ಇಲ್ಲಿನ ಪರಿಸರದಲ್ಲಿ ಶನಿವಾರ ರಾತ್ರಿಯಿಂದ ಭಾರಿ ಮಳೆಯಾಗುತ್ತಿದೆ. ಪೈಪ್‌ಲೈನ್ ಅಳವಡಿಸಲು ಫೇಮಸ್ ಅಪಾರ್ಟ್ಮೆಂಟ್‌ನ ಆವರಣ ಗೋಡೆ ಬಳಿಯೇ ಅಗೆಯಲಾಗಿದೆ. ಜೋರಾಗಿ ಸುರಿದ ಮಳೆಗೆ ಅಪಾರ್ಟ್ಮೆಂಟ್ ನಿವಾಸಿಗಳಾದ ಅಬ್ದುಲ್ ಖಾದರ್, ಅಬ್ದುಲ್ ಕಬೀರ್ ಎಂಬವರ ಬೈಕ್ ಮತ್ತು ಶರೀಫ್ ಎಂಬವರ ರಿಕ್ಷಾ ಹಾನಿಗೊಳಗಾಗಿದ್ದು ಯಾವುದೇ ಜೀವಹಾನಿ ಸಂಭವಿಸಿಲ್ಲ.