಕೃಷಿ ಸಖಿ ಶೋಭಾ ಭಾಗವಹಿಸಿದ್ದರು. ಕೃಷಿ ಡಿಪ್ಲೊಮಾ ಪ್ರಾಂಶುಪಾಲ ಕೆ.ವಿ. ಸುಧೀರ ಕಾಮತ್ ಸ್ವಾಗತಿಸಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಬಿ. ಧನಂಜಯ ವಂದಿಸಿದರು. ಮೀನುಗಾರಿಕೆ ತಜ್ಞ ಸದಾನಂದ ಆಚಾರ್ಯ ಬಿ. ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.