ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಟ ರೈತ ಧ್ವನಿಯಿಂದ ಜಿಲ್ಲಾಧಿಕಾರಿಗೆ ಮನವಿ

Published : 2 ಅಕ್ಟೋಬರ್ 2024, 3:12 IST
Last Updated : 2 ಅಕ್ಟೋಬರ್ 2024, 3:12 IST
ಫಾಲೋ ಮಾಡಿ
Comments

ಕೋಟ (ಬ್ರಹ್ಮಾವರ): ಭತ್ತಕ್ಕೆ ಬೆಂಬಲ ಬೆಲೆ ನಿಗದಿಗೆ ಕ್ರಮಕ್ಕೆ ಆಗ್ರಹಿಸಿ ಕೋಟ ರೈತ ಧ್ವನಿ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.

ಜಿಲ್ಲೆಯಲ್ಲಿ ಈ ಬಾರಿ ಭತ್ತದ ದರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿರುವ ಹಿನ್ನೆಲೆ, ಖಾಸಗಿ ರೈಸ್‌ಮಿಲ್‌ ಮಾಲೀಕರು ಭತ್ತ ಪ್ರತಿ ಕ್ವಿಂಟಾಲಿಗೆ ₹2,200 ದರ ನಿಗದಿಗೊಳಿಸಿದ್ದಾರೆ. ಈ ಬಾರಿ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಭತ್ತ ಬೆಳೆಯುವ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ತಾವು ತುರ್ತು ಕ್ರಮವಹಿಸಿ, ರೈಸ್‌ಮಿಲ್‌ ಮಾಲೀಕರು, ಸಂಬಂಧಪಟ್ಟ ಅಧಿಕಾರಿಗಳು, ರೈತರ ಸೇರಿಸಿ ಸಭೆ ನಡೆಸಿ ಕಳೆದ ವರ್ಷದಂತೆ ಭತ್ತಕ್ಕೆ ಕ್ವಿಂಟಾಲ್‌ಗೆ ₹2,900 ನಿಗದಿಗೊಳಿಸಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರಿಗೆ ಸಂಘದ ಸದಸ್ಯರು ಮನವಿ ಮಾಡಿದರು.

ರೈತ ಧ್ವನಿ ಅಧ್ಯಕ್ಷ ಜಯರಾಮ ಶೆಟ್ಟಿ, ಪ್ರಮುಖರಾದ ಟಿ. ಮಂಜುನಾಥ ಗಿಳಿಯಾರು, ಮಹೇಶ ಶೆಟ್ಟಿ ಮಣೂರು, ಕೀರ್ತಿಶ್ ಪೂಜಾರಿ ಕೋಟ, ತಿಮ್ಮ ಕಾಂಚನ್ ಹರ್ತಟ್ಟು, ಬಾಬು ಶೆಟ್ಟಿ, ಮಹಾಬಲ ಪೂಜಾರಿ, ಸತೀಶ್ ಶೆಟ್ಟಿ ಗುಳ್ಳಾಡಿ, ಸುಧಾಕರ ಶೆಟ್ಟಿ ಕಾಸನಗುಂದು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT