ಶುಕ್ರವಾರ, ಮೇ 14, 2021
25 °C

ರಸ್ತೆ ಕಾಮಗಾರಿ: ಬಾಳೆಬರೆ ಘಾಟಿನಲ್ಲಿ ವಾಹನ ಸಂಚಾರ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ತೀರ್ಥಹಳ್ಳಿ- ಕುಂದಾಪುರ ರಾಜ್ಯ ಹೆದ್ದಾರಿ-52ರ ಬಾಳೆಬರೆ ಘಾಟಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಏ.22 ರಿಂದ ಜೂನ್ 5ರ ವಾಹನ ಸಂಚಾರ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.

ಪರ್ಯಾಯ ಮಾರ್ಗ: ಕುಂದಾಪುರದಿಂದ ತೀರ್ಥಹಳ್ಳಿ ಹಾಗೂ ಶಿವಮೊಗ್ಗದ ಕಡೆಗೆ ಹೋಗುವ ಲಘು ವಾಹನಗಳು ಕುಂದಾಪುರ-ಹೆಮ್ಮಾಡಿ-ವಂಡ್ಸೆ-ಕೊಲ್ಲೂರು-ನಿಟ್ಟೂರು ಘಾಟಿ ಮಾರ್ಗವಾಗಿ ಅಥವಾ ಕುಂದಾಪುರ-ಕೋಟೇಶ್ವರ-ಹಾಲಾಡಿ-ಆಗುಂಬೆ ಮಾರ್ಗವಾಗಿ ಅಥವಾ ಕುಂದಾಪುರ-ಬಸ್ರೂರು-ಹುಣ್ಸೆಮಕ್ಕಿ-ಹಾಲಾಡಿ-ಆಗುಂಬೆ ಮಾರ್ಗವಾಗಿ ತೀರ್ಥಹಳ್ಳಿ ಹಾಗೂ ಶಿವಮೊಗ್ಗ ತಲುಪಬಹುದು.

ಕುಂದಾಪುರದಿಂದ ತೀರ್ಥಹಳ್ಳಿಗೆ ಹೋಗುವ ಭಾರಿ ವಾಹನಗಳು ಕುಂದಾಪುರ-ಭಟ್ಕಳ-ಹೊನ್ನಾವರ-ಸಾಗರ-ರಿಪ್ಪನ್‌ಪೇಟೆ ಮೂಲಕ ತೀರ್ಥಹಳ್ಳಿ ತಲುಪಬಹುದು. ಕುಂದಾಪುರದಿಂದ ಶಿವಮೊಗ್ಗ ಕಡೆಗೆ ಹೋಗುವ ಭಾರಿ ವಾಹನಗಳು ಕುಂದಾಪುರ-ಭಟ್ಕಳ-ಹೊನ್ನಾವರ-ಸಾಗರ ಮಾರ್ಗವಾಗಿ ಶಿವಮೊಗ್ಗ ತಲುಪಬಹುದು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು