ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಾವರ: ಮನೆ ತಾರಸಿ ಮೇಲೆ ತರಹೇವಾರಿ ತರಕಾರಿ

ತರಕಾರಿ ಬೆಳೆಯುವವರಿಗೆ ಕೃಷಿ ವಿಶ್ವವಿದ್ಯಾಲಯ ಮಾರ್ಗದರ್ಶನ
Last Updated 24 ಜೂನ್ 2021, 5:15 IST
ಅಕ್ಷರ ಗಾತ್ರ

ಬ್ರಹ್ಮಾವರ: ಹಿಂದಿನ ಕಾಲದಲ್ಲಿ ಮನೆ ಬಳಕೆಗೆ ಬೇಕಾದಷ್ಟು ತರಕಾರಿಗಳನ್ನು ಮನೆ ಅಂಗಳದಲ್ಲಿ ತಾರಸಿಯಲ್ಲಿ ತರಕಾರಿ ಬೆಳೆಯುತ್ತಿದ್ದರು. ಆದರೆ ಈಗ ಇಂತಹ ಪದ್ಧತಿ ಕ್ರಮೇಣವಾಗಿ ದೂರವಾಗುತ್ತಿವೆ. ಇಂತಹ ಚಟುವಟಿಕೆಗೆ ಮತ್ತೆ ಪ್ರೋತ್ಸಾಹ ನೀಡುವ ಪ್ರಯತ್ನ ನಡೆಯುತ್ತಿದೆ. ಮನೆಯಂಗಳದಲ್ಲಿ ಹಾಗೂ ಮನೆ ತಾರಸಿ ಮೇಲೆ ತರಕಾರಿ ಬೆಳೆಯುವವರಿಗೆ ಮಾರ್ಗದರ್ಶನ ನೀಡಲು ಬ್ರಹ್ಮಾವರದ ಕೃಷಿ ವಿಶ್ವವಿದ್ಯಾಲಯವು ಮುಂದಾಗಿದೆ.

5 ರಿಂದ 10 ಸೆಂಟ್ಸ್ ವಿಸ್ತೀರ್ಣದ ಜಮೀನುಗಳಲ್ಲಿ ತರಕಾರಿ ಬೆಳೆಯುವುದಕ್ಕೆ ಮುಂದಾದರೆ ಉಚಿತ ಮಾಹಿತಿ ಹಾಗೂ ಮಾರ್ಗದರ್ಶನ ಮಾಡಲಾಗುತ್ತದೆ. ಮನೆಯಂಗಳದಲ್ಲಿ ತರಕಾರಿ ಬೆಳೆಯುವ ಪದ್ಧತಿ ಮಾಯವಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ತರಕಾರಿಗೆ ಮಾರು ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ತರಕಾರಿ ಬೆಲೆ ಏರಿಕೆ ಆಗುತ್ತದೆ. ಅಧಿಕ ಬೆಲೆ ನೀಡಿ ವಿಷಯುಕ್ತ ತರಕಾರಿ ಕೊಳ್ಳುವುದಕ್ಕಿಂತ ಮನೆಯಂಗಳದಲ್ಲೇ ತರಕಾರಿ ಬೆಳೆದು ಮನೆಗೆ ಬೇಕಾಗುವಷ್ಟು ತರಕಾರಿ ಬೆಳೆಯುವಂತೆ ಬ್ರಹ್ಮಾವರದ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ.ಧನಂಜಯ ಸಲಹೆ ನೀಡಿದರು.

ಮಳೆಗಾಲದಲ್ಲಿ ಮನೆಯಂಗಳದಲ್ಲಿ ಸುಲಭವಾಗಿ ಬೆಳೆಯಬಹುದಾದ ತರಕಾರಿ ಬೆಂಡೆ. ಉತ್ತಮವಾಗಿ ಬಿಸಿಲು ಬೀಳುವ, ನೀರು ನಿಲ್ಲದ ಯಾವುದೇ ಜಾಗದಲ್ಲಿ ಇದನ್ನು ಬೆಳೆಯಬಹುದು. ಪ್ಲಾಸ್ಟಿಕ್ ಚೀಲದಲ್ಲಿ ಗೊಬ್ಬರ ಹಾಗೂ ಸುಡುಮಣ್ಣು ಮಿಶ್ರಣವನ್ನು ಅರ್ಧದಷ್ಟು ತುಂಬಿಸಿ ಅದರಲ್ಲಿ ಒಂದು ಬೀಜ ಉತ್ತಿ. ಊರು ಬೆಂಡೆ (ಅಸ್ಟಪಟ್ಟಿ)ಬೀಜವನ್ನೇ ಬಳಸಿದಲ್ಲಿ ಫಸಲು. ರೋಗಬಾಧೆ ಕಡಿಮೆ. ಬಿತ್ತನೆಗೆ ಮುನ್ನ 18 ಗಂಟೆ ಕಾಲ ಬೀಜವನ್ನು ನೀರಿನಲ್ಲಿ ಮುಳುಗಿಸಿಡಬೇಕು ಎಂದು ಸಲಹೆ ನೀಡಿದರು.

ಮನೆ ಅಂಗಳ, ತಾರಸಿ ಮೇಲೆ ಕೂಡ ಬೆಳೆಯಬಹುದು: ಬೆಂಡೆ ಸಣ್ಣ ಗಿಡ 5 ಎಲೆ ಆಗುವಾಗ ಅದಕ್ಕೆ ಗೊಬ್ಬರಗಳನ್ನು ಹಾಕಬೇಕು. ಸಾವಯವ ಗೊಬ್ಬರದ ಜತೆಗೆ ಒಂದಿಷ್ಟು ರಾಸಾಯನಿಕ ಗೊಬ್ಬರವನ್ನೂ ಗಿಡದ ಸುತ್ತಲೂ ಹಾಕಬೇಕು. 15 ದಿವಸದಲ್ಲಿ ಮತ್ತೆ ಹಟ್ಟಿ ಗೊಬ್ಬರದೊಂದಿಗೆ ರಸ ಗೊಬ್ಬರವನ್ನು ಗಿಡಕ್ಕೆ ಹಾಕಿ. ನಂತರ ಹೂ ಬಿಟ್ಟ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ನೀಡಿದಲ್ಲಿ ಉತ್ತಮವಾಗಿ ಕಾಯಿ ಬಿಡಲು ಪ್ರಾರಂಭವಾಗುತ್ತದೆ ಎಂದು ಸಲಹೆ ನೀಡಿದರು.

‘ಸುಲಭದಲ್ಲಿ ಹೀರೆ ಬೆಳೆ’
ಹೀರೆಕಾಯಿ ಬೆಳೆಯಲು ಮಾಡಬೇಕಾದ ಪ್ರಮುಖ ಕಾರ್ಯ ಚಪ್ಪರ ನಿರ್ಮಾಣ. ಇದಕ್ಕೆ ಬದಲಾಗಿ ಮನೆ ಸಮೀಪದ ಮಾವು, ಗೇರು ಹಾಗೂ ಇತರ ಮರಗಳಿಗೆ ಹಬ್ಬಿಸಿದರೆ ಚಪ್ಪರದ ಕಾರ್ಯ ಉಳಿಯುತ್ತದೆ. ಹೀರೆಯಲ್ಲೂ ಊರ ತಳಿ ಬೆಳೆದರೆ ಉತ್ತಮ ಇಳುವರಿ ತೆಗೆಯಬಹುದು. ಗದ್ದೆಯಲ್ಲಿ ಬೆಳೆಯುವುದಾದರೆ ಸುತ್ತಲೂ ಕಟ್ಟಿಗೆ ಗೂಟ ಹುಗಿದು, ಒಂದರಿಂದ ಒಂದಕ್ಕೆ ಅಡ್ಡಲಾಗಿ ಸರಿಗೆ, ಬೀಳುಗಳನ್ನು ಕಟ್ಟಿ ಮಾಡಬೇಕಾಗುತ್ತದೆ. ತ್ರಿಕೋನ ಆಕಾರದಲ್ಲಿ 8 ಅಡಿಗೊಮ್ಮೆ ಗುಂಡಿ ಮಾಡಿ 3 ರಿಂದ 4 ಬೀಜ ಹಾಕಬೇಕು ಎಂದು ಎಂದು ಬ್ರಹ್ಮಾವರದ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ.ಧನಂಜಯ ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ 0820-2561011 ಅಥವಾ 9448950250 (ಡಾ.ಧನಂಜಯ) ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT